ಹದಿಹರೆಯದ ವರ್ತನೆಗಳು ವಿಶೇಷ ಉಪನ್ಯಾಸ
ವಿದ್ಯಾಗಿರಿ: ಆಕರ್ಷಣೆಯೆನ್ನುವುದು ಪ್ರತಿಯೊಬ್ಬ ವ್ಯಕ್ತಿಗೂ ಇರುವ ಸಹಜಗುಣ. ಆದರೆ ಅದನ್ನು ನಿಗ್ರಹಿಸಿಕೊಳ್ಳುವ ಸಾಮಥ್ರ್ಯವನ್ನು ಮಕ್ಕಳು ಬೆಳೆಸಿಕೊಳ್ಳಬೇಕು ಎಂದು ಆಳ್ವಾಸ್ ಕಾಲೇಜಿನ ಮಹಿಳಾ ಕ್ಷೇಮಪಾಲನಾಧಿಕಾರಿ ಡಾ.ಮಧುಮಾಲಾ ಕೆ. ತಿಳಿಸಿದರು.
ಹದಿಹರೆಯದ ಸಮಯದಲ್ಲಿ ಮಕ್ಕಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಬದಲಾಗ ತೊಡಗುತ್ತಾರೆ. ದೇಹದಲ್ಲಾಗುವ ಶಾರೀರಿಕ ಬದಲಾವಣೆಗಳಿಗೆ ಮಕ್ಕಳು ಹೇಗೆ ವರ್ತಿಸಿ, ಎಚ್ಚರದಿಂದಿರಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿನಿಯರೊಂದಿಗೆ ಹಂಚಿಕೊಂಡರು.
ಪ್ರತಿಯೊಬ್ಬ ಮಕ್ಕಳಲ್ಲಿ ಬುದ್ದಿಮತ್ತೆಯ ಪ್ರಮಾಣವು ಭಿನ್ನವಾಗಿರುತ್ತದೆ. ಬುದ್ದಿವಂತ ಹಾಗೂ ಮಂದಬುದ್ದಿಯವನೆಂದು ಅಳೆಯುವುದರಿಂದ ಮಕ್ಕಳು ನಿರಾಶಿತರಾಗಿ ಖಿನ್ನತೆಗೆ ಒಳಗಾಗುತ್ತಾರೆ. ಇಂದು ಹೆಣ್ಣುಮಕ್ಕಳು ಅತೀ ಬೇಗನೆ ಋತುಮತಿಯಾಗುತ್ತಿರುವುದನ್ನು ನಾವು ಸಾಮಾನ್ಯವಾಗಿ ಗಮನಿಸುತ್ತಿದ್ದೆವೆ. ಆದರಿಂದ ಆಕೆ ಚಿಕ್ಕ ವಯಸ್ಸಿನಲ್ಲೆ ಪಡಬಾರದ ಕಷ್ಟ ಅನುಭವಿಸಬೇಕಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಬದಲಾದ ಆಹಾರ ಪದ್ದತಿ, ಹವಾಮಾನ ಮಾತ್ರವಲ್ಲದೆ ಮಾಧ್ಯಮದ ಪ್ರಭಾವವೂ ಒಳಗೊಂಡಿದೆ. ಈ ಎಲ್ಲಾ ವಿಷಯಗಳೂ ಹಾರ್ಮೋನ್ ಬದಲಾವಣೆಗೆ ಎಡೆಮಾಡಿಕೊಡುತ್ತವೆ. ಆದ್ದರಿಂದ ಮಕ್ಕಳು ಆರೋಗ್ಯಯುತ ಆಹಾರ ಸೇವಿಸುವುದು ಅತ್ಯಗತ್ಯ ಎಂದರು.