ಹರೇಕಳ: ಅಕ್ರಮ ಮರಳುಗಾರಿಕಾ ಅಡ್ಡೆಗೆ ದಾಳಿ
ಉಳ್ಳಾಲ: ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಹರೇಕಳದ ಕಡವಿನ ಬಳಿ ಪ್ರದೇಶಕ್ಕೆ ಕೊಣಾಜೆ ಠಾಣೆ ಪ್ರಭಾರ ಠಾಣಾಧಿಕಾರಿ ಬಾಲಕೃಷ್ಣ ಹೆಚ್.ಎನ್ ನೇತೃತ್ವದ ಪೊಲೀಸ್ ತಂಡ ಹಾಗೂ ಗಣಿ ಹಾಗೂ ಭೂವಿಜ್ಞಾನ ಅಧಿಕಾರಿಗಳು ಎರಡು ನಾಡದೋಣಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನಾಡ ದೋಣಿಗಳಲ್ಲಿ ಮರಳು ಸಾಗಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಹಾಗೂ ಭೂಗಣಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮರಳು ಮಾಫಿಯಾದವರು ದೋಣಿಗಳ ಮೂಲಕ ನದಿಯಿಂದ ಮರಳು ತೆಗೆದು ಸ್ಥಳೀಯ ಮನೆಗಳಿಗೆ ಪೂರೈಸುತ್ತಿದ್ದರು. ದಾಳಿ ವೇಳೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿಎಸ್ ಐ ಪುನೀತ್ ಗಾಂವ್ಕರ್, ವಿನೋದ್,ಸಿಬ್ಬಂದಿಗಳಾದ ಶೈಲೇಂದ್ರ ಮೊದಲಾದವರು ಇದ್ದರು.