Home Mangalorean News Kannada News ಹಲವಾರು ಬಿಜೆಪಿ ನಾಯಕರು ಸದ್ಯವೇ ಕಾಂಗ್ರೆಸಿಗೆ : ರಮಾನಾಥ್ ರೈ

ಹಲವಾರು ಬಿಜೆಪಿ ನಾಯಕರು ಸದ್ಯವೇ ಕಾಂಗ್ರೆಸಿಗೆ : ರಮಾನಾಥ್ ರೈ

Spread the love

ಹಲವಾರು ಬಿಜೆಪಿ ನಾಯಕರು ಸದ್ಯವೇ ಕಾಂಗ್ರೆಸಿಗೆ : ರಮಾನಾಥ್ ರೈ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯು ಕೋಮು ಸೂಕ್ಷವಾಗಿದ್ದು, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕೋಮು ಸಂಘರ್ಷಗಳು ನಡೆಯುತ್ತಿದ್ದು, ಕೆಲವೊಂದು ಸಂಘಟನೆಗಳು ಪ್ರತಿಯೊಂದು ಕ್ರಿಮಿನಲ್ ಚಟುವಟಿಕೆಗೂ ಕೋಮು ಬಣ್ಣ ಹಚ್ಚುವ ಕೆಲಸ ನಡೆಸಿ ಜನರಲ್ಲಿ ಭೀತಿಯನ್ನು ಹುಟ್ಟಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥರೈ ನಗರದ ಸರ್ಕಿಟ್ ಹೌಸ್ ನಲ್ಲಿ ಕರೆದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ತಿಕ್ ರಾಝ್ ಕೊಲೆಯ ಬಳಿಕ ಸಂಘಪರಿವಾರ ಹಾಗೂ ಇತರ ಸಂಘಟನೆಗಳು ಕೋಮು ಬಣ್ಣ ನೀಡಲು ಪ್ರಯತ್ನಿಸಿದವು. ಮತೀಯ ಸೂಕ್ಷ್ಮ ಜಿಲ್ಲೆಯಾದ ದಕ ದಲ್ಲಿ ಇಂತಹ ಪ್ರಕರಣದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಬಕೆಲವೊಂದು ಸಂಘಟನೆಗಳು ಆಧಾರರಹಿತ ಹೇಳಿಕೆಗಳನ್ನು ನೀಡಿದರು. ಆದರೆ ಪೋಲಿಸರು ಸರಿಯಾದ ಆರೋಪಿಗಳನ್ನು ಬಂಧಿಸುವ ಮೂಲಕ ಪ್ರಕರಣಕ್ಕೆ ತೆರೆ ಎಳೆದಿದ್ದಾರೆ. ಕರೋಪಾಡಿ ಅಬ್ದುಲ್ ಜಲೀಲ್ ಮತ್ತು ಕಾರ್ತಿಕ್ ರಾಜ್ ಹತ್ಯೆ ಪ್ರಕರಣದಲ್ಲಿ ಪೋಲಿಸರು ನೈಜ ಆರೋಪಿಗಳನ್ನು ಬಂಧಿಸಿದ್ದಾರೆ ಅವರ ಕಾರ್ಯಾಚರಣೆಗೆ ಅಭಿನಂದನೆ ಸಲ್ಲಿಸುವುದಾಗಿ ಸಚಿವರು ಹೇಳಿದರು.

ಗೃಹ ಸಚಿವ ಜಿ ಪರಮೇಶ್ವರ್ ಅವರು ಮಂಗಳವಾರ ಮಂಗಳೂರಿಗೆ ಆಗಮಿಸಲಿದ್ದು, ಈ ಸಂದರ್ಭ ಕರೋಪಾಡಿಗೆ ಭೇಟಿ ನೀಡಲಿದ್ದಾರೆ.

ಬಿಜೆಪಿ ನಾಯಕ ಅನಂತ ಕುಮಾರ್ ಕಾಂಗ್ರೆಸಿನಲ್ಲಿ ಚುನಾವಣೆಗೆ ಸ್ಪರ್ಧಿಸಲು ಸರಿಯಾದ ನಾಯಕರಿಲ್ಲ ಎಂದು ಹೇಳಿದ್ದಾರೆ ಆದರೆ ಅವರು ಮರೆತಿದ್ದಾರೆ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು, ಜಿಲ್ಲೆಯಲ್ಲಿ 2 ಮಂತ್ರಿಗಳನ್ನು ಹೊಂದಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ನಾಯಕರಿದ್ದು, ಯುವ ನಾಯಕರು ಪಕ್ಷವನ್ನು ಬಲಪಡಿಸಲಿದ್ದಾರೆ. ಬಿಜೆಪಿ ಪಕ್ಷ ಒಮ್ಮೆ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಿ ಆ ಸಮಯ ಹಲವಾರು ಮಂದಿ ಕಾಂಗ್ರೆಸಿಗೆ ಸೇರಲಿದ್ದಾರೆ ಎಂದು ಸಚಿವರು ಹೇಳಿದರು.

ಮೇಯರ್ ಕವಿತಾ ಸನಿಲ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಇಬ್ರಾಹಿಂ ಕೋಡಿಜಾಲ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love

Exit mobile version