ಹಲವು ಭಾಗ್ಯಗಳ ನಡುವೆ ಸಿಎಂ ಮಾತ್ರ ಕಿಸ್ ಭಾಗ್ಯದ ಫಲಾನುಭವಿ : ಎಬಿವಿಪಿ
ಮಂಗಳೂರು: ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ಸಂಬಂಧಿಸಿ ಮಾಜಿ ಗೃಹ ಸಚಿವ ಕೆ ಜೆ ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕೀರ್ತನ್ ಅವರು ಪೋಲಿಸ್ ಅಧಿಕಾರಿಗಳು ಪ್ರತಿನಿತ್ಯ ರಾಜಕೀಯ ವ್ಯಕ್ತಿಗಳಿಂದ ಒತ್ತಡಕ್ಕೆ ಒಳಗಾಗುತ್ತಿದ್ದು, ಇದರಿಂದ ಕೆಲವು ಪೋಲಸರು ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವಿಫಲಾರಾದಾಗ ಆತ್ಮಹತ್ಯೆ, ರಾಜೀನಾಮೆಯ ದಾರಿ ಹಿಡಿಯುತ್ತಾರೆ. ರಾಜ್ಯದ ಮುಖ್ಯಮಂತ್ರಿ ಹಾಗೂ ಇತರ ಮಂತ್ರಿಗಳು ಪೋಲಿಸ್ ಅಧಿಕಾರಿಗಳ ಮೇಲೆ ಒತ್ತಡ ಹೇರುವುದರೊಂದಿಗೆ ಕಿರುಕುಳ ನೀಡುತ್ತಾರೆ ಎಂಬ ಆರೋಪಗಳು ಸದಾ ಕೇಳಿ ಬಂದಿವೆ. ತನ್ನ ಗೆಳೆಯನ್ನು ರಕ್ಷಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಜಿಲ್ಲಾಧಿಕಾರಿ ಪ್ರಕರಣ ದಾಖಲಿಸದಂತೆ ಒತ್ತಾಯ ಹೇರಿದರು. ಕಾರ್ಮಿಕ ಸಚಿವ ಪರಮೇಶ್ವರ ನಾಯ್ಕ್ ಕಿರುಕುಳದ ಪರಿಣಾಮ ಡಿವೈಎಸ್ಪಿ ಅನುಪಮಾ ಶೆಣೈ ತನ್ನ ಹುದ್ದೆಗೆ ರಾಜೀನಾಮೆ ನೀಡಿದರು. ಇತ್ತೀಚಿಗೆ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡುವ ವೇಳೆ ನೇರವಾಗಿ ಮಾಜಿ ಗೃಹ ಸಚಿವ ಕೆ ಜೆ ಜಾರ್ಜ್ ಹಾಗೂ ಇತರ ಇಬ್ಬರು ಪೋಲಿಸ್ ಅಧಿಕಾರಿಗಳ ಪಾತ್ರ ಇದೆ ಎಂದು ಟಿವಿಯೊಂದಕ್ಕೆ ಹೇಳಿ ಸತ್ತಿದ್ದಾರೆ. ಆದರೂ ಕೂಡ ಇದುವರೆಗೂ ಕೆ ಜೆ ಜಾರ್ಜ್ ವಿರುದ್ದ ಯಾವುದೇ ಕ್ರಮ ಕೈಗೊಂಡಿಲ್ಲ. ಒರ್ವ ಪೋಲಿಸ್ ಅಧಿಕಾರಿ ಕಿರುಕುಳದಿಂದ ಸಾವನಪ್ಪಿದ್ದರೆ ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹಲವಾರು ಭಾಗ್ಯಗಳನ್ನು ಪರಿಚಯಿಸಿದ್ದು, ರಾಜ್ಯದ ಸಾಮಾನ್ಯ ಪ್ರಜೆಗೆ ಉಪಯೋಗವಾಗಿಲ್ಲ. ಆದರೂ ಸಿದ್ದರಾಮಯ್ಯ ಮಾತ್ರ ಕಿಸ್ ಭಾಗ್ಯದ ಪ್ರಯೋಜನ ಪಡೆದಿದ್ದಾರೆ ಎಂದರು.
ಇನ್ನೋರ್ವ ನಾಯಕ ಚೇತನ್ ಪಡೀಲ್ ಮಾತನಾಡಿ ಸರಕಾರ ಪೋಲಿಸ್ ಅಧಿಕಾರಿಗಳ ಆತ್ಮಹತ್ಯೆಯನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪೋಲಿಸ್ ಅಧಿಕಾರಿ ಗಣಪತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ನೇರವಾಗಿ ಮಾಜಿ ಗೃಹ ಸಚಿವ ಕೆ ಜೆ ಜಾರ್ಜ್, ಹಾಗೂ ಇತರ ಇಬ್ಬರ ಹೆಸರನ್ನು ನೀಡಿ ಸತ್ತಿದ್ದಾರೆ ಆದರೂ ರಾಜ್ಯದ ಮುಖ್ಯಮಂತ್ರಿ ಜಾರ್ಜ್ ಅವರನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ. ಡಿಕೆ ರವಿ ಆತ್ಮಹತ್ಯೆ ಪ್ರಕರಣದಲ್ಲೂ ಕೂಡ ಜಾರ್ಜ್ ಹೆಸರು ಕೇಳಿಬಂದಿತ್ತು. ಮುಖ್ಯಮಂತ್ರಿಗಳು ಜಾರ್ಜ್ ಅವರನ್ನು ರಕ್ಷಿಸುವ ಕೆಲಸವನ್ನು ಬಿಡಬೇಕು ಅಲ್ಲದೆ ಒಂದು ವೇಳೆ ಜಾರ್ಜ್ ತನ್ನ ಹುದ್ದೆಗೆ ರಾಜೀನಾಮೆ ನೀಡದೆ ಹೋದಲ್ಲಿ ಮುಖ್ಯಮಂತ್ರಿಗಳು ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.