Home Mangalorean News Kannada News ಹಳೆ ಬಂದರು ಕಾರ್ಮಿಕರ ಹೋರಾಟ ಕಡೆಗಣಿಸಬೇಡಿ – ಸುನಿಲ್ ಕುಮಾರ್ ಬಜಾಲ್ 

ಹಳೆ ಬಂದರು ಕಾರ್ಮಿಕರ ಹೋರಾಟ ಕಡೆಗಣಿಸಬೇಡಿ – ಸುನಿಲ್ ಕುಮಾರ್ ಬಜಾಲ್ 

Spread the love

ಹಳೆ ಬಂದರು ಕಾರ್ಮಿಕರ ಹೋರಾಟ ಕಡೆಗಣಿಸಬೇಡಿ – ಸುನಿಲ್ ಕುಮಾರ್ ಬಜಾಲ್ 
ಮಂಗಳೂರು: ಕಾರ್ಮಿಕರ ನ್ಯಾಯಯುತವಾದ ಬೇಡಿಕೆ ಈಡಿರೇಕೆಗಾಗಿ ಹಮಾಲಿ ಕಾರ್ಮಿಕರ ಹೋರಾಟವನ್ನು ನಿರ್ಲಕ್ಷಿಸುವ ಮನೋಭಾವನೆಯಿಂದ ಹೊರ ಬಂದು ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು.ಕಾರ್ಮಿಕರು ಮುಷ್ಕರಕ್ಕೆ ಮುಂದಾಗುವ ಮೊದಲು ಕಾರ್ಮಿಕರ ಬೇಡಿಕೆ ಇತ್ಯರ್ಥ ಮಾಡಿ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಎಚ್ಚರಿಕೆ ನೀಡಿದ್ದಾರೆ.
ಅವರು  ಬಂದರು ಸಗಟು ಮಾರುಕಟ್ಟೆಯ ಹಮಾಲಿ ಕಾರ್ಮಿಕರ ಕೂಲಿ ಪರಿಷ್ಕರಣೆ ಮಾಡದೆ ವಿಳಂಬ ಮಾಡುತ್ತಿರುವ ವರ್ತಕರ ಧೋರಣೆ ಖಂಡಿಸಿ, ಕಾರ್ಮಿಕರ ಎಲ್ಲಾ ನ್ಯಾಯಯುತವಾದ ಬೇಡಿಕೆ ಈಡೇರಿಸಲು ಆಗ್ರಹಿಸಿ
ಹಳೆ ಬಂದರು ಕಾರ್ಮಿಕರ ಕಟ್ಟೆ ಬಳಿ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಒಂದು ದಿನದ ನಿರಾಹಾರ ಧರಣಿ ಸತ್ಯಾಗ್ರಹ ಉದ್ಘಾಟಿಸಿ ಮಾತನಾಡುತ್ತಿದ್ದರು.
ಜಿಲ್ಲೆಯ ಆರ್ಥಿಕತೆಯ  ಜೀವನಾಡಿ ಇರುವುದೇ ಹಳೆಬಂದರಿನಲ್ಲಿ ಇಲ್ಲಿಯ ಕಾರ್ಮಿಕರಿಗೆ ಅನ್ಯಾಯ ಸಹಿಸಲು ಸಾಧ್ಯವಿಲ್ಲ. ಬಂದರು ಹಮಾಲಿ ಕಾರ್ಮಿಕರು ಏಕಾಂಗಿಯಲ್ಲ  ಜಿಲ್ಲೆಯ ಕಾರ್ಮಿಕ ವರ್ಗದ ಬೆಂಬಲ ನಿಮಗೆ ಸಿಗಲಿದೆ ಎಂದು ಹೋರಾಟಕ್ಕೆ ಸಹಕಾರದ ಭರವಸೆ ನೀಡಿದರು.
ಸಂಘದ ಅಧ್ಯಕ್ಷರಾದ ವಿಲ್ಲಿ ವಿಲ್ಸನ್ ಮಾತನಾಡಿ ವರ್ತಕರು ಕಾರ್ಮಿಕರ ಮಧ್ಯೆ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ  . ಆದರೆ ಬಂದರಿನ ಹಮಾಲಿ ಕಾರ್ಮಿಕರ ಐಕ್ಯತೆ ಮುರಿಯಲು ಸಾಧ್ಯವಿಲ್ಲ  ವರ್ತಕರು ಹಠಮಾರಿತನವನ್ನು ಕೈಬಿಟ್ಟು ಹೊಸ ಒಪ್ಪಂದ ಏರ್ಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ  ಬಿ.ಕೆ ಇಮ್ತಿಯಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಉಪಾಧ್ಯಕ್ಷರಾದ ಹಸನ್ ಮೋನು ಸ್ವಾಗತಿಸಿದರೆ, ಕೋಶಾಧಿಕಾರಿ ಹರೀಶ್ ಕೆರೆಬೈಲ್ ವಂದಿಸಿದರು.
ಸಂಘದ ಮುಖಂಡರಾದ ಹಂಝ ಜಪ್ಪಿನಮೊಗರು, ಸಿದ್ದೀಕ್ ಬೆಂಗರೆ, ಮೊಯಿದೀನ್ ಕಲ್ಕಟ್ಟ, ಮಾದವ ಕಾವೂರು, ಬಷೀರ್, ಮೊಹಮ್ಮದ್ ಇರಾ, ಅಸ್ಲಾಂ ಬೆಂಗರೆ, ಫಾರೂಕ್ ಉಳ್ಳಾಲ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Spread the love

Exit mobile version