Home Mangalorean News Kannada News ಹಳ್ಳಿ ಜನರ ನಡುವೆ ಗದ್ದೆಯಲ್ಲಿ ಕುಳಿತು ಯಕ್ಷಗಾನ ವೀಕ್ಷಣೆ ನಡೆಸಿದ ಸಚಿವೆ ಡಾ.ಜಯಮಾಲ!

ಹಳ್ಳಿ ಜನರ ನಡುವೆ ಗದ್ದೆಯಲ್ಲಿ ಕುಳಿತು ಯಕ್ಷಗಾನ ವೀಕ್ಷಣೆ ನಡೆಸಿದ ಸಚಿವೆ ಡಾ.ಜಯಮಾಲ!

Spread the love

ಹಳ್ಳಿ ಜನರ ನಡುವೆ ಗದ್ದೆಯಲ್ಲಿ ಕುಳಿತು ಯಕ್ಷಗಾನ ವೀಕ್ಷಣೆ ನಡೆಸಿದ ಸಚಿವೆ ಡಾ.ಜಯಮಾಲ!

ಉಡುಪಿ: ರಾತ್ರಿ ವೇಳೆ ಸಚಿವರು ಹಳ್ಳಿ ಜನರ ಜೊತೆ ಗದ್ದೆಯಲ್ಲಿ ಕುಳಿತು ಕರಾವಳಿಯ ಹೆಸರಾಂತ ಕಲೆಯಾದ ಯಕ್ಷಗಾನವನ್ನು ವೀಕ್ಷಿಸಿದ ಘಟನೆ ಬಾರ್ಕೂರಿನಲ್ಲಿ ನಡೆಯಿತು.

ಶುಕ್ರವಾರದಂದು ಬಾರ್ಕೂರಿನಲ್ಲಿ ಅಳುಪೋತ್ಸವ ಕಾರ್ಯಕ್ರಮ ಉದ್ಘಾಟನಾ ಸಭೆಯಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಭಾಗವಹಿಸಿದ್ದು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಅಳುಪೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಚಿವೆ ವೀಕ್ಷಿಸಿದರು. ಈ ಕಾರ್ಯಕ್ರಮಗಳನ್ನು ವೀಕ್ಷಿಸಿ ರಾತ್ರಿ ಹತ್ತು ಘಂಟೆ ಸುಮಾರಿಗೆ ಸ್ಥಳದಿಂದ ಹೊರಟಿದ್ದರು. ಬಾರ್ಕೂರಿನಿಂದ ಬ್ರಹ್ಮಾವರ ಮಾರ್ಗವಾಗಿ ಸಾಗುವಾಗ ರಸ್ತೆ ಬದಿಯ ಗದ್ದೆಯಲ್ಲಿ ಯಕ್ಷಗಾನ ನಡೆಯುತ್ತಿರುವುದು ನೋಡಿದ ತಕ್ಷಣ ಸಚಿವರು ತನ್ನ ಪ್ರಯಾಣವನ್ನು ನಿಲ್ಲಿಸಿ ಯಕ್ಷಗಾನದ ಗದ್ದೆಯತ್ತ ನಡೆದರು.

ರಾತ್ರಿ ವೇಳೆಯಲ್ಲಿ ಅಚಾನಕವಾಗಿ ಸಚಿವರು ಬಂದಿರುವುದನ್ನು ಗಮನಿಸಿದ ಗ್ರಾಮಸ್ಥರಿಗೆ ಇನ್ನಿಲ್ಲದ ಖುಷಿಯಾಯಿತು. ಸ್ಥಳೀಯ ಗ್ರಾಮಸ್ಥರ ಜೊತೆಗೆ ಕುಳಿತು ಸಚಿವರು ಯಕ್ಷಗಾನವನ್ನು ಸುಮಾರು ಒಂದೂವರೆ ತಾಸು ವೀಕ್ಷಿಸಿದರು .ಹಾಲಾಡಿ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯರು ಪ್ರದರ್ಶನ ಮಾಡಿದ ಶ್ರೀ ಕೃಷ್ಣಾರ್ಜುನ ಯಕ್ಷಗಾನ ಪ್ರಸಂಗವನ್ನು ಸಚಿವರು ವೀಕ್ಷಿಸಿದರು.

ಯಕ್ಷಗಾನ ವೀಕ್ಷಣೆ ಅಚಾನಕವಾಗಿ ಬಂದ ಸಚಿವರನ್ನು ಪ್ರಸಂಗದ ಮಧ್ಯಂತರದಲ್ಲಿ ವೇದಿಕೆಗೆ ಆಹ್ವಾನಿಸಿ ಕಲಾವಿದರು ಹಾಗೂ ಯಕ್ಷಗಾನ ಮಂಡಳಿಯವರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಸಚಿವೆ ಡಾ.ಜಯಮಾಲ ಅವರು ಮಾತನಾಡಿ, ತಾನು ಬಾಲ್ಯದಲ್ಲಿ ಪೋಷಕರ ಜೊತೆಗೆ ನೆಲದಲ್ಲಿ ಕುಳಿತು ಯಕ್ಷಗಾನ ನೋಡುತ್ತಿದ್ದ ನೆನಪನ್ನು ಹಂಚಿಕೊಂಡರು.

ಇದೇ ವೇಳೆ ಮಾತನಾಡಿದ ಯಕ್ಷಗಾನ ಕಲಾವಿದರು, ಸ್ಥಳೀಯ ಮೇಳಗಳ ಯಕ್ಷಗಾನಕ್ಕೆ ಜನತೆ ಪ್ರೋತ್ಸಾಹ ನೀಡಬೇಕೆಂದು ಆಶಯ ವ್ಯಕ್ತಪಡಿಸಿದರು.


Spread the love

Exit mobile version