ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ
ಮಂಗಳೂರು : ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿ ಬೆಳೆ ವಿಮೆ ಕಾರ್ಯಕ್ರಮವನ್ನು ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ (WಃಅIS) ಕಾರ್ಯಕ್ರಮದಲ್ಲಿ 2018 ಮುಂಗಾರು ಹಂಗಾಮಿಗೆ ಅನ್ವಯಿಸಿ ಕರ್ನಾಟಕ ಸರಕಾರ ಆದೇಶ ಹೊರಡಿಸಿದೆ. ಈ ಯೋಜನೆಯು ಕೇಂದ್ರ ಸರಕಾರ ನೀಡಿರುವ ಮಾನದಂಡಗಳ ಆಧಾರದಲ್ಲಿ ತೋಟಗಾರಿಕೆ ರೈತರಿಗೆ ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಉಂಟಾದಲ್ಲಿ ವಿಮಾ ನಷ್ಟ ಪರಿಹಾರವನ್ನು ಪಡೆಯಲು ಅವಕಾಶವನ್ನು ಕಲ್ಪಿಸುತ್ತದೆ. ಈ ಯೋಜನೆಯನ್ನು ಮುಂಗಾರು ಹಂಗಾಮಿಗೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ನಗರ ಸ್ಥಳೀಯಾಡಳಿತ ಸಂಸ್ಥೆ ಹಾಗೂ ಎಲ್ಲಾ 231 ಗ್ರಾಮಪಂಚಾಯತ್‍ಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಸದರಿ ಯೋಜನೆಯಡಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ 2018 ನೇ ಮುಂಗಾರು ಹಂಗಾಮಿಗೆ ಅಡಿಕೆ ಮತ್ತು ಕರಿಮೆಣಸು ಬೆಳೆಗಳನ್ನು ಅಧಿಸೂಚಿಸಿ ಆದೇಶ ಹೊರಡಿಸಲಾಗಿದೆ. 2018ರ ಮುಂಗಾರು ಹಂಗಾಮಿಗೆ ಸಂಬಂಧಿಸಿ ವಿಮಾ ಕಂತು ಪಾವತಿಸಲು ದಿನಾಂಕ 30-06-2018 ಅಂತಿಮ ದಿನವಾಗಿರುತ್ತದೆ. ಈ ಯೋಜನೆಯು ಅಧಿಸೂಚಿತ ಬೆಳೆಗಳಿಗೆ ಬ್ಯಾಂಕ್‍ಗಳಿಂದ (ರಾಷ್ಟ್ರೀಕೃತ ಬ್ಯಾಂಕ್/ ಖಾಸಗಿ/ ಸಹಕಾರಿ ಬ್ಯಾಂಕ್‍ಗಳು) ಬೆಳೆ ಸಾಲ ಪಡೆದಿರುವ ರೈತರಿಗೆ ಕಡ್ಡಾಯವಾಗಿರುತ್ತದೆ ಹಾಗೂ ಬೆಳೆ ಸಾಲ ಹೊಂದಿಲ್ಲದ ರೈತರಿಗೆ ಐಚ್ಚಿಕವಾಗಿರುತ್ತದೆ. ಈ ಯೋಜನೆಯಡಿ ತೋಟಗಾರಿಕೆ ರೈತರು ಅಧಿಸೂಚಿತ ಬೆಳೆಗಳಿಗೆ ಸಂಬಂಧಿಸಿ ಸಾಲ ಪಡೆದುಕೊಂಡಿರುವ ಬ್ಯಾಂಕ್‍ಗಳ ಮೂಲಕ ಹಾಗೂ ಸಾಲ ಪಡೆಯದಿರುವ ರೈತರು ಉಳಿತಾಯ ಖಾತೆಯನ್ನು ಹೊಂದಿರುವ ಬ್ಯಾಂಕ್‍ಗಳ ಮೂಲಕ ವಿಮಾ ಕಂತುಗಳನ್ನು ಪಾವತಿಸಿ ಯೋಜನೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಯೋಜನೆಯಡಿ ಅಧಿಸೂಚಿತ ತೋಟಗಾರಿಕೆ ಬೆಳೆಗಳನ್ನು 2018ರ ಮುಂಗಾರು ಹಂಗಾಮಿಗೆ ಸಂಬಂಧಿಸಿ ಗ್ರಾಮ ಪಂಚಾಯತ್ (Uಟಿiಣ ಂಡಿeಚಿ oಜಿ Iಟಿsuಡಿಚಿಟಿಛಿe) ಮಟ್ಟದಲ್ಲಿ ಅನುಷ್ಠಾನಗೊಳಿಸಲು ಕರ್ನಾಟಕ ಸರಕಾರಿ ಆದೇಶ ಸಂ: ತೋಇ 81 ತೋಸವಿ 2018 ಬೆಂಗಳೂರು ದಿನಾಂಕ 26-05-2018 ರ ಮೂಲಕ ಅಧಿಸೂಚಿಸಲಾಗಿದೆ. ಈ ಆದೇಶದಂತೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಡಿಕೆ ಹಾಗೂ ಕರಿಮೆಣಸು ಬೆಳೆಗಳನ್ನು ಮುಂಗಾರು ಹಂಗಾಮಿಗೆ ಸೇರ್ಪಡೆಗೊಳಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ SಃI ಉeಟಿeಡಿಚಿಟ Iಟಿsuಡಿಚಿಟಿಛಿe ಅomಠಿಚಿಟಿಥಿ ರವರನ್ನು ವಿಮಾ ಸಂಸ್ಥೆಯಾಗಿ ಹಂಚಿಕೆ ಮಾಡಲಾಗಿದೆ. ಈ ಯೋಜನೆಯ ಅನುಸಾರ ಬೆಳೆ ಸಾಲ ಪಡೆಯುವ ಹಾಗೂ ಬೆಳೆ ಸಾಲ ಹೊಂದಿಲ್ಲದ ರೈತರಿಗೆ ಅಧಿಸೂಚಿತ ಬೆಳೆಗಳಿಗೆ ಈ ಕೆಳಗಿನಂತೆ ವಿಮಾ ಕಂತನ್ನು ಪಾವತಿಸಿ ವಿಮೆಯನ್ನು ಹೊಂದಬಹುದಾಗಿದೆ.
ಅಡಿಕೆಬೆಳೆ – ಪ್ರತೀ ಹೆಕ್ಟೆರ್‍ಗೆ ವಿಮಾ ಮೊತ್ತ ರೂ.ಗಳಲ್ಲಿ 28000, ಪ್ರತೀ ಹೆಕ್ಟೆರ್‍ಗೆ ವಿಮಾ ಕಂತು ರೂ.ಗಳಲ್ಲಿ 50688, ರೈತರು ಪಾವತಿಸಬೇಕಾದ ವಿಮಾ ಕಂತು (ಶೇ.5) ರೂ.ಗಳಲ್ಲಿ 6400, ಸರ್ಕಾರ ಭರಿಸುವ ವಿಮಾ ಕಂತು ರೂ. 44288.
ಕರಿಮೆಣಸು – ಪ್ರತೀ ಹೆಕ್ಟೆರ್‍ಗೆ ವಿಮಾ ಮೊತ್ತ ರೂ.ಗಳಲ್ಲಿ 47000, ಪ್ರತೀ ಹೆಕ್ಟೆರ್‍ಗೆ ವಿಮಾ ಕಂತು ರೂ.ಗಳಲ್ಲಿ 12408, ರೈತರು ಪಾವತಿಸಬೇಕಾದ ವಿಮಾ ಕಂತು (ಶೇ.5) ರೂ.ಗಳಲ್ಲಿ 2350, ಸರ್ಕಾರ ಭರಿಸುವ ವಿಮಾ ಕಂತು ರೂ. 10058.
ಈ ಯೋಜನೆಯಡಿ ಸರ್ಕಾರದ ಪಾಲನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ ಶೇ. 50 ರ ಅನುಪಾತದಲ್ಲಿ ಭರಿಸುತ್ತದೆ. ಈ ಹವಾಮಾನ ಆಧಾರಿತ ವಿಮಾ ಯೋಜನೆಯಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಏSಓಆಒಅ) ಆಯಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಮಳೆ ಮಾಪನ ಮತ್ತು ಹವಾಮಾನ ಮಾಪನ ಕೇಂದ್ರಗಳು, ಭಾರತೀಯ ಹವಾಮಾನ ಇಲಾಖೆಯ ಕೇಂದ್ರಗಳು, ಕೃಷಿ ವಿಶ್ವವಿದ್ಯಾನಿಲಯಗಳು, ರಾಜ್ಯ ಜಲ ಸಂಪನ್ಮೂಲ ಅಭಿವೃಧ್ಧಿ ಸಂಸ್ಥೆಯ ಕೇಂದ್ರಗಳಲ್ಲಿ ದಾಖಲಿಸಲಾದ ಹವಾಮಾನ ಅಂಶಗಳ ಮಾಹಿತಿಯ ಆಧಾರದಲ್ಲಿ ಬೆಳೆ ವಿಮೆ ನಷ್ಟ ಪರಿಹಾರವನ್ನು ಇತ್ಯರ್ಥ ಪಡಿಸಲಾಗುವುದು. ಬೆಳೆ ವಿಮೆಗಳಿಗೆ ಸಂಬಂಧಿಸಿ ಅಧಿಸೂಚಿತ ಬೆಳೆಗಳ ಖಿeಡಿm Sheeಣ ಗಳನ್ನು ಜಿಲ್ಲಾ ಮಟ್ಟದಲ್ಲಿ ಮಾನ್ಯ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯ ತಾಂತ್ರಿಕ ಸಮಿತಿಯಲ್ಲಿ ಅನುಮೋದಿಸಿ ಸಲ್ಲಿಸಲಾಗಿರುತ್ತದೆ. 2016 ರ ಮುಂಗಾರು ಹಂಗಾಮಿನಿಂದ ಈ ಯೋಜನೆಯ ಅನುಷ್ಠಾನವನ್ನು ಕರ್ನಾಟಕ ಸರ್ಕಾರದಿಂದ ಅಭಿವೃದ್ದಿ ಪಡಿಸಲಾದ ಔಟಿಟiಟಿe ಠಿoಡಿಣಚಿಟ (sಚಿmಡಿಚಿಞshಚಿಟಿe@ಟಿiಛಿ.iಟಿ) ಮೂಲಕ ಮಾತ್ರವೇ ರೈತರ ವಿವರಗಳನ್ನು ನೊಂದಾಯಿಸಿ ವಿಮಾ ಪಾಲಿಸಿ ಹೊಂದಲು ಅನುಷ್ಠಾನಕ್ಕೆ ತರಲಾಗಿದೆ.
ಈ ಯೋಜನೆಯಡಿ 2018 ರ ಮುಂಗಾರು ಹಂಗಾಮಿನಲ್ಲಿ ಸ್ಥಳೀಯ ನಿರ್ಧಿಷ್ಟ ಪ್ರಕೃತಿ ವಿಕೋಪಗಳಾದ ಆಲಿ ಕಲ್ಲು ಮಳೆ, ಭೂಕುಸಿತ ಮತ್ತು ಮೇಘ ಸ್ಫೋಟ (ಅಟouಜ ಃuಡಿsಣ) ಇವುಗಳಿಂದ ಬೆಳೆ ನಷ್ಟ ಸಂಭಂವಿಸಿದಲ್ಲಿ ಬೆಳೆ ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ (ಃಚಿಟಿಞ) ಅಥವಾ ಅನುಷ್ಠಾನಗೊಳಿಸುವ ವಿಮಾ ಸಂಸ್ಥೆಗಳ ಕಛೇರಿಗಳಿಗೆ ಹಾನಿ ಸಂಭವಿಸಿದ 48 ಗಂಟೆಗೊಳಗಾಗಿ ಬೆಳೆ ವಿವರ, ಹಾನಿಯ ವ್ಯಾಪ್ತಿ ಹಾಗೂ ಹಾನಿಯ ಕಾರಣಗಳನ್ನು ಲಿಖಿತವಾಗಿ ನೀಡತಕ್ಕದ್ದು, ಇಂತಹ ಸಂಧರ್ಭದಲ್ಲಿ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ವಿಮಾ ಸಂಸ್ಥೆಯು ಕಂದಾಯ, ತೋಟಗಾರಿಕೆ ಹಾಗೂ ಕೃಷಿ ಇಲಾಖೆಗಳ ಸಮನ್ವಯದೊಂದಿಗೆ ಇತ್ಯರ್ಥ ಪಡಿಸುತ್ತದೆ. ಇದರ ಹೊರತು ಸಾಮಾನ್ಯ ಸಂಧರ್ಭಗಳಲ್ಲಿ ಬೆಳೆ ನಷ್ಟಗಳನ್ನು ಜಿಲ್ಲಾ ಸಮಿತಿ ಹಾಗೂ ಸರ್ಕಾರಗಳು ಅನುಮೋದಿಸಿರುವ ಖಿeಡಿm Sheeಣ ಗಳಲ್ಲಿನ Pಚಿಥಿ ouಣ sಣಡಿuಛಿಣuಡಿe, ಜuಡಿಚಿಣioಟಿ, iಟಿಜex ಗಳನ್ನು ಮಾತ್ರ ಪರಿಗಣಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ವಿಮಾ ಸಂಸ್ಥೆಗಳು ಲೆಕ್ಕ ಹಾಕಿ ಇತ್ಯರ್ಥ ಪಡಿಸುತ್ತವೆ.
ಹಣಕಾಸು ಸಂಸ್ಥೆಗಳಿಂದ ಬೆಳೆ ಸಾಲವನ್ನು ಹೊಂದಿಲ್ಲದ ತೋಟಗಾರಿಕೆ ರೈತರು ನಿಗದಿತ ಅರ್ಜಿಯೊಂದಿಗೆ ಜಮೀನಿನ ಪಹಣಿ ಪ್ರತಿ (ಖಖಿಅ), ಉಳಿತಾಯ ಖಾತೆ ಪಾಸ್ ಪುಸ್ತಕ, ಆಧಾರ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಹೊಂದಿಲ್ಲದಿದ್ದಲ್ಲಿ ಸರ್ಕಾರದ ಇತರೆ ಯಾವುದೇ ಅಧಿಕೃತ ಗುರುತಿನ ಚೀಟಿ, ಸ್ವಯಂ ಘೋಷಿಸಿ ದೃಢೀಕರಿಸಿದ ಜಮೀನಿನ ಬೆಳೆ ಪತ್ರ ಹಾಗೂ ಪ್ರಿಮಿಯಂ ವಿಮಾ ಮೊತ್ತದೊಂದಿಗೆ ಸಲ್ಲಿಸಿ ನೊಂದಣಿ ಮಾಡಿಸಿಕೊಳ್ಳಬಹುದು.
ಈ ಯೋಜನೆಯಡಿ ವಿಮಾ ನಷ್ಟ ಪರಿಹಾರವನ್ನು ಂಜhಚಿಡಿ ಅಚಿಡಿಜ eಟಿಚಿbಟeಜ ಖಖಿಉS/ಓಇಈಖಿ ಮೂಲಕ ಇತ್ಯರ್ಥಪಡಿಸಲಾಗುವ ಕಾರಣ ಎಲ್ಲಾ ರೈತರು ಆಧಾರ್ ಕಾರ್ಡ್ ಮಾಹಿತಿಗಳನ್ನು ಒದಗಿಸಲು ಕೋರಲಾಗಿದೆ.
ಈ ಯೋಜನೆಯನ್ನು ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರಗಳು ರೈತ ಸಮುದಾಯಕ್ಕೆ ಉಪಯುಕ್ತವಾದ ಯೋಜನೆಯಾಗಿಸಲು ಉದ್ದೇಶಿಸಿರುವುದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದರಿ ಯೋಜನೆಯ ಲಾಭವನ್ನು ಪಡೆಯಬಹುದು.
ಹೆಚ್ಚಿನ ವಿವರಗಳಿಗೆ ಸ್ಥಳೀಯ ವಾಣಿಜ್ಯ/ ಗ್ರಾಮೀಣ ಸಹಕಾರಿ ಬ್ಯಾಂಕ್/ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ತೋಟಗಾರಿಕೆ ಅಥವಾ ಕೃಷಿ ಅಧಿಕಾರಿಗಳು/ ತಾಲೂಕು ಮಟ್ಟದ ಹಿರಿಯ ಸಹಾಯಕ ಅಥವಾ ಸಹಾಯಕ ತೋಟಗಾರಿಕೆ ನಿರ್ದೇಶಕರು/ ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬೇಕು.
ಹಾರ್ಟಿಕ್ಲಿನಿಕ್, ತೋಟಗಾರಿಕೆ ಉಪನಿರ್ದೇಶಕರ ಕಛೇರಿ, (ಜಿ.ಪಂ) ಮಂಗಳೂರು 0824-2423628, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ, (ಜಿ.ಪಂ.) ಮಂಗಳೂರು 0824-2423615, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ, (ಜಿ.ಪಂ.) ಪುತ್ತೂರು 08251-230905, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ, (ಜಿ.ಪಂ.) ಸುಳ್ಯ 08257-232020, ಸಹಾಯಕ ತೋಟಗಾರಿಕ ತೋಟಗಾರಿಕೆ ಕಛೇರಿ, (ಜಿ.ಪಂ.) ಬಂಟ್ವಾಳ 08255-234102, ಸಹಾಯಕ ತೋಟಗಾರಿಕ ತೋಟಗಾರಿಕೆ ಕಛೇರಿ, (ಜಿ.ಪಂ.) ಬೆಳ್ತಂಗಡಿ 08256-232148 ಸಂಪರ್ಕಿಸಿ ಸದುಪಯೋಗ ಪಡೆಯುವಂತೆ ತೋಟಗಾರಿಕೆ ಉಪನಿರ್ದೇಶಕರು, ದ.ಕ ಜಿಲ್ಲಾ ಪಂಚಾಯತ್, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.
ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ
Spread the love
Spread the love