ಹಾಡಿಗೆ ಕಿಡಿಗೇಡಿಗಳಿಂದ ಬೆಂಕಿ; ನಿಯಂತ್ರಣಕ್ಕೆ ತಂದ ಅಗ್ನಿಶಾಮಕ ದಳ
ಪುತ್ತೂರಿನ ಪುರುಷರಕಟ್ಟೆ ಎಂಬಲ್ಲಿ ಮರಗಳು ಹೊಂದಿದ ಹಾಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು ವಿಸ್ತಾರವಾಗಿ ಬೆಂಕಿ ಹರಡಿಕೊಂಡ ಪರಿಣಾಮ ಅಗ್ನಿಶಾಮಕ ದಳ ಆಗಮಿಸಿ ಬೆಂಕಿಯನ್ನು ನಂದಿಸಿದೆ ಎನ್ನಲಾಗಿದೆ.
ಈ ಕುರಿತು ಮ್ಯಾಂಗಲೋರಿಯನ್ ಪ್ರತಿನಿಧಿಯೊಂದಿಗೆ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ ಅವರು ಕಳೆದ ನಾಲ್ಕು ವರ್ಷದಿಂದ ಪ್ರತಿ ವರ್ಷವೂ ಕೂಡ ಪುತ್ತೂರು ಸಮೀಪದ ಪುರಷರ ಕಟ್ಟೆ ಎಂಬಲ್ಲಿ ಹಾಡಿಗೆ ಕಿಡಿಗೇಡಿಗಳು ಬೆಂಕಿ ಹಾಕುತ್ತಿದ್ದು ಬಳಿಕ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದಾರೆ. ಕಳೆದ ಬಾರಿ ಕೂಡ ಮಧ್ಯಾಹ್ನ ಹೊತ್ತಿನಲ್ಲಿ ಬೆಂಕಿ ಹಾಕಿದ್ದು ಈ ಬಾರಿ ರಾತ್ರಿ ಹೊತ್ತು ಹಾಕಿದ್ದಾರೆ. ಬೆಂಕಿ ಹಾಕಿದ ಕಿಡಿಗೇಡಿಗಳು ಯಾರು ಎನ್ನುವುದು ಮಾತ್ರ ತಿಳಿದು ಬಂದಿಲ್ಲ ಎಂದರು.
ಪ್ರಸ್ತುತ ಬೆಂಕಿ ನಿಯಂತ್ರಣಕ್ಕೆ ಬಂದಿದೆ ಎನ್ನಲಾಗಿದೆ.