ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಗೆ ಸಕಾಲದಲ್ಲಿ ನೆರವಾಗಿ ಮಾನವೀಯತೆ ಮೆರೆದ ಸಚಿವ ಖಾದರ್
ಮಂಗಳೂರು: ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯ ನೆರವಿಗೆ ಧಾವಿಸುವುದರ ಮೂಲಕ ರಾಜ್ಯದ ಆಹಾರ ಸಚಿವ ಯು.ಟಿ. ಖಾದರ್ ಮತ್ತೊಮ್ಮೆ ತಮ್ಮ ಮಾನವೀಯತೆಯನ್ನು ಮೆರೆದಿದ್ದಾರೆ.
ನವೆಂಬರ್ 6 ರಂದು ಬೆಳಿಗ್ಗೆ ಸುಮಾರು 1.15ಕ್ಕೆ ಸಂತೋಷ್ ಕುಮಾರ್ ಎನ್ನುವ ವ್ಯಕ್ತಿಗೆ ಹಾವು ಕಚ್ಚಿದ್ದು, ಸಹಾಯಕ್ಕಾಗಿ ಆತನ ಸಹೋದರ ಸಚಿವರಿಗೆ ದೂರವಾಣಿ ಕರೆ ಮಾಡಿದ್ದರು. ಸಂತೋಷ್ ಕುಮಾರ್ ಅವರು ಮುಡಿಪು ನಿವಾಸಿಯಾಗಿದ್ದು, ಯೋಧರಾಗಿದ್ದು, ಉಗ್ರರ ಧಾಳಿಯ ಸಮಯದಲ್ಲಿ ಗಾಯಗೊಂಡಿದ್ದರು.
ನವೆಂಬರ್ 5 ರಂದು ಕಾರ್ಯಕ್ರಮವೊಂದಕ್ಕೆ ಭಾಗವಹಿಸುವ ಸಲುವಾಗಿ ತನ್ನ ಹುಟ್ಟೂರಿಗೆ ಆಗಮಿಸಿದ್ದು, ಈ ವೇಳೆ ಆತನಿಗೆ ಹಾವು ಕಚ್ಚಿದೆ. ಆತನ್ನನ್ನು ಕೂಡಲೇ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಯ ವೈದ್ಯರು 10 ಹಾವು ಕಡಿತದ ಚುಚ್ಚು ಮದ್ದುಗಳನ್ನು ನೀಡಬೇಕು ಎನ್ನುವ ಸಲಹೆ ನೀಡಿದ್ದರು. ಈ ಬಗ್ಗೆ ಸಂತೋಷ್ ಸಹೋದರ ಸಚಿವರಿಗೆ ಕರೆ ಮಾಡಿ ಅದನ್ನು ಹಣಕೊಟ್ಟು ಪಡೆಯಲು ತಾನು ಅಸಮರ್ಥನಿದ್ದು, ಸಹಾಯ ಮಾಡುವಂತೆ ಕೋರಿಕೊಂಡಿದ್ದರು. ಬಳಿಕ ಸಚಿವರ ಸ್ವತಃ ಆಸ್ಪತ್ರೆಗೆ ತೆರಳಿ ವೆನ್ಲಾಕ್ ಆಸ್ಪತ್ರೆಯ ಮೂಲಕ ಚುಚ್ಚುಮದ್ದುಗಳನ್ನು ವ್ಯವಸ್ಥೆ ಮಾಡಿಕೊಟ್ಟರು.
ಪ್ರಸ್ತುತ ಸಂತೋಷ ಕುಮಾರ್ ಗುಣಮುಖರಾಗುತ್ತಿದ್ದು, ಗುಣಹೊಂದುವ ತನಕ ಸಂಪೂರ್ಣ ಸಹಕಾರ ನೀಡುವುದಾಗಿ ಸಚಿವರು ತಿಳೀಸಿದ್ದಾರೆ.