Home Mangalorean News Kannada News ಹಾಸನದ ಅಶ್ಲೀಲ ವಿಡಿಯೋ ರೂವಾರಿ ಡಿಕೆಶಿ; ಮೋದಿಗೆ ಮಸಿ ಬಳಿಯಲೆಂದೇ ಹುನ್ನಾರ: ವಕೀಲ ದೇವರಾಜೇಗೌಡ

ಹಾಸನದ ಅಶ್ಲೀಲ ವಿಡಿಯೋ ರೂವಾರಿ ಡಿಕೆಶಿ; ಮೋದಿಗೆ ಮಸಿ ಬಳಿಯಲೆಂದೇ ಹುನ್ನಾರ: ವಕೀಲ ದೇವರಾಜೇಗೌಡ

Spread the love

ಹಾಸನದ ಅಶ್ಲೀಲ ವಿಡಿಯೋ ರೂವಾರಿ ಡಿಕೆಶಿ; ಮೋದಿಗೆ ಮಸಿ ಬಳಿಯಲೆಂದೇ ಹುನ್ನಾರ: ವಕೀಲ ದೇವರಾಜೇಗೌಡ

ಬೆಂಗಳೂರು: ದೇಶ ಮಟ್ಟದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕಪ್ಪು ಮಸಿ ಬಳಿಯಲೆಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋದ ಪೆನ್ಡ್ರೈವ್ ಪಡೆದುಕೊಂಡು ಲೋಕಸಭಾ ಚುನಾವಣೆಯ ಮತದಾನಕ್ಕೆ 3 ದಿನ ಇರುವಾಗ ಬಿಡುಗಡೆ ಮಾಡಲಾಗಿದೆ ಎಂದು ವಕೀಲ ದೇವರಾಜೇಗೌಡ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಪೆನ್ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಯಾರು ಯಾರನ್ನ ಆರೋಪಿಯನ್ನಾಗಿ ಮಾಡಬೇಕು? ಯಾರನ್ನು ಕೇಸ್ ನಲ್ಲಿ ಫಿಟ್ ಮಾಡಬೇಕು? ಎಂಬುದು ಗೊತ್ತಾಗಲಿದೆ. ಇದರಲ್ಲಿ ಮುಖ್ಯವಾಗಿ ಮೋದಿಜಿ ಟಾರ್ಗೆಟ್ ಮಾಡಲಾಗಿದೆ. ಕುಮಾರಸ್ವಾಮಿ ಅವರ ನಡುವಿನ ವೈಯಕ್ತಿಕ ವಿಚಾರದ ಎಲ್ಲಾ ದಾಖಲೆಗಳನ್ನು ನನಗೆ ಕೊಟ್ಟಿದ್ದರು. ಈಗ ನನ್ನನ್ನೇ ಎ1 ಆರೋಪಿಯಾಗಿ ಟಾರ್ಗೆಟ್ ಮಾಡ್ತಾ ಇದ್ದಾರೆ. ಇದೀಗ ಇವರು ಸಂತ್ರಸ್ತರಿಗೆ ಹಣ ಕೊಟ್ಟು ಕರೆದುಕೊಂಡು ಬರ್ತಾ ಇದ್ದಾರೆ. ಯಾವ ಹೋಟೆಲ್ ನಲ್ಲಿ ಎಷ್ಟು ಗಂಟೆ ಮಾತನಾಡಿದ್ದಾರೆ ಅನ್ನೋದು ಸಿಸಿಟಿವಿಯಲ್ಲಿ ಗೋತ್ತಾಗುತ್ತದೆ. ಈ ಪ್ರಕರಣ ದಿಕ್ಕುನ್ನೇ ಬದಲಾಯಿಸುತ್ತಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಈ ಪ್ರಕರಣವನ್ನು ವಕೀಲರ ನೇತೃತ್ವದಲ್ಲಿ ಸಿಬಿಐ ತನಿಖೆಗೆ ಕೊಡಿ ಅಂತ ಗೃಹ ಸಚಿವರಿಗೆ ಮನವಿ ಕೊಡುತ್ತೇವೆ. ಏ.29 ರಂದು ರಾತ್ರಿ ಡಿ.ಕೆ.ಶಿವಕುಮಾರ್ ನನ್ನ ಬಳಿ ಮಾತನಾಡಿದ್ದು, ಇವತ್ತು ನನ್ನ ಬಳಿ ಪೆನ್ ಡ್ರೈವ್ ನಲ್ಲಿ ಇರೋದು ಇದ್ಯಾವುದು ಅಲ್ಲ ವಿಡಿಯೋ ಅಲ್ಲ.ಬೇರೆ ವಿಡಿಯೋ ಗಳು ಬರ್ತಾ ಇದಾವೆ. ಕಾರು ಚಾಲಕ ಬಹಳ ಟೆಕ್ನಾಲಜಿ ಉಪಯೋಗಿಸಿದ್ದಾನೆ. ನಮ್ಮ ಸಂಸ್ಕೃತಿ ಹೆಣ್ಣು ಮಕ್ಕಳ ಮಾನ ಹರಾಜು ಹಾಕೋದು ಸರಿಯಲ್ಲ ಎಂದು ತಿಳಿಸಿದರು.

ಮೋದಿಗೆ ಮಸಿ ಬಳಿಯಲು ಸಹಕರಿಸುವಂತೆ ದೊಡ್ಡ ಆಫರ್: ಸಂಸದ ಪ್ರಜ್ವಲ್ ರೇವಣ್ಣನ ಮಾಜಿ ಕಾರು ಚಾಲಕ ಕಾರ್ತಿಕ್ ಕೊಟ್ಟ ವಿಡಿಯೋ ಕೊಡುವಂತೆ ಹಾಗೂ ಅಶ್ಲೀಲ ವಿಡಿಯೋದ ಪೆನ್ಡ್ರೈವ್ ಹಂಚಿಕೆಯ ವಿಚಾರದಲ್ಲಿ ರಾಜ್ಯ ಸರ್ಕಾರದೊಂದಿಗೆ ಕೈ ಜೋಡಿಸುವಂತೆ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಅವರನ್ನು ಮಧ್ಯವರ್ತಿಯಾಗಿ ಕಳುಹಿಸಿದ್ದರು. ಶಿವರಾಮೇಗೌಡರು ಬಂದು ರಾಜ್ಯ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಬೇಡ, ನೀನು ಸರ್ಕಾರದ ಪರವಾಗಿ ಇರಬೇಕು. ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರನ್ನ ಇಕ್ಕಟ್ಟಿಗೆ ಸಿಲುಕಿಸಬೇಡಿ ಅಂತ ಶಿವರಾಮೇಗೌಡ ಮನವಿ ಮಾಡಿದರು.

ಪುನಃ ಮಧ್ಯವರ್ತಿ ಎಲ್.ಆರ್.ಶಿವರಾಮೇಗೌಡ ಅವರನ್ನು ನನ್ನ ಬಳಿ 10 ಬಾರಿ ಸಂಧಾನಕ್ಕೆ ಕಳುಹಿಸಿದ್ದಾರೆ. ಕಾರು ಚಾಲಕ ಕಾರ್ತಿಕ್ ಎಲ್ಲಿದ್ದಾರೆ ಅಣ್ಣಾ? ಕಾರು ಚಾಲಕ ಎಲ್ಲಿದ್ದಾನೆ ಅನ್ನೋದು ಹುಡುಕಾಟ ನಡೆಸಲೇ ಇಲ್ಲ. ಡ್ರೈವರ್ ಕಾರ್ತಿಕ್ನಲ್ಲಿ ಎಲ್ಲಿ ಇರಿಸಿದ್ದಾರೆ ಅನ್ನೋ ಲೋಕೇಷನ್ ಕೊಟ್ಟೆ ಆದರೂ ಅವರನ್ನು ಹುಡುಕಿಲ್ಲ ಎಂದು ವಕೀಲ ದೇವರಾಜೇಗೌಡ ಅವರು ಆರೋಪಿಸಿದರು.


Spread the love

Exit mobile version