Home Mangalorean News Kannada News ಹಿಂದೂ ದೇವರ ಅವಹೇಳನಕ್ಕೆ ಗಣೇಶ್ ಕಾರ್ಣಿಕ್ ಖಂಡನೆ

ಹಿಂದೂ ದೇವರ ಅವಹೇಳನಕ್ಕೆ ಗಣೇಶ್ ಕಾರ್ಣಿಕ್ ಖಂಡನೆ

Spread the love

ಹಿಂದೂ ದೇವರ ಅವಹೇಳನಕ್ಕೆ ಗಣೇಶ್ ಕಾರ್ಣಿಕ್ ಖಂಡನೆ

ಮಂಗಳೂರು: ಸಮಸ್ತ ಹಿಂದೂ ಬಾಂಧವರ ಅಧಿದೈವತೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರ ಕುರಿತು ಅವಹೇಳನಕಾರಿ ಹಾಗೂ ಅಶ್ಲೀಲವಾಗಿ ಫೇಸ್ ಬುಕ್ ನಲ್ಲಿ ಪೊಸ್ಟ್ ಮಾಡಿ ಬಹುಸಂಖ್ಯಾತರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮೂಲಕ ಕೋಮು ಗಲಭೆಯನ್ನು ಸೃಷ್ಟಿಮಾಡಲು ಯತ್ನಿಸುತ್ತಿರುವುದನ್ನು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ಅತ್ಯಂತ ತೀವ್ರವಾಗಿ ಖಂಡಿಸಿದ್ದಾರೆ.

ಈ ಕೃತ್ಯವೆಸಗಿದ ಮತಾಂಧನನ್ನು ಕೂಡಲೆ ಬಂಧಿಸುವ ಮೂಲಕ ಇಂತಹ ಕೃತ್ಯದಲ್ಲಿ ತೊಡಗುವವರಿಗೆ ಸೂಕ್ತ ಎಚ್ಚರಿಕೆಯ ಸಂದೇಶ ಕಳುಹಿಸುವುದು ಅತೀ ಅಗತ್ಯವಾಗಿದೆ. ರಾಜ್ಯದ ಗೃಹ ಸಚಿವರು ಈ ಕುರಿತು ಕೂಡಲೆ ಆರೋಪಿಯನ್ನು ಬಂಧಿಸುವಂತೆ ನಿರ್ದೇಶನ ನೀಡಿ ಗಣೇಶ ಚತುರ್ಥಿ ಸಮಯದಲ್ಲಿ ಕೋಮು ಸೌಹಾರ್ದತೆಯ ವಿಶ್ವಾಸವನ್ನು ಜಿಲ್ಲೆಯ ಜನತೆಯಲ್ಲಿ ತುಂಬುವುದು ಅವಶ್ಯಕವಾಗಿದೆ ಎಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Spread the love

Exit mobile version