ಹಿಂದೂ ದ್ವೇಷಿ ‘ಪಾತಾಲ ಲೋಕ್’ ಈ ವೆಬ್‌ ಸೀರಿಸ್‌ ಅನ್ನು ನಿಷೇಧಿಸಿ !

Spread the love

ಹಿಂದೂ ದ್ವೇಷಿ ‘ಪಾತಾಲ ಲೋಕ್’ ಈ ವೆಬ್‌ ಸೀರಿಸ್‌ ಅನ್ನು ನಿಷೇಧಿಸಿ !

#BoycottPaatalLok ಮತ್ತು #CensorWebSeries ಈ ಹ್ಯಾಶಟ್ಯಾಗ್‌ಗೆ ಟ್ವಿಟರ್‌ದಲ್ಲಿ ಭಾರಿ ಬೆಂಬಲ !

ಅನುಷ್ಕಾ ಶರ್ಮಾ ಪ್ರೊಡಕ್ಶನ್ ಮೂಲಕ ‘ಪಾತಾಲ್ ಲೋಕ್’ ವೆಬ್‌ಸಿರೀಸ್ ಸಂಪೂರ್ಣವಾಗಿ ಹಿಂದೂವಿರೋಧಿ ನಿಲುವಿನಿಂದ ತಯಾರಿಸಿದ್ದು ಅದರಲ್ಲಿ ಅತ್ಯಂತ ಆಕ್ಷೇಪಾರ್ಹ ದೃಶ್ಯಗಳನ್ನು ತೋರಿಸಲಾಗಿದೆ. ಇದರಲ್ಲಿ ಒಂದು ಹೆಣ್ಣು ನಾಯಿಗೆ ‘ಸಾವಿತ್ರಿ’ ಎಂದು ಹೆಸರಿಡಲಾಗಿದೆ; ದೇವಸ್ಥಾನದಲ್ಲಿ ಅರ್ಚಕರು ಮಾಂಸ ಬೇಯಿಸಿ ತಿನ್ನುವಂತೆ ತೋರಿಸಲಾಗಿದೆ; ಕೇಸರಿ ಬಟ್ಟೆಗಳನ್ನು ತೊಟ್ಟ ಜನರು ‘ಜೈ ಶ್ರೀರಾಮ್’ ಹೇಳಿ ಗೂಂಡಾಗಿರಿ ಮಾಡುವಂತೆ ತೊರಿಸಲಾಗಿದೆ; ಸಾಧು-ಸಂತರಿಗೆ ಅವಾಚ್ಯವಾಗಿ ನಿಂದಿಸುತ್ತಿರುವಂತೆ ತೋರಿಸಲಾಗಿದೆ; ಒಂದು ಪ್ರಸಂಗದಲ್ಲಿ ವ್ಯಕ್ತಿಯೊಬ್ಬ ಜನಿವಾರ ಹಾಕಿ ಬಲಾತ್ಕಾರ ಮಾಡುವಂತೆ ತೋರಿಸಲಾಗಿದೆ; ಒಬ್ಬ ಮುಸಲ್ಮಾನ ಮಹಿಳೆಯು ಹಿಂದೂ ಮಹಿಳೆಗೆ ನೀರು ನೀಡುತ್ತಾಳೆ, ಆಗ ಆ ಹಿಂದೂ ಮಹಿಳೆ ನೀರು ಕುಡಿಯಲು ತಿರಸ್ಕರಿಸುತ್ತಾಳೆ, ಹೀಗೆ ಅನೇಕ ರೀತಿಯಲ್ಲಿ ಸಮಾಜದಲ್ಲಿ ಕೋಮುದ್ವೇಷ ಹಬ್ಬಿಸುವ ಹಾಗೂ ಹಿಂದೂ ಧರ್ಮದ ಬಗ್ಗೆ ದ್ವೇಷ ಹಬ್ಬಿಸುವ ದೃಶ್ಯಗಳನ್ನು ತೋರಿಸಲಾಗಿದೆ. ಅದು ಅತ್ಯಂತ ಖಂಡನೀಯವಾಗಿದ್ದು ಹಿಂದೂ ಜನಜಾಗೃತಿ ಸಮಿತಿಯು ಇದನ್ನು ತೀವ್ರವಾಗಿ ಖಂಡಿಸುತ್ತಿದ್ದು ‘ಪಾತಾಲ ಲೋಕ’ ಈ ವೆಬ್‌ಸೀರಿಸ್‌ಅನ್ನು ಸರಕಾರವು ಕೂಡಲೇ ನಿಷೇಧಿಸಬೇಕು, ಎಂದೂ ಸಮಿತಿಯು ಆಗ್ರಹಿಸಿದೆ.

ಪ್ರಸ್ತುತ ಯುವಪೀಳಿಗೆಗೆ ದೊಡ್ಡ ಪ್ರಮಾಣದಲ್ಲಿ ಆಕರ್ಷಿಸುವ ಅಮೇಝಾನ್, ನೆಟ್‌ಫ್ಲಿಕ್ಸ್, ಹಾಟ್ ಸ್ಟ್ಟಾರ್, ಅಲ್ಟ್ ಬಾಲಾಜಿಗಳಂತಹ ಅನೇಕ ಆನ್‌ಲೈನ್ ಮೀಡಿಯಾಗಳ ಮಾಧ್ಯಮದಿಂದ ‘ಪಾತಾಲ ಲೋಕ’, ‘ಲೈಲಾ’, ‘ಸೆಕ್ರೆಡ್ ಗೇಮ್ಸ್’, ‘ಗಂದಿ ಬಾತ್’, ‘ಕೋಡ್ ಎಮ್.’ ಮತ್ತು ‘ಗೇಮ್ ಆಫ್ ಥ್ರೋನ್ಸ್’ಗಳಂತಹ ಆಕೇಪಾರ್ಹ ವೆಬ್‌ಸಿರೀಸ್‌ಗಳನ್ನು ತೋರಿಸಲಾಗುತ್ತಿದೆ. ಈ ವೆಬ್‌ಸಿರೀಸ್‌ಗಳ ಮೇಲೆ ಸರಕಾರ, ಆಡಳಿತ ಹಾಗೂ ಸೆನ್ಸರ್ ಬೋರ್ಡ ಇವರಲ್ಲಿ ಯಾರದ್ದೂ ಬಂಧನ ಅಥವಾ ನಿಯಂತ್ರಣವಿಲ್ಲ. ಇದು ಅತ್ಯಂತ ಗಂಭೀರವಾಗಿದ್ದು ದೇಶದ ಐಕ್ಯತೆ ಹಾಗೂ ಸಾಮಾಜಿಕ ಶಾಂತಿಗೆ ಅಪಾಯತಂದೊಡ್ಡುತ್ತಿದೆ. ಆದ್ದರಿಂದ ಇವೆಲ್ಲ ವೆಬ್‌ಸಿರಿಸ್‌ಗಳ ಮೇಲೆ ನಿಯಂತ್ರಣ ತರಲು ಸರಕಾರವು ಸೆನ್ಸರ್ ಬೋರ್ಡ್‌ನಂತಹ ವ್ಯವಸ್ಥೆಯನ್ನು ಮಾಡಬೇಕು; ಈ ಎಲ್ಲ ವೆಬ್‌ಸಿರಿಸ್ ಮೇಲೆ ಕೂಡಲೇ ನಿರ್ಬಂಧವನ್ನು ಹೇರಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸಿದೆ.

ಈ ಆಗ್ರಹಕ್ಕೆ ಇಂದು ಟ್ವೀಟರ್ ಈ ಸೋಶಿಯಲ್ ಮೀಡಿಯಾದ ಪ್ಲಾಟ್‌ಫಾರ್ಮಾದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಂಬಲ ಸಿಗುತ್ತಿದೆ. ಇಂದು ಇಡೀ ದಿನ #BoycottPaatalLok ಹಾಗೂ#CensorWebSeries ಈ ಹ್ಯಾಷ್ ಟ್ಯಾಗ್ ಮೊದಲ ೧೦ ನೇಯ ಶ್ರೇಯಾಂಕದಲ್ಲಿತ್ತು. ದೇಶದಾದ್ಯಂತ ಇದರ ಬಗ್ಗೆ ೬೩ ಸಾವಿರಕ್ಕೂ ಹೆಚ್ಚು ಜನರು ಈ ಮೇಲಿನಂತೆ ಟ್ವೀಟ್ ಮಾಡಿರುವುದು ಕಂಡುಬರುತ್ತದೆ.

ಲಭ್ಯವಾದ ಅಂಕಿಅಂಶಗಳನುಸಾರ ೩೦೦೦ ಕೋಟಿ ರೂಪಾಯಿಯ ವಹಿವಾಟು ಆಗುತ್ತದೆ; ಆದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ವೀಕ್ಷಕರು ಇದ್ದರೂ ಚಲನಚಿತ್ರಕ್ಕೆ ಹೇಗೆ ಕೇಂದ್ರದ ಚಲನಚಿತ್ರ ಪರಿವೀಕ್ಷಣ ಮಂಡಳಿ (CBFC) ಇದೆಯೋ, ಅದೇ ರೀತಿ ಇದರ ಮೇಲೆ ಯಾವುದೇ ನಿಯಂತ್ರಣ ಇಲ್ಲ. ಆದ್ದರಿಂದ ಕೇಂದ್ರ ಸರಕಾರವು ಇದರ ಮೇಲೆ ನಿಯಂತ್ರಣವಿಡಲು ಕಠಿಣ ಕಾನೂನನ್ನು ರೂಪಿಸಬೇಕು, ಎಂದೂ ಸಹ ನಾವು ಆಗ್ರಹಿಸುತ್ತಿದ್ದೇವೆ.


Spread the love