ಹಿಂದೂ ಧಾರ್ಮಿಕ ನಂಬಿಕೆಗೆ ಧಕ್ಕೆ: ವಿಚಾರವಾದಿ ಪ್ರೊ. ಭಗವಾನ್ ವಿರುದ್ದ ಉಡುಪಿಯಲ್ಲಿ ದೂರು
ಉಡುಪಿ: ಹಿಂದೂ ಧಾರ್ಮಿಕ ನಂಬಿಕೆಗೆ ಧಕ್ಕೆ ಉಂಟು ಮಾಡುವುದರೊಂದಿಗೆ ಕಾವೇರಿ ನದಿಯ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ವಿಚಾರವಾದಿ ಪ್ರೊ. ಕೆ.ಎಸ್. ಭಗವಾನ್ ವಿರುದ್ದ ಕರ್ನಾಟಕ ಕಾರ್ಮಿಕ ವೇದಿಕೆಯ ಅಧ್ಯಕ್ಷರಾದ ರವಿ ಶೆಟ್ಟಿಯವರು ಉಡುಪಿ ನಗರ ಠಾಣೆಗೆ ಬುಧವಾರ ದೂರು ನೀಡಿದ್ದಾರೆ.
ವಿವಾದಾತ್ಮಕ ಹೇಳಿಕೆಯಿಂದಲೇ ಪ್ರಸಿದ್ಧಿ ಹೊಂದಿದ ಪ್ರೊಫೆಸರ್ ಕೆಎಸ್ ಭಗವಾನ್ ಇವರು ಇತ್ತೀಚಿನ ದಿನಗಳಲ್ಲಿ ಪ್ರಭು ಶ್ರೀರಾಮರ ವಿರುದ್ಧವಾಗಿ ಅವಹೇಳನಕಾರಿ ಮಾತುಗಳನ್ನು ಆಡಿ ಸಹಸ್ರಾರು ಕೋಟಿಗಳ ಹಿಂದೂ ಬಾಂಧವರ ಮನಸ್ಸಿಗೆ ಧಕ್ಕೆಯನ್ನು ತಂದಿದ್ದು ಮತ್ತು ಕಾವೇರಿ ಕರುನಾಡ ತಾಯಿ ಕಾವೇರಿಯ ಬಗ್ಗೆ ಅಸಡ್ಡೆತನದಿಂದ ಮಾತನಾಡಿದ್ದು, ಇಂತಹ ಹೇಳಿಕೆಗಳಿಂದ ಶ್ರೀರಾಮನ ಮೇಲೆ ಭಕ್ತಿ ಇರಿಸಿಕೊಂಡ ಅನೇಕ ಹಿಂದುಗಳಿಗೆ ನೋವಾಗಿದೆ. ಅವರ ಹೇಳಿಕೆ ಸೌಹಾರ್ದತೆ ಕೆಡಿಸುವ ಹೇಳಿಕೆಯಾಗಿದ್ದು, ಅದಲ್ಲದೆ ಕರ್ನಾಟಕ ಜೀವನದಿ ಕಾವೇರಿಯು ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ, ಹಲವಾರು ರಾಜ್ಯಗಳಿಗೆ ಸೇರಿದ್ದು ಎಂದು ಹೇಳಿ ಕನ್ನಡಿಗರ ಮನಸ್ಸಿಗೆ ನೋವು ಉಂಟು ಮಾಡಿದ್ದಾರೆ ಎಂದು ರವಿ ಶೆಟ್ಟಿ ತಮ್ಮ ದೂರಿನಲ್ಲಿ ದೂರಿದ್ದಾರೆ.
ಭಗವಾನ್ ಉದ್ದೇಶ ಪೂರ್ವಕವಾಗಿ ಹಿಂದೂಗಳ ಧಾರ್ಮಿಕ ನಂಬಿಕೆಗೆ ಧಕ್ಕೆ ಉಂಟು ಮಾಡುವ ಹಾಗೂ ಸಾಮರಸ್ಯ ಸೌಹಾರ್ದತೆ ಕೆಡಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಆದ್ದರಿಂದ ಈ ರೀತಿಯ ಹೇಳಿಕೆ ನೀಡುತ್ತಿರುವ ಭಗವಾನ್ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದರೊಂದಿಗೆ ತಕ್ಷಣ ಭಗವಾನ್ ಅವರನ್ನು ಬಂಧಿಸುವಂತೆ ಮತ್ತು ಉಡುಪಿ ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಅವರು ಬರದ ಹಾಗೆ ನಿರ್ಬಂಧ ವಿಧಿಸಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಸುಧಾಕರ್ ನಾಯಕ್ , ಸಂದೀಪ್ ಕೊಡಂಕೂರು ದಯಾನಂದ ಶೆಟ್ಟಿ ದೆಂದೂರು ಶಿವಪುತ್ರಪ್ಪ ಕಟಪಾಡಿ ಮತ್ತು ಜಯಲಕ್ಷ್ಮಿ ಮಲ್ಪೆ ಶೈಲಜಾ ಮಲ್ಪೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಅನ್ಸಾರ್ ಅಹ್ಮದ್ ಕಾರ್ಮಿಕ ಪ್ರಕೋಷ್ಟದ ಸಂದೀಪ್ ನಿವೃತ್ತ ಪೊಲೀಸ್ ಮತ್ತು ಅಶೋಕ್ ಕೊಡಂಕೂರು ಮತ್ತು ಶಿವಪುತ್ರಪ್ಪ ಹಾಗೂ ಮಾಲತಿ ನೀಲೇಶ್ ಮತ್ತು ಇತರರು ಉಪಸ್ಥಿತರಿದ್ದರು.
in india one cant speak frankly meant where is democracy?