ಹಿಂದೂ ಪ್ರವಾಸಿಗರ ನರಮೇಧ ಮಾಡಿದ ಮತಾಂಧ ಉಗ್ರರ ಹೀನ ಕೃತ್ಯ ಹಿಂದೂ ಸಮಾಜಕ್ಕೆ ಎಚ್ಚರಿಕೆಯ ಕರೆಗಂಟೆ : ಸುನೀಲ್ ನೇಜಾರ್
ಉಡುಪಿ: ಜಮ್ಮು ಕಾಶ್ಮೀರದಲ್ಲಿ ಹಿಂದೂ ಧರ್ಮದ ಪ್ರವಾಸಿಗರನ್ನು ಗುರಿಯಾಗಿಸಿ ಅಮಾನುಷವಾಗಿ ಹತ್ಯೆ ಮಾಡಿ ಮತಾಂಧ ಉಗ್ರರ ಹೀನ ಕೃತ್ಯ ಹಿಂದೂ ಸಮಾಜಕ್ಕೆ ಎಚ್ಚರಿಕೆ ಕರೆಗಂಟೆಯಾಗಿದ್ದು, ಸಮಸ್ತ ಹಿಂದೂ ಸಮಾಜ ಈ ಅಮಾನುಷ ಘಟನೆಯನ್ನು ಒಕ್ಕೊರಲಿನಿಂದ ಖಂಡಿಸಬೇಕಿದೆ ಎಂದು ಹಿಂದೂ ಯುವಸೇನೆ ಉಡುಪಿ ನಗರಾಧ್ಯಕ್ಷ ಸುನೀಲ್ ನೇಜಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಹಾದಿ ಉಗ್ರರು ಪ್ರವಾಸಿಗರ ಧರ್ಮವನ್ನು ಕೇಳಿ ಹಿಂದೂಗಳಿಗೆ ತಮ್ಮ ಕುಟುಂಬಸ್ಥರ ಮುಂದೆಯೇ ಗುಂಡು ಹೊಡೆದು ಹತ್ಯೆ ಮಾಡುವ ಮೂಲಕ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದ್ದಾರೆ.
ಕೇಂದ್ರ ಸರ್ಕಾರ ಈ ಉಗ್ರರ ವಿರುದ್ಧ ಅತೀ ಶೀಘ್ರದಲ್ಲೇ ಹೆಡೆಮುರಿ ಕಟ್ಟುವ ಭರವಸೆ ಇದ್ದು, ಸಮಸ್ತ ಹಿಂದೂ ಸಮಾಜ ಒಗ್ಗಟ್ಟಾಗಿ ಮತಾಂಧ ಶಕ್ತಿಗಳಿಗೆ ತಕ್ಕ ಉತ್ತರ ನೀಡಬೇಕಿದೆ ಎಂದಿದ್ದಾರೆ.