Home Mangalorean News Kannada News `ಹಿಂದೂ ರಾಷ್ಟ್ರ’ವೇ ಜಗತ್ತಿನ ಆಶಾಸ್ಥಾನ ! – ಗೋವಾ ಕ್ರಾನಿಕಲ್ಸ್ ಸಂಪಾದಕ ಸಾವಿಯೋ ರೊಡ್ರಿಗ್ಸ್

`ಹಿಂದೂ ರಾಷ್ಟ್ರ’ವೇ ಜಗತ್ತಿನ ಆಶಾಸ್ಥಾನ ! – ಗೋವಾ ಕ್ರಾನಿಕಲ್ಸ್ ಸಂಪಾದಕ ಸಾವಿಯೋ ರೊಡ್ರಿಗ್ಸ್

Spread the love

`ಹಿಂದೂ ರಾಷ್ಟ್ರ’ವೇ ಜಗತ್ತಿನ ಆಶಾಸ್ಥಾನ ! – ಗೋವಾ ಕ್ರಾನಿಕಲ್ಸ್ ಸಂಪಾದಕ ಸಾವಿಯೋ ರೊಡ್ರಿಗ್ಸ್

ಗೋವಾ: ನಾನು ಕ್ರೈಸ್ತನಾಗಿದ್ದರೂ ನಿಮ್ಮೊಂದಿಗಿದ್ದೇನೆ; ಏಕೆಂದರೆ ನಾನು ಹಿಂದೂಸ್ಥಾನಿಯಾಗಿದ್ದೇನೆ ಮತ್ತು ಅದಕ್ಕಾಗಿ ನನಗೆ ಅಭಿಮಾನವಿದೆ. ನಾನು ಕ್ರೈಸ್ತನಾಗಿದ್ದರೂ ಹಿಂದೂ ರಾಷ್ಟ್ರದ ಬೇಡಿಕೆಯನ್ನು ಮಾಡುವ ಈ ಅಧಿವೇಶನದಲ್ಲಿದ್ದೇನೆ. ಏಕೆಂದರೆ `ಹಿಂದೂ ರಾಷ್ಟ್ರವು’ ಎಲ್ಲ ಧರ್ಮಗಳಿಗಿಂತ ಶ್ರೇಷ್ಠವಾಗಿದೆ ಎಂದು ನಾನು ನಂಬಿದ್ದೇನೆ. ಹಿಂದೂ ರಾಷ್ಟ್ರದ ಹೋರಾಟದಲ್ಲಿ ನಾನು ನಿಮ್ಮೊಂದಿಗಿದ್ದೇನೆ. ಜಗತ್ತಿಗೆ ಭಾರತವು ಧರ್ಮದ ಮೇಲೆ ವಿಭಜನೆಯಾಗಿರದೇ ಅದು ಸಂಘಟಿತವಾಗಿದೆ ಎಂದು ತೋರಿಸಲಿಕ್ಕಾಗಿಯೇ ನಾನು ಇಲ್ಲಿ ಉಪಸ್ಥಿತನಿದ್ದೇನೆ. ಈಗ ಹಿಂದೂ ರಾಷ್ಟ್ರ ಬರದಿದ್ದಲ್ಲಿ ಮುಂದೆ ಎಂದೂ ಬರಲಾರದು ಎಂಬುದನ್ನು ಭಾರತೀಯರು ಗಮನದಲ್ಲಿಡಬೇಕು. ಹಿಂದೂ ರಾಷ್ಟ್ರ ಇದು ಸಂಕುಚಿತ ಕಲ್ಪನೆಯಲ್ಲ ಅದು ಭಾರತದಲ್ಲಿರುವ ಸಂಸ್ಕøತಿ, ಮೌಲ್ಯಗಳು, ಶ್ರದ್ಧೆ ಯನ್ನು ಒಳಗೊಂಡಿರುವ ಉಚ್ಚ ಸಂಕಲ್ಪನೆಯಾಗಿದೆ. ಪ್ರಸ್ತುತ ಜಗತ್ತಿಗೆ `ಹಿಂದೂ ರಾಷ್ಟ್ರ’ವೇ ಆಶಾಸ್ಥಾನವಾಗಿದೆ. ಹಿಂದೂ ರಾಷ್ಟ್ರದ ಹೋರಾಟದಲ್ಲಿ ನಾನು ನಿಮ್ಮೊಂದಿಗಿದ್ದೇನೆ ಎಂಬ ಅಭಿಪ್ರಾಯವನ್ನು `ಗೋವಾ ಕ್ರಾನಿಕಲ್’ನ ಸಂಪಾದಕ ಸಾವಿಯೋ ರೊಡ್ರಿಗ್ಸ್, ಇವರು ವ್ಯಕ್ತಪಡಿಸಿದರು.

ಅವರು ಗೋವಾದ ರಾಮನಾಥ ದೇವಸ್ಥಾನದಲ್ಲಿ ಆಯೋಜಿಸಲಾದ ಆರನೇ `ಅಖಿಲ ಭಾರತೀಯ ಹಿಂದೂ ಅಧಿವೇಶನ’ದ ಅಂತಿಮ ದಿನದಂದು `ಹಿಂದೂ ರಾಷ್ಟ್ರ ಸಾ ್ಥ ಪನೆಯ ದಿಶೆ’ ಎಂಬ ವಿಷಯದಲ್ಲಿನ ಚರ್ಚೆಯಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಮತ್ತು `ಹಿಂದೂ ಫ್ರಂಟ್ ಫಾರ್ ಜಸ್ಟೀಸ್’ನ ಅಧ್ಯಕ್ಷ ಲಕ್ಷ ್ಮಣಪುರಿಯ (ಲಖ್ನೌ) ಹರಿ ಶಂಕರ ಜೈನ ಇವರೂ ತಮ್ಮ ಮನೋಗತವನ್ನು ವ್ಯಕ್ತ ಪಡಿಸಿದರು. ಜೂನ್ 14 ರಂದು ಪ್ರಾರಂಭವಾದ ಈ ಅಧಿವೇಶನವು 17 ಜೂನ್ ನಂದು ಅತೀ ಉತ್ಸಾಹದಿಂದ ಸಮಾಪ್ತಿಯಾಯಿತು
`ಐಸಿಸ್’ ವಿರುದ್ಧ ಎಲ್ಲರೂ ಸಂಘಟಿತವಾಗಿ ಹೋರಾಡಬೇಕಾಗಬಹುದು ! – ಪಾರಸ ರಾಜಪುತ, ಹಿಂದೂ ಹೆಲ್ಪ್ ಲೈನ್’
ಮುಂಬೈ `ಐಸಿಸ್’ ನಿಂದ ಪಾಶ್ಚಾತ್ಯ ದೇಶಗಳಿಗೆ ಎಷ್ಟು ಅಪಾಯವಿದೆಯೋ ಅಷ್ಟೇ ದೊಡ್ಡ ಪ್ರಮಾಣದಲ್ಲಿ ಭಾರತಕ್ಕೂ ಇದೆ. ಈ ಅಪಾಯವನ್ನು ಸರಕಾರವೂ ಅಷ್ಟೇ ಗಾಂಭೀರ್ಯದಿಂದ ತೆಗೆದುಕೊಳ್ಳಬೇಕು. `ಐಸಿಸ್’ ನ ವಿರುದ್ಧ ದ ಹೋರಾಟವು ಯಶಸ್ವಿಯಾಗಬೇಕಾದರೆ ಎಲ್ಲರೂ ಸಂಘಟಿತರಾಗಿ ಹೋರಾಡಬೇಕಾಗಬಹುದು ಎಂದು ಮುಂಬೈಯ ಹಿಂದೂ ಹೆಲ್ಪ್ ಲೈನ್’ನ ಪಾರಸ ರಾಜಪುತರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಅವರು `ಭಾರತ – ಇಸ್ಲಾಮಿಕ್ ಸ್ಟೇಟ್ ಅಥವಾ ಹಿಂದೂ ರಾಷ್ಟ್ರ’ ಎಂಬ ವಿಷಯದಲ್ಲಿನ ಚರ್ಚಾಕೂಟದಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ `ಲಷ್ಕರ-ಎ-ಹಿಂದ್’ನ ರಾಷ್ಟ್ರೀಯ ಅಧ್ಯಕ್ಷ ಶ್ರೀ.ಈಶ್ವರಪ್ರಸಾದ ಖಂಡೆಲವಾಲ ಇವರೂ ತಮ್ಮ ಮನೋಗತವನ್ನು ವ್ಯಕ್ತಪಡಿಸಿದರು. ನ್ಯಾಯವಾದಿಗಳ ಉದ್ಬೋಧನಾ ಸತ್ರದಲ್ಲಿ ರಾಷ್ಟ್ರ ಮತ್ತು ಧರ್ಮ ಇವುಗಳ ಮೇಲಾಗುವ ಆಘಾತಗಳ ವಿರುದ್ಧ ಎಲ್ಲ ನ್ಯಾಯವಾದಿಗಳು ಸಂಘಟಿತವಾಗಿ ಕೃತಿ ಮಾಡುವ ನಿರ್ಧಾರ ವ್ಯಕ್ತಪಡಿಸಿದರು.


Spread the love

Exit mobile version