ಹಿಂದೂ ಸಂಘಟನೆಗಳ ಬಗ್ಗೆ ಮುಖ್ಯಮಂತ್ರಿ ದ್ವೇಷ: ಯಶಪಾಲ್ ಸುವರ್ಣ ಖಂಡನೆ
ಉಡುಪಿ: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಇಂದಿನ ವರೆಗೂ ಸಂಘ ಪರಿವಾರ, ಹಿಂದೂ ಸಂಘಟನೆಗಳು ಹಾಗೂ ಹಿಂದೂ ನಾಯಕರ ವಿರುದ್ದ ದ್ವೇಷದ ಉರಿಯನ್ನು ಕಾರತ್ತಲೇ ಬರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ಬಂಧಿಸುವ ಮಾತನಾಡುತ್ತಿರುವುದನ್ನು ಬಿಜೆಪಿ ನಾಯಕ ಯಶಪಾಲ್ ಸುವರ್ಣ ತೀವ್ರವಾಗಿ ಟೀಕಿಸಿದ್ದಾರೆ.
ರಾಜ್ಯದಲ್ಲಿ ತನ್ನ ಅಸಮರ್ಥತೆಯಿಂದ ಹಳಿ ತಪ್ಪಿರುವ ಕಾನೂನು ಸುವ್ಯವಸ್ಥೆಯನ್ನು ಸರಿಪಡಿಸಲಾಗದ, ಎಲ್ಲಾ ಮತ, ಧರ್ಮಗಳ ಜನರ ಹಿತರಕ್ಷಣೆಯನ್ನು ಸಾಧಿಸಲಾಗದ ಸಿದ್ದರಾಮಯ್ಯ, ತಾನೊಬ್ಬ ಹಿಂದುವಾಗಿ ಹುಟ್ಟಿರುವುದಕ್ಕೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದಿದ್ದಾರೆ.
ರಾಜ್ಯದಲ್ಲಿ ತಾಂಡವವಾಡುತ್ತಿರುವ ಕೋಮುಗಲಭೆಗಳನ್ನು ವಿನಾಕಾರಣ ಹಿಂದು ಸಂಘಟನೆಗಳ ಹಾಗೂ ಅದರ ಮುಖಂಡರ ತಲೆಗೆ ಕಟ್ಟುವ ಕೆಟ್ಟ ಚಾಳಿಯನ್ನು ಸಿದ್ದರಾಮಯ್ಯ ಕೈಬಿಡದಿದ್ದರೆ ನಾಡಿನ ಅಸಂಖ್ಯ ಹಿಂದೂ ಸ್ವಾಭಿಮಾನಿ ಕಾರ್ಯಕರ್ತರ ಉಗ್ರ ಹೋರಾಟವನ್ನು ಎದುರಿಸಬೇಕಾದಿತು ಎಂದು ಯಶ್ಪಾಲ್ ಸುವರ್ಣ ಎಚ್ಚರಿಸಿದ್ದಾರೆ.