ಹಿಂದೂ ಹುಡುಗಿಯ ಮದುವೆಗೆ ಮುಸ್ಲಿಮರ ನೇತ್ರತ್ವ ವಹಿಸಿ ಮಾದರಿಯಾದ ಗ್ರಾಮಸ್ಥರು
ಉಡುಪಿ: ಬಡತನಕ್ಕೆ ಜಾತಿ ಇಲ್ಲ. ಪರೋಪಕಾರವೇ ದೊಡ್ಡ ಧರ್ಮ ಈ ಮಾತಿಗೆ ಪೂರಕವಾದ ಘಟನೆ ಗುರುವಾರ ಕಾಪುವಿನಲ್ಲಿ ಮದುವೆ ಸಮಾರಂಭವೊಂದರಲ್ಲಿ ಕಂಡು ಬಂದಿದೆ. ಹಿಂದೂ ಧರ್ಮಕ್ಕೆ ಸೇರಿದ ಬಡ ಹೆಣ್ಣಿನ ಮದುವೆಗೆ ಊರ ಮುಸ್ಲಿಮರು ಸಾಥ್ ನೀಡಿದರೆ, ಇವರೊಂದಿಗೆ ಸ್ಥಳೀಯರು ಬೆಂಬಲಿಸಿ ಸಹಕರಿಸುವ ಮೂಲಕ ಮಾದರಿಯಾಗಿದ್ದಾರೆ.
ಘಟನೆಯ ಹಿನ್ನಲೆ: ಕಾಪು ಫಕೀರ್ಣಕಟ್ಟೆಯ ಜನತಾಕಾಲನಿಯ ನಿವಾಸಿಯಾದ ದಿವ್ಯ ಬಾಲ್ಯದಲ್ಲೇ ತನ್ನ ಹೆತ್ತವರನ್ನು ಕಳೆದು ಕೊಂಡು ದೊಡ್ಡಮ್ಮನಾದ ಮೋಹಿಣಿ ಯ ಆರೈಕೆಯಲ್ಲಿ ಬೆಳೆದಿದ್ದರು. ಮದುವೆಯ ವಯಸ್ಸು ಬಂದಿದ್ದು ಗಂಡನನ್ನು ಹುಡುಕುವ ಪ್ರಯತ್ನದಲ್ಲಿದ್ದರೂ ಬಡತನದ ಕಾರಣ ಹಿನ್ನಡೆಯಾಗಿತ್ತು. ಈ ಸಂದರ್ಭ ಮೊಹಿನಿಯವರ ನೆರೆಕೆರಯ ನಿವಾಸಿ ಕೈರುನ್ನೀಸಾ ಉಚ್ಚಿಲ ಸಮೀಪದ ಪಣಿಯೂರಿನ ಮಂಜುನಾಥ ಎಂಬ ಹುಡುಗನ ನೆಂಟಸ್ಥಿಕೆಯನ್ನು ತಂದಿದ್ದು ಮದುವೆಗೆ ದಿನ ನಿಗದಿ ಪಡಿಸಲಾಯಿತು.
ದಿವ್ಯ ಳ ಮದುವೆಯನ್ನು ದೊಡ್ಡಮ್ಮ ಇತರರರಂತೆ ಒಳ್ಳೇ ಸಂಭ್ರಮ ಸಡಗರದಲ್ಲೇ ನಡೆಸಬೇಕು ಎಂನ್ನೋ ಮಹದಾಸೆ ಇದ್ದರೂ ಬಡತನ ದ ಕಾರಣದಿಂದ ವಿವಾಹ ನೊಂದಣಿ ಮೂಲಕವೇ ಮದುವೆ ನಡೆಸುವ ಇರಾದೆಯಲ್ಲಿದ್ದರು. ಇದನ್ನು ಮನಗಂಡ ಕೈರುನ್ನೀಸಾ ಈ ವಿಷಯವನ್ನು ಮಲ್ಲಾರಿನ ಸಮಾಜ ಸೇವಕ ಮಾಜಿ ಪಂಚಾಯತ್ ಅಧ್ಯಕ್ಷ ಮೊಹ್ಮಮದ್ ಸಾದಿಕ್ ದಿನಾರ್ ರವರ ಗಮನಕ್ಕೆ ತಂದಿದ್ದರು. ತಕ್ಷಣ ಸ್ಪಂದಿಸಿದ ಮೊಹ್ಮಮದ್ ಸಾದಿಕ್ ದಿನಾರ್ ಮದುವೆಯ ಔತನಕೂಟವನ್ನು ತನ್ನ ಮನೆಯಲ್ಲೇ ಸ್ವಂತ ಖರ್ಚಿನಲ್ಲಿ ಮಾಡಿಸುತ್ತೇನೆ ಎಂದು ಭರವಸೆ ನೀಡಿದ್ದರು.
ಈ ಸಂಭ್ರಮದಲ್ಲಿ ಊರ ಮಂದಿ ಎಲ್ಲರೂ ಭಾಗಿಯಾಗಬೇಕು ಎನ್ನೋ ಇರಾದೆಯಲ್ಲಿ ತನ್ನ ಸ್ನೇಹಿತರಾದ ಲುತ್ಫುಲ್ಲಾ ರೆಹೆಮಾನ್, ಲೀಲಾಧರ ಶೆಟ್ಟಿ, ನಝೀರ್ ಅಹಮದ್, ಸುಧಾಕರ ಶೆಟ್ಟಿ, ಶಫೀ ಅಹಮದ್ ಖಾಝಿ, ದಿವಾಕರ ಶೆಟ್ಟಿ, ಅಬ್ದುಲ್ ಹಮೀದ್ ತೆಲಿಬೆಟ್ಟು, ರಶೀದ್ ಮಕರ, ಹೈದರ್ ಮತ್ತು ಭಾಪುರವನ್ನು ಸೇರಿ ಮದುವೆ ಕಾರ್ಯಕ್ಕೆ ಇಳಿದರು. ಈ ಕಾರ್ಯಕ್ಕೆ ಎಲ್ಲರ ಸಹಕಾರ ದೊರೆಯಿತು. ಕಳತ್ತೂರು ಕುಶಲಶೇಕರ ಶೆಟ್ಟಿ ಸಭಾಂಗಣದ ಮಾಲಿಕರು ಸಭಾಂಗಣವನ್ನು ಉಚಿತವಾಗಿ ಒದಗಿಸಿದರೆ, ಯುನಿಟಿ ಎಸೋಸಿಯೆಶನ್ ಸದಸ್ಯರು ವಧುವಿಗೆ ಬಂಗಾರದ ಉಡುಗೊರೆಯನ್ನು ನೀಡಿದರು. ಮಂಗಳವಾರ ನಡೆದಿದ್ದ ಮೆಹೆಂದಿ ಕಾರ್ಯಕ್ರಮದ ಸಂಪುರ್ಣ ಖರ್ಚು ವೆಚ್ಚವನ್ನು ಪಕಿರ್ಣಕಟ್ಟೆಯ ಮುಸ್ಲಿಂ ಬಂಧುಗಳು ವಹಿಸಿದ್ದರು.
ಗರುವಾರ ಬೆಳಿಗ್ಗೆ ಕಟೀಲು ದುರ್ಗಾ ಪರಮೇಶ್ವರೀ ಧೇವಳದಲ್ಲಿ ಮದುವೆ ಸಂಪನ್ನಗೊಂಡರೆ ಮಧ್ಯಾಹ್ನ ಕಳತ್ತೂರು ಶೇಖರ ಶೆಟ್ಟಿ ಸಭಾಂಗಣದಲ್ಲಿ ಸಂಭ್ರಮದ ಔತಣಕೂಟ ನಡೆಯಿತು ಇದರಲ್ಲಿ ಶಾಖಾಹಾರಿ ಮತ್ತು ಮಾಂಸಾಹಾರಿ ಎರಡೂ ವಿಧದ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಶಾಸಕ ವಿನಯಕುಮಾರ್ ಸೊರಕೆ, ಕಾಪು ಪುರಸಭಾ ಮುಖ್ಯಧಿಕಾರಿ ರಾಯಪ್ಪ, ಬಿಜೆಪಿ ಮುಖಂಡರಾದ ಅರುಣ್ ಶೆಟ್ಟಿ ಪಾದೂರು, ಮದುವೆಯ ಸಂಭ್ರಮದಲ್ಲಿ ಭಾಗವಹಿಸಿ ಸಾಕ್ಷೀಕರಿಸಿದರು.
ಬಡತನದ ಕಾರಣದಿಂದ ದಿವ್ಯಳ ಮದುವೆಯನ್ನು ರಿಜಿಸ್ಟ್ರಿ ಗೇ ಸೀಮಿತಗೊಳಿಸಬೇಕು ಎನ್ನೋ ಇರಾದೆಗೆ ಬಂದಿದ್ದೆವು. ಆದರೆ ಇಂದು ಎಲ್ಲಾ ಸಮುದಾಯವದರು ಸಹಕರಸಿ ವಿಶೇಷವಾಗಿ ಮುಸ್ಲಿಂ ಬಾಂಧವರು ಯಾವುದಕ್ಕೂ ಏನೂ ಕೊರತೆಯಾಗದಂತೆ ನಮ್ಮೊಂದಿಗೆ ಇದ್ದು ಸಹಕರಿಸಿದ್ದಾರೆ. ಇಂತಹ ಮನಸ್ಸುಗಳು ಇದ್ದರೆ ನಮ್ಮತಹ ಬಡವರು ಯಾವತ್ತೂ ಭಯಪಡಬೇಕಾಗಿಲ್ಲ
GREAT JOB IN FUTURE ALSO SUCH THINGS SHOULD HAPPEN INSTEAD OF POLITICIZING THINGS POOR SHOULD BE GET HELP
It is great. As a community, we are all one and live in peace. It is the politicians for their vote bank DIVIDE AND RULE.
ಊರಲ್ಲೊಂದು ಇಂತಹ ನಮ್ರ ಹೃದಯಿಗಳು ಕಾಣಸಿಕ್ಕರೆ ಬಹುಶ; ಬಡವರೂ ಕೂಡ ಸುಖನಿದ್ರೆಯಿಂದ ರಾತ್ರಿ ಕಳೆಯುವಂತಾದೀತು.
‘ಹಿಂದೂಮುಸ್ಲಿಂಸಿಖ್ಈಸಾಯಿ’ ನಮ್ಮೆಲ್ಲರ ರಕ್ಷೆಗೆ ನಾವೇ ಸಿಪಾಯೀ…..