ಹಿಜಾಬ್ ಮಹಿಳೆಯರು, ಗೋಮಾಂಸ ಭಕ್ಷಕರನ್ನು ದೇವಸ್ಥಾನಕ್ಕೆ ಕರೆಸಿ ಅಪವಿತ್ರಗೊಳಿಸಿದ ರಘುಪತಿ ಭಟ್

Spread the love

ಹಿಜಾಬ್ ಮಹಿಳೆಯರು, ಗೋಮಾಂಸ ಭಕ್ಷಕರನ್ನು ದೇವಸ್ಥಾನಕ್ಕೆ ಕರೆಸಿ ಅಪವಿತ್ರಗೊಳಿಸಿದ ರಘುಪತಿ ಭಟ್

  • ಹಿಂದೂ ಸಮಾಜದ ಕ್ಷಮೆ ಯಾಚಿಸುವಂತೆ ಹಿಂದೂ ಯುವ ಸೇನೆ ನಗರ ಅಧ್ಯಕ್ಷ ಸುನೀಲ್ ಪೂಜಾರಿ ನೇಜಾರ್ ಆಗ್ರಹ

ಉಡುಪಿ: ಉಡುಪಿಯ ಪ್ರಸಿದ್ಧ ಕರಂಬಳ್ಳಿ ವೆಂಕಟರಮಣ ದೇವಸ್ಥಾನಕ್ಕೆ ಬುರ್ಖಾ ಹಿಜಾಬ್ ಮಹಿಳೆಯರು ಹಾಗೂ ಗೋಮಾಂಸ ಭಕ್ಷಕರು ಪಾದರಕ್ಷೆ ಧರಿಸಿ ಪ್ರವೇಶ ಮಾಡಿ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದು ಅವರನ್ನು ದೇವಸ್ಥಾನಕ್ಕೆ ಕರೆತಂದ ಮಾಜಿ ಶಾಸಕ ರಘುಪತಿ ಭಟ್ ತಕ್ಷಣ ಹಿಂದೂ ಸಮಾಜದ ಕ್ಷಮೆ ಯಾಚಿಸಬೇಕು ಎಂದು ಹಿಂದೂ ಯುವ ಸೇನೆ ಉಡುಪಿ ನಗರ ಅಧ್ಯಕ್ಷ ಶ್ರೀ ಸುನೀಲ್ ಪೂಜಾರಿ ನೇಜಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮದೇ ಮುಸ್ಲಿಂ ಸಮುದಾಯದ ಮಸೀದಿಯಲ್ಲಿ ಪ್ರವೇಶ ನಿಷೇಧ ಹೊಂದಿರುವ ಬುರ್ಖಾಧಾರಿ ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸಿ ತಮ್ಮ ಮುಖವನ್ನು ಮರೆಮಾಚಿ ದೇವಸ್ಥಾನಕ್ಕೆ ಪ್ರವೇಶ ನೀಡಿದ್ದು ಎಷ್ಟು ಸರಿ.

ಮೂರ್ತಿ ಪೂಜೆಯನ್ನು ನಂಬದೇ ಇರುವ ಗೋಮಾಂಸ ಭಕ್ಷಣೆ ಮಾಡುವ ವ್ಯಕ್ತಿಗಳಿಗೆ ಹಿಂದೂ ಸಮಾಜದ ಪವಿತ್ರ ದೇವಸ್ಥಾನಕ್ಕೆ ಬರಮಾಡಿಕೊಂಡು ನೇತೃತ್ವ ವಹಿಸಿದ ರಘುಪತಿ ಭಟ್ ಅದೇ ದೇವಸ್ಥಾನದ ಮೊಕ್ತೇಸರರಾಗಿ ದೇಗುಲದ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದು ಅಕ್ಷಮ್ಯ.

ಅಂದು ಹಿಜಾಬ್ ಹೋರಾಟ ಸಂದರ್ಭದಲ್ಲಿ ಖಟ್ಟರ್ ಹಿಂದುತ್ವವಾದಿಯಂತೆ ಹೇಳಿಕೆ ನೀಡುತ್ತಿದ್ದ ರಘುಪತಿ ಭಟ್ ಇದೀಗ ಅದೇ ಹಿಜಾಬ್ ಮಹಿಳೆಯರ ನೆಚ್ಚಿನ ನಾಯಕರಾಗಿ ಹೇಳಿಕೆ ನೀಡುತ್ತಿರುವುದು ಅವರನ್ನು ಮೂರು ಬಾರಿ ಶಾಸಕರಾಗಿ ಆಯ್ಕೆ ಮಾಡಿದ ಹಿಂದೂಗಳಿಗೆ ಮಾಡಿದ ಅಪಮಾನ.

ಹಿಂದೂ ಸಮಾಜದ ಮಾರ್ಗದರ್ಶಕರಾಗಿರುವ ಉಡುಪಿ ಅಷ್ಟ ಮಠಗಳ ಯತಿಗಳು ಸಹಿತ ಎಲ್ಲಾ ಧಾರ್ಮಿಕ ಮುಖಂಡರು ಇಂದಿನ ಘಟನೆಯನ್ನು ಒಕ್ಕೊರಲಿನಿಂದ ಖಂಡಿಸಿ ಹಿಂದೂ ಸಮಾಜದ ಜನತೆಯ ಮುಂದೆ ರಘುಪತಿ ಭಟ್ ಕ್ಷಮೆಯಾಚನೆಗೆ ಸೂಚಿಸಬೇಕು ಹಾಗೂ ಅಪವಿತ್ರಗೊಂಡಿರುವ ಕರಂಬಳ್ಳಿ ದೇವಸ್ಥಾನವನ್ನು ತಕ್ಷಣ ಹಿಂದೂ ಸಂಪ್ರದಾಯದ ಪ್ರಕಾರ ಪಾವಿತ್ರ್ಯತೆ ಕಾಪಾಡಲು ಕ್ರಮ ಕೈಗೊಳ್ಳಬೇಕು.

ಇದೇ ರೀತಿ ರಘುಪತಿ ಭಟ್ ಮತೀಯ ಶಕ್ತಿಗಳೊಂದಿಗೆ ಕೈ ಜೋಡಿಸಿ ಹಿಂದೂ ಭಾವನೆಗೆ ಧಕ್ಕೆ ತರುವ ಪ್ರಯತ್ನ ಮುಂದುವರಿದರೆ ಸಮಸ್ತ ಹಿಂದೂ ಕಾರ್ಯಕರ್ತರು ಜೊತೆಗೂಡಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love