ಹಿಜಾಬ್ ವಿವಾದ: ಉತ್ತಮ ಪ್ರಾಂಶುಪಾಲ ಪ್ರಶಸ್ತಿ ತಡೆ ಹಿಡಿದ ಸರ್ಕಾರ!
ಕುಂದಾಪುರ: ಕಳೆದ ಎರಡು ವರ್ಷಗಳ ಹಿಂದೆ ಹಿಜಾಬ್ ಕಾರಣದಿಂದಾಗಿ ಸುದ್ದಿಯಾಗಿದ್ದ ಕುಂದಾಪುರದ ಸರ್ಕಾರಿ ಪದವಿಪೂರ್ವ ಕಾಲೇಜು ಇದೀಗ ಮತ್ತೆ ಸುದ್ದಿಯಲ್ಲಿದೆ. ಶಿಕ್ಷಕರ ದಿನಾಚರಣೆ ಸಂದರ್ಭ ಕೊಡಮಾಡುವ ರಾಜ್ಯಮಟ್ಟದ ಉತ್ತಮ ಪ್ರಾಂಶುಪಾಲ ಪ್ರಶಸ್ತಿಗೆ ಆಯ್ಕೆಯಾಗಿದ್ದ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರ ಹೆಸರನ್ನು ಸರ್ಕಾರ ತಡೆ ಹಿಡಿದು ಆದೇಶ ನೀಡಿದೆ.
ಎರಡು ವರ್ಷಗಳ ಹಿಂದೆ ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸರ್ಕಾರದ ಆದೇಶದಂತೆ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಅಂದಿನ ಪ್ರಾಂಶುಪಾಲರಾಗಿದ್ದ ರಾಮಕೃಷ್ಣ ಬಿಜಿ ಅವರು ಒಳಪ್ರವೇಶಿಸದಂತೆ ಗೇಟ್ ನಲ್ಲಿ ತಡೆದಿದ್ದರು. ಆ ಬಳಿಕ ಹಿಜಾಬ್ ವಿರುದ್ದ ರಾಜ್ಯವ್ಯಾಪಿ ಪ್ರತಿಭಟನೆ ಬಿರುಸು ಪಡೆದುಕೊಂಡಿತ್ತು.
ಹೀಗಾಗಿ ಪ್ರಶಸ್ತಿ ಘೋಷಿಸಿದ ಬೆನ್ನಲ್ಲೇ ಕೆಲ ಪ್ರಗತಿಪರರು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಆಕ್ಷೇಪ ವ್ಯಪ್ತಪಡಿ ಸಿಸರ್ಕಾರದ ನಡೆಯನ್ನು ಖಂಡಿಸಿದ್ದರು. ಸಾಕಷ್ಟು ಟೀಕೆಗಳ ಬಳಿಕ ಪ್ರಾಂಶುಪಾಲರಿಗೆ ನೀಡಲು ಉದ್ದೇಶಿಸಿದ್ದ ಪ್ರಶಸ್ತಿಯನ್ನು ತಡೆ ಹಿಡಿಯುವಂತೆ ರಾಜ್ಯ ಸರಕಾರ ಆದೇಶಿಸಿದೆ.
ಸರ್ಕಾರದ ಈ ನಡೆಯ ವಿರುದ್ದ ಸಾಕಷ್ಟು ಪರ-ವಿರೋಧ ಚರ್ಚೆಗಳು ವ್ಯಕ್ತವಾಗುತ್ತಿವೆ.