ಹಿಮ್ಮುಖ ಚಲಿಸಿ ಪಕ್ಕಕ್ಕೆ ವಾಲಿದ ಟ್ರಕ್ : ತಪ್ಪಿದ ಭಾರಿ ಅನಾಹುತ
ಮಂಗಳೂರು: ನೆಲಕ್ಕೆ ಹಾಸುವ ಮಾರ್ಬಲ್ ಕಲ್ಲುಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಒಂದು ಪಕ್ಕಕ್ಕೆ ವಾಲಿದ ಪರಿಣಾಮ ನಡೆಯಬೇಕಿದ್ದ ಭಾರಿ ದುರಂತ ಸ್ವಲ್ಪದರಲ್ಲೇ ತಪ್ಪಿದ ಘಟನೆ ಬೆಂದೂರ್ ವೆಲ್ ಬಳಿ ಗುರುವಾರ ಸಂಭವಿಸಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಮಾರ್ಬಲ್ ಕಲ್ಲುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಇಳಿಜಾರಿನಲ್ಲಿ ನಿಲುಗಡೆಗೊಳಿಸಿದ್ದು, ಚಕ್ರಗಳಿಗೆ ಆಧಾರವಾಗಿ ಕಲ್ಲುಗಳನ್ನು ಇಡಲಾಗಿತ್ತು ಎನ್ನಲಾಗಿದೆ. ಚಾಲಕನು ಮತ್ತೆ ಚಕ್ರಗಳಿಗೆ ಇಡಲಾದ ಕಲ್ಲನ್ನು ತೆಗೆದ ವೇಳೆ ಹಿಮ್ಮುಖವಾಗಿ ಚಲಿಸಿದ ಲಾರಿ ಪಕ್ಕದ ಕಟ್ಟಡಕ್ಕೆ ಗುದ್ದಿ ವಾಲಿಕೊಂಡು ನಿತ್ತಿತು ಎನ್ನಲಾಗಿದೆ. ಈ ವೇಳೆ ಅಲ್ಲಿಯೇ ಪಕ್ಕದಲ್ಲಿ ನಿಲ್ಲಿಸಲಾದ ಮೋಟರ್ ಬೈಕೊಂದು ನಜ್ಜುಗುಜ್ಜಾಗಿದೆ ಎನ್ನಲಾಗಿದೆ.
ಪ್ರತಿನಿತ್ಯ ಹಲವಾರು ಮಂದಿ ಇದೇ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದು, ಇಂದು ಕೇವಲ ಎರಡು ವಾಹನಗಳು ಮಾತ್ರ ಇದ್ದವು ಘಟನೆಯಿಂದ ಮೊಟಾರ್ ಬೈಕಿಗೆ ಹಾನಿಯಾಗಿದ್ದು ಪಕ್ಕದಲ್ಲಿ ಇದ್ದ ಇನ್ನೊಂದು ಕಾರಿಗೆ ಯಾವುದೇ ಹಾನಿ ಆಗಿಲ್ಲ. ಸ್ವಲ್ಪ ಹೆಚ್ಚುಕಡಿಮೆಯಾದರೂ ಬಲು ದೊಡ್ಡ ಅನಾಹುತ ಸಂಭವಿಸಲಿತ್ತು ಎನ್ನುತ್ತಾರೆ ಪ್ರತ್ಯಕ್ಷ ದರ್ಶಿಗಳು.
ಸ್ಥಳಕ್ಕೆ ಕದ್ರಿ ಪೋಲಿಸರು ಆಗಮಿಸಿದ್ದು ಎರಡ ಕ್ರೇನ್ ಗಳನ್ನು ಲಾರಿಯನ್ನು ಯಥಾಸ್ಥಿತಿಗೆ ತರಲು ಬರಮಾಡಿಕೊಂಡಿದ್ದು, ಲಾರಿಯಲ್ಲಿನ ಟೈಲ್ಸ್ ತೆಗೆದ ಬಳಿಕವಷ್ಟೆ ತಹಬದಿಗೆ ತರಲು ಸಾಧ್ಯ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.