ಹಿರಿಯಡಕದಲ್ಲಿ ಜನಸ್ಪಂದನ ಕಾರ್ಯಕ್ರಮ 450 ಫಲಾನುಭವಿಗಳಿಗೆ ಸವಲತ್ತು ವಿತರಣೆ

Spread the love

ಹಿರಿಯಡಕದಲ್ಲಿ ಜನಸ್ಪಂದನ  ಕಾರ್ಯಕ್ರಮ 450 ಫಲಾನುಭವಿಗಳಿಗೆ ಸವಲತ್ತು ವಿತರಣೆ

ಉಡುಪಿ:- ಹಿರಿಯಡಕದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ  ಜನಸ್ಪಂದನ ಹಾಗೂ ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮ ಜರಗಿತು.

ಹಿರಿಯಡಕ ಜಿಲ್ಲಾ ಪಂಚಾಯತ್ ಸದಸ್ಯೆ ಚಂದ್ರಿಕಾ ಆರ್ ಕೇಲ್ಕರ್ ಸಭಾ ಕಾರ್ಯಕ್ರಮ ಉದ್ಘಾಟಿಸಿ ರಾಜ್ಯ ಸರ್ಕಾರದ ಸಾಧನೆಗಳು ಇಂದು ಪ್ರತಿಯೊಬ್ಬರ ಮನೆಮನೆಗೂ ತಲುಪುವಂತಾಗಿದ್ದು ಕಾಪು ಕ್ಷೇತ್ರದ ಶಾಸಕರಾದ ವಿನಯಕುಮಾರ್ ಸೊರಕೆಯವರು ನಮ್ಮ ಹಿರಿಯಡಕ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 75 ಕೋಟಿ ರೂ ಹೆಚ್ಚಿನ  ಕಾಮಗಾರಿಯನ್ನು ಮಾಡಿದ್ದು  ಸದಾ ಕಾಲ ಜನ ಸಾಮಾನ್ಯರೊಂದಿಗೆ ಬೆರೆಯುವ ಒಬ್ಬ ಪ್ರಾಮಾಣಿಕ ಶಾಸಕರಾಗಿದ್ದಾರೆ ಎಂದು ತಿಳಿಸಿದರು.

 ಕಾಪು ಕ್ಷೇತ್ರದ ಶಾಸಕರಾದ ವಿನಯಕುಮಾರ್ ಸೊರಕೆಯವರ ಶಿಫಾರಸಿ ಮೇರೆಗೆ 94 ಸಿ ಮತ್ತು 94ಸಿಸಿ ಹಕ್ಕು ಪತ್ರ ,ವಿವಿಧ ಮಾಸಶನಗಳ ಸವಲತ್ತು ,ಪವರ್ ಟಿಲ್ಲರ್,ಗಿಡಕತ್ತರಿಸುವ ಯಂತ್ರ , ಭಾಗ್ಯಲಕ್ಷ್ಮೀ ಯೋಜನೆ ಬಾಂಡ್,ಸುತ್ತುನಿಧಿ,ಹಾಗೂ ಇನ್ನಿತರ ಸವಲತ್ತು ವಿತರಿಸಲಾಯಿತು.

 ಈ ಸಭೆಯನ್ನುದ್ದೇಶಿಸಿ ತಾಲೂಕು ಪಂಚಾಯತ್ ಸದಸ್ಯರಾದ ಲಕ್ಷ್ಮೀನಾರಾಯಣ ಪ್ರಭು , ಸಂಧ್ಯಾ ಶೆಟ್ಟಿ ,ಗೋಪಿ ಕೆ ನಾಯ್ಕ್, ಪಂಚಾಯತ್ ಅಧ್ಯಕ್ಷರಾದ ಮಾಲತಿ ಆಚಾರ್ಯ ಸರಕಾರದ ವಿವಿಧ ಯೋಜನೆಗಳು ಮತ್ತು ಅಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

 ಈ ಸಂದರ್ಭದಲ್ಲಿ ಸರಕಾರದ ವಿವಿಧ ಇಲಾಖೆಯ  ಅಧಿಕಾರಿಗಳು ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜು ಪೂಜಾರಿ, ವಿವಿಧ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಕಿರಣ್ ಕುಮಾರ್ ಹೆಗ್ಡೆ, ಚಂದ್ರಶೇಖರ ಗುಡ್ಡೆಅಂಗಡಿ,ಗಣೇಶ್ ಶೆಟ್ಟಿ ಕೊಡಿಬೆಟ್ಟು, ವಿನೋದ್ ಕುಮಾರ್ ಹಿರಿಯಡಕ, ಅಕ್ರಮ ಸಕ್ರಮ ಸಮಿತಿಯ ಸದಸ್ಯ ಕುತ್ಯಾರು ಬೀಡು ಶ್ರೀಧರ ಶೆಟ್ಟಿ ಬೈರಂಪಳ್ಳಿ, ಶಾಸಕರ ಆಪ್ತ ಕಾರ್ಯದರ್ಶಿ ಆಶೋಕ ನಾಯರಿ,ಪ್ರಶಾಂತ ಹಿರಿಯಡಕ,ಹಾಗೂ ಇನ್ನಿತರ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

 ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮೋಹನ್ ರಾಜ್ ಸ್ವಾಗತಿಸಿದರು. ಉಡುಪಿ –ಬ್ರಹ್ಮಾವರ ತಾಲೂಕು ತಹಶೀಲ್ದಾರಾದ ಪ್ರದೀಪ್ ಕುರುಡೇಕರ್ ಪ್ರಸ್ತಾವಿಕವಾಗಿ ಮಾತನಾಡಿದರು. ಹಿರಿಯರಾದ ಹಿರಿಯಡಕ ಜಯವಂತ ರಾವ್ ಕಾರ್ಯಕ್ರಮ ನಿರೂಪಿಸಿದರು.


Spread the love