ಹಿರಿಯಡ್ಕ: ತಲೆಮರೆಸಿಕೊಂಡಿದ್ದ ಪೋಕ್ಸೊ ಆರೋಪಿಯ ಬಂಧನ
ಉಡುಪಿ: ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಅಪ್ರಾಪ್ತ ವಯಸ್ಸಿನ ಹುಡುಗಿಯರಿಗೆ ಲೈಂಗಿಕ ಕಿರುಕುಳ ನೀಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೈರಂಪಳ್ಳಿ ನಿವಾಸಿ ಪ್ರದೀಪ ಶೆಟ್ಟಿ (39) ಎಂದು ಗುರುತಿಸಲಾಗಿದೆ.
2020 ರ ಅಗಸ್ಟ್ 24 ರಂದು ಪಾಲುಜೆಡ್ಡು ಬೈರಂಪಳ್ಳಿ ಎಂಬಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಅಪ್ರಾಪ್ತ ವಯಸ್ಸಿನ ಹುಡುಗಿಯರಿಗೆ ಲೈಂಗಿಕ ಕಿರುಕುಳ ನೀಡಿ ತಲೆಮರೆಸಿಕೊಂಡಿದ್ದು ಆರೋಪಿಯನ್ನು ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ. ಆರೋಪಿಯ ವಿರುದ್ದ 2018ರಲ್ಲಿ ಕೂಡ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ.
ಪತ್ತೆ ಕಾರ್ಯಾಚರಣೆಯು ಜಿಲ್ಲಾ ಎಸ್ಪಿ ಎನ್ ವಿಷ್ಣುವರ್ಧನ್ ರವರ ಮಾರ್ಗದರ್ಶನದಂತೆ ಮತ್ತು ಹೆಚ್ಚುವರಿ ಎಸ್ಪಿ ಕುಮಾರಚಂದ್ರ ನಿರ್ದೇಶದಂತೆ ಪ್ರಕರಣದ ತನಿಖಾಧಿಕಾರಿಯಾದ ಉಡುಪಿ ಡಿವೈಎಸ್ಪಿ ಜೈ ಶಂಕರ್ ನೇತೃತ್ವದಲ್ಲಿ 3 ವಿಶೇಷ ತಂಡಗಳನ್ನು ರಚಿಸಿದ್ದು, ಪತ್ತೆ ಕಾರ್ಯದಲ್ಲಿ ಬ್ರಹ್ಮಾವರ ಸಿಪಿಐ ಅನಂತಪದ್ಮನಾಭ, ಡಿಸಿಐಬಿ ಪಿಐ ಮಂಜಪ್ಪ, ಬ್ರಹ್ಮಾವರ ಪಿ ಎಸ್ ಐ ರಾಘವೆಂದ್ರ, ಹಿರಿಯಡ್ಕ ಪಿಎಸ್ಐ ಸುಧಾಕರ ತೋನ್ಸೆ, ಕಾರ್ಕಳ ನಗರ ಠಾಣೆ ಪಿ ಎಸ್ ಐ ಮಧು, ಬಿ ಹಾಗೂ ಸಿಬಂಧಿಗಳಾದ ಎ ಎಸ್ ಐ ಯೋಗಿಶ್, ಜಯಂತ್, ಹೆಚ್ ಸಿ ವೆಂಕಟರಮಣ, ಚಂದ್ರ ಶೆಟ್ಟಿ, ರತ್ನಾಕರ ಶೆಟ್ಟಿ, ಲೋಕೇಶ, ಪ್ರವೀಣ್ ಶೆಟ್ಟಿಗಾರ್, ಡಿಸಿಐಬಿ ತಂಡ ಮತ್ತು ಚಾಲಕರಾದ ಶಾಂತರಾಮ ಅಣ್ಣಪ್ಪ ಮತ್ತು ಶೇಖರ್ ರವರು ಪಾಲ್ಗೊಂಡಿದ್ದರು.