Home Mangalorean News Kannada News ಹಿರಿಯಡ್ಕ ದನದ ವ್ಯಾಪಾರಿ ಸಾವು: ನಾಲ್ವರು ಬಜರಂಗದಳ ಕಾರ್ಯಕರ್ತರ ಬಂಧನ

ಹಿರಿಯಡ್ಕ ದನದ ವ್ಯಾಪಾರಿ ಸಾವು: ನಾಲ್ವರು ಬಜರಂಗದಳ ಕಾರ್ಯಕರ್ತರ ಬಂಧನ

Spread the love

ಹಿರಿಯಡ್ಕ ದನದ ವ್ಯಾಪಾರಿ ಸಾವು: ನಾಲ್ವರು ಬಜರಂಗದಳ ಕಾರ್ಯಕರ್ತರ ಬಂಧನ

ಉಡುಪಿ: ಪೆರ್ಡೂರಿನ ಸೀನಬೆಟ್ಟು ಎಂಬಲ್ಲಿ ಬಜರಂಗದಳದ ಕಾರ್ಯಕರ್ತರ ದಾಳಿ ವೇಳೆ ಮಂಗಳೂರು ಜೋಕಟ್ಟೆಯ ದನದ ವ್ಯಾಪಾರಿ ಹುಸೈನಬ್ಬ(62) ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ ಶನಿವಾರ ತಿಳಿಸಿದ್ದಾರೆ.

ಬಂಧಿತರನ್ನು ಉಡುಪಿ ಬಜರಂಗದಳ ಮುಖಂಡ ಸುರೇಶ್ ಮೆಂಡನ್ ಯಾನೆ ಸೂರಿ, ಬಜರಂಗದಳ ಕಾರ್ಯಕರ್ತರಾದ ಪ್ರಸಾದ್ ಕೊಂಡಾಡಿ, ಉಮೇಶ್ ಶೆಟ್ಟಿ, ರತನ್ ಬಂಧಿತ ಆರೋಪಿಗಳು. ಸುರೇಶ್ ಹಾಗೂ ಪ್ರಸಾದ್ನನ್ನು ಬಳ್ಳಾರಿ ಯಲ್ಲಿ ಹಾಗೂ ಉಮೇಶ್ ಶೆಟ್ಟಿ ಹಾಗೂ ರತನ್ನನ್ನು ಉಡುಪಿ ಜಿಲ್ಲೆಯಲ್ಲಿ ಬಂಧಿಸಲಾಗಿದೆ.

ಘಟನೆಯ ಬಳಿಕ ಬಳ್ಳಾರಿಯಲ್ಲಿ ತಲೆಮರೆಸಿಕೊಂಡಿದ್ದ ಸುರೇಶ್ ಮೆಂಡನ್, ಪ್ರಸಾದ್ ಹಾಗೂ ದೀಪಕ್ ಶೆಟ್ಟಿಯನ್ನು ಬಳ್ಳಾರಿಯಲ್ಲಿ ವಶಕ್ಕೆ ತೆಗೆದುಕೊಂಡು ಉಡುಪಿ ಕರೆದುಕೊಂಡು ವಿಚಾರಣೆ ನಡೆಸಲಾಗಿತ್ತು. ಇದರಲ್ಲಿ ಸುರೇಶ್ ಹಾಗೂ ಪ್ರಸಾದ್ ಆರೋಪಿಗಳೆಂದು ತಿಳಿದು ಬಂದಿದ್ದು, ಅವರಿಬ್ಬರನ್ನು ಬಂಧಿಸಲಾಗಿದೆ. ಉಳಿದಂತೆ ಉಮೇಶ್ ಹಾಗೂ ರತನ್ನನ್ನು ಉಡುಪಿ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ್ ನಿಂಬರಗಿ ಮಾಹಿತಿ ನೀಡಿದರು.

ಪೆರ್ಡೂರು ಸೀನಬೆಟ್ಟು ಎಂಬಲ್ಲಿ ಮೇ 30ರ ಬೆಳಗ್ಗಿನ ಜಾವ 4 ಗಂಟೆಗೆ ಜಾನುವಾರು ಸಾಗಿಸುತ್ತಿದ್ದಾಗ ವಾಹನದಲ್ಲಿ ಬಂದ ಬಜರಂಗ ದಳ ಕಾರ್ಯಕರ್ತರ ಗುಂಪು ಅಡ್ಡಗಟ್ಟಿದ್ದು, ಈ ವೇಳೆ ಹುಸೈನಬ್ಬ ಅವರಿಗೆ ಮಾರಣಾಂತಿಕ ಹಲ್ಲೆ ನಡೆಸಿದೆ.

ಸ್ಕಾರ್ಪಿಯೋ ವಾಹನದಲ್ಲಿದ್ದ ಉಳಿದಿಬ್ಬರು ಓಡಿ ಹೋಗಿದ್ದು, ಆರೋಪಿಗಳು ಸ್ಕಾರ್ಪಿಯೋ ವಾಹನವನ್ನು ಸಂಪೂರ್ಣ ಜಖಂ ಮಾಡಿದ್ದಾರೆ. ಹುಸೈನಬ್ಬ ಅವರು ಸೂರ್ಯ ಯಾನೆ ಸೂರಿ ಹಾಗೂ ಬಜರಂಗ ದಳದ ಕಾರ್ಯಕರ್ತರ ಗುಂಪು ನಡೆಸಿದ ಹಲ್ಲೆಯಿಂದ ಮೃತಪಟ್ಟಿದ್ದಾಗಿ ಮೃತರ ಸಹೋದರ ಮೊಹಮ್ಮದ್ ಇಸ್ಮಾಯಿಲ್ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಪಿಎಸ್ಐ ಡಿ.ಎನ್. ಕುಮಾರ್ ಅವರನ್ನು ಅಮಾನತುಗೊಳಿಸಿದ್ದು, ಬ್ರಹ್ಮಾವರ ಠಾಣಾಧಿಕಾರಿ ರಫೀಕ್ ಅವರನ್ನು ಪ್ರಭಾರ ಪಿಎಸ್ಐ ಆಗಿ ನಿಯೋಜಿಸಲಾಗಿದೆ. ಅನಂತ ಪದ್ಮನಾಭ ಪ್ರಕರಣದ ತನಿಖಾಧಿಕಾರಿಯಾಗಿದ್ದಾರೆ.


Spread the love

Exit mobile version