ಹಿರಿಯಡ್ಕ : ರೌಡಿ ಶೀಟರ್ ಕಿಶನ್ ಹೆಗ್ಡೆ ಕೊಲೆ ಪ್ರಕರಣ – ಐವರ ಬಂಧನ?

Spread the love

ಹಿರಿಯಡ್ಕ : ರೌಡಿ ಶೀಟರ್ ಕಿಶನ್ ಹೆಗ್ಡೆ ಕೊಲೆ ಪ್ರಕರಣ – ಐವರ ಬಂಧನ?

ಉಡುಪಿ: ಹಿರಿಯಡ್ಕದಲ್ಲಿ ಗುರುವಾರ ನಡೆದ ರೌಡಿ ಶೀಟರ್ ಕಿಶನ್ ಹೆಗ್ಡೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಮಾಹಿತಿ ಲಭಿಸಿದೆ.

ಗುರುವಾರ ಕಿಶನ್ ಹೆಗ್ಡೆ ತನ್ನ ಗೆಳೆಯರೊಂದಿಗೆ ಹಿರಿಯಡ್ಕ ವೀರಭದ್ರ ದೇವಸ್ಥಾನಕ್ಕೆಂದು ತೆರಳಲು ಕಾರಿನಿಂದ ಇಳಿಯುವ ವೇಳೆ ಕೊಲೆ ನಡೆದಿತ್ತು.

ಸುತ್ತಿಗೆ, ಮಾರಕಾಯುಧಗಳನ್ನು ಹಿಡಿದುಕೊಂಡು ಕಾರಿನ ಮುಂಭಾಗದಿಂದ ಆಗಮಿಸಿದ 4-5 ಮಂದಿಯ ತಂಡ ಕಿಶನ್ ಹೆಗ್ಡೆ ದಾಳಿ ನಡೆಸಿ ತಲವಾರಿನಿಂದ ಕಡಿದು ಗಾಯಗೊಳಿಸಿತ್ತು. ತಪ್ಪಿಸಿಕೊಳ್ಳಲು ಯತ್ನಿಸಿದ ಕಿಶನ್ನನ್ನು ಹಿಂಬಾಲಿಸಿದ ತಂಡ ತಲೆಗೆ ಬಲವಾಗಿ ಹೊಡೆದು ಕೊಲೆ ನಡೆಸಿತ್ತು.

ಆರೋಪಿಗಳ ಬಂಧನದ ವಿಚಾರವನ್ನು ಪೊಲೀಸ್ ಇಲಾಖೆ ಇನ್ನಷ್ಟೇ ಅಧಿಕೃತವಾಗಿ ಬಹಿರಂಗಪಡಿಸಬೇಕಿದೆ.


Spread the love