ಹಿಸ್ನಾ ಜಾಗತಿಕ ಕೊಂಕಣಿ ಚಲನಚಿತ್ರ ಪುರಸ್ಕಾರ 2018
ಬೆಳೆಯುತ್ತಿರುವ ಕೊಂಕಣಿ ಸಿನೆಮಾ ಕ್ಷೇತ್ರವನ್ನು ಪ್ರೋತ್ಸಾಹಿಸಲು ಹಾಗೂ ಸಿನೆಕಲಾವಿದರನ್ನು ಗೌರವಿಸಲು ಕೊಂಕಣಿಯ ಪ್ರಮುಖ ಸಾಂಸ್ಕøತಿಕ ಸಂಘಟನೆ ಮಾಂಡ್ ಸೊಭಾಣ್ ಪ್ರಥಮ ಬಾರಿಗೆ ಕೊಂಕಣಿ ಚಲನಚಿತ್ರ ಪುರಸ್ಕಾರವನ್ನು ಆಯೋಜಿಸಿದೆ.
ಪುರಸ್ಕಾರದ ಎಂಟು ವಿಭಾಗಗಳು ಇಂತಿವೆ :-
1. ಶ್ರೇಷ್ಟ ಚಲನಚಿತ್ರ
2. ಶ್ರೇಷ್ಟ ನಿರ್ದೇಶಕ
3. ಶ್ರೇಷ್ಟ ನಟ
4. ಶ್ರೇಷ್ಟ ನಟಿ
5. ಶ್ರೇಷ್ಟ ಪೋಷಕ ನಟ
6. ಶ್ರೇಷ್ಟ ಪೋಷಕ ನಟಿ
7. ಶ್ರೇಷ್ಟ ಸಾಹಿತ್ಯ
8. ಶ್ರೇಷ್ಟ ಸಂಗೀತ
ಪರಿಣಿತ ತೀರ್ಪುದಾರರಾದ ಡಾ. ರಿಚಾರ್ಡ್ ಕ್ಯಾಸ್ತೆಲಿನೊ ಮಂಗಳೂರು, ಜಿತೇಂದ್ರ ಶಿಕೇರ್‍ಕರ್ ಗೋವಾ, ರಾಜೇಶ್ ಫೆರ್ನಾಂಡಿಸ್ ಹೊನ್ನಾವರ, ಡಾ ರಾಜಯ್ ಪವಾರ್ ಗೋವಾ, ಜೊನ್ ಎಂ. ಪೆರ್ಮನ್ನೂರು, ಬಿ. ಚರಣ್ ಕುಮಾರ್ ಮಂಗಳೂರು, ಡೊಲ್ವಿನ್ ಎಂ ಮೆಂಡೊನ್ಸಾ, ಕೊಳಲಗಿರಿ ಇವರು ಬಂದ ಚಲನಚಿತ್ರಗಳನ್ನು ವೀಕ್ಷಿಸಿ, ಎಂಟು ವಿಭಾಗಗಳಲ್ಲಿ ತಲಾ ಮೂವರನ್ನು ಅಂತಿಮಗೊಳಿಸಿದ್ದಾರೆ. ಆ ಪಟ್ಟಿಯನ್ನು ಲಗತ್ತಿಸಲಾಗಿದೆ.
2018 ಡಿಸೆಂಬರ್ 09 ರಂದು ಸಂಜೆ 6.00 ಗಂಟೆಗೆ ಮಂಗಳೂರಿನ ಕಲಾಂಗಣದಲ್ಲಿ ನಡೆಯುವ ವರ್ಣರಂಜಿತ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಪ್ರತಿ ವಿಭಾಗದ ವಿಜೇತರ ಹೆಸರನ್ನು ಘೋಷಿಸಲಾಗುವುದು. ಗೋವಾದ ಗಾನಕೋಗಿಲೆ ಲೋರ್ನಾ ಸಂಗೀತ ಕಾರ್ಯಕ್ರಮ ನೀಡಲಿದ್ದು, ಬಾಲಿವುಡ್ ತಾರೆಯೋರ್ವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.