ಹುತಾತ್ಮ ಯೋಧ ಅನೂಪ್ ಪೂಜಾರಿ ಮನೆಗೆ ಸ್ಪೀಕರ್ ಖಾದರ್ ಭೇಟಿ

Spread the love

ಹುತಾತ್ಮ ಯೋಧ ಅನೂಪ್ ಪೂಜಾರಿ ಮನೆಗೆ ಸ್ಪೀಕರ್ ಖಾದರ್ ಭೇಟಿ

ಕುಂದಾಪುರ: ಜಮ್ಮು ಕಾಶ್ಮೀರದಲ್ಲಿ ಹುತಾತ್ಮರಾದ ಯೋಧ ಬೀಜಾಡಿಯ ಅನೂಪ್ ಪೂಜಾರಿಯವರ ಮನೆಗೆ ಶುಕ್ರವಾರ ವಿಧಾನಸಭೆಯ ಸ್ವೀಕರ್ ಯು.ಟಿ. ಖಾದರ್ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಖಾದರ್, ಯೋಧ ಅನೂಪ್ ಪೂಜಾರಿ ಪತ್ನಿಯವರಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಸ್ಥಳೀಯರು ಹಾಗೂ ಕುಟುಂಬದವರು ಮನವಿ ಮಾಡಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಈ ಮಾತನಾಡುವುದಾಗಿ ತಿಳಿಸಿದ್ದಾರೆ.

ದೇಶ ಕಾಯುವ ನಮ್ಮೂರ ಯುವಕನ ಅಕಾಲಿಕ ನಿಧನ ರಾಜ್ಯದ ಜನರಿಗೆ ತೀವೃವಾದ ನೋವನ್ನುಂಟು ಮಾಡಿದೆ. ಮಂಗಳವಾರದ ದುರಂತದಲ್ಲಿ ಮೃತರಾದ ರಾಜ್ಯದ ಎಲ್ಲಾ ಸೈನಿಕರ ಕುಟುಂಬದವರಿಗೂ ರಾಜ್ಯ ಸರ್ಕಾರದಿಂದ ದೊರಕುವ ಎಲ್ಲ ಸವಲತ್ತುಗಳನ್ನು ನೀಡುವ ಬಗ್ಗೆ ಮುಖ್ಯಮಂತ್ರಿಗಳು ಈಗಾಗಲೇ ತಿಳಿಸಿದ್ದು, ಇದನ್ನು ಶೀಘ್ರವಾಗಿ ಅನೂಪ್ ಕುಟುಂಬದವರಿಗೂ ಒದಗಿಸಲು ಪ್ರಯತ್ನಿಸುತ್ತೇವೆ.

ಮಾಜಿ ಸಚಿವ ವಿನಯಕುಮಾರ ಸೊರಕೆ, ದಿನೇಶ್ ಹೆಗ್ಡೆ ಮೊಳಹಳ್ಳಿ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಒಟ್ಟಾಗಿ ಪ್ರಯತ್ನ ನಡೆಸುವುದಾಗಿ ತಿಳಿಸಿದ ಅವರು, ಹುತಾತ್ಮ ಯೋಧನ ಹೆಸನಲ್ಲಿ ಸ್ಮಾರಕ ನಿರ್ಮಾಣವೂ ಸೇರಿದಂತೆ ಯಾವುದೇ ಕಾರ್ಯಕ್ರಮಗಳನ್ನು ರೂಪಿಸುವುದಿದ್ದರೂ, ಸ್ಥಳೀಯ ಆಡಳಿತ ತೀರ್ಮಾನ ಕೈಗೊಳ್ಳಲಿ ಆ ಬಳಿಕ ಸರ್ಕಾರದಿಂದ ಬೇಕಾದ ಸಹಕಾರ ನೀಡಲು ಬದ್ಧರಿರುವುದಾಗಿ ತಿಳಿಸಿದರು.

ಮಾಜಿ ಸಚಿವ ವಿನಯಕುಮಾರ ಸೊರಕೆ ಮಾತನಾಡಿ, ಅನೂಪ್ ಅವರ ಪತ್ನಿ ಮಂಜುಶ್ರೀ ಅವರು ಬಿಸಿಎ ಪದವೀಧರೆಯಾಗಿದ್ದು ಸರ್ಕಾರಿ ಉದ್ಯೋಗದ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಸ್ವೀಕರ್ ಅವರ ನೇತೃತ್ವದಲ್ಲಿ ನಾವೆಲ್ಲ ಒಟ್ಟಾಗಿ ಈ ಬಗ್ಗೆ ಪ್ರಯತ್ನಿಸುತ್ತೇವೆ. ಹುತಾತ್ಮರಾಗಿರುವ ಅವರ ಜೀವವನ್ನು ತರಲು ಖಂಡಿತ ಸಾಧ್ಯವಿಲ್ಲ ಆದರೆ ಅವರ ಕುಟುಂಬ ನೆಮ್ಮದಿಯಿಂದ ಜೀವನ ಸಾಗಿಸಲು ಅಗತ್ಯವಾಗಿರುವ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುವುದಾಗಿ ತಿಳಿಸಿದರು.

ಸ್ವೀಕರ್ ಯು.ಟಿ.ಖಾದರ್ ಅವರೊಂದಿಗೆ ತುಳುವಿನಲ್ಲಿ ಮಾತನಾಡಿದ ಅನೂಪ್ ಅವರ ಪತ್ನಿ ಪೇರ್ಡೂರು ಮೂಲದ ಮಂಜುಶ್ರೀ, ಮದ್ಮೆ ಆಪುನ್ ದುಂಬುಡ್‍ಲ್ ದಿನಾಲಾ ಪೋನ್ ಮಲ್ತೊಂದಿತ್ತಿರ್, ಮಂಗಳವಾರ ರಾತ್ರಿ ಮುಟ್ಟ ಪೋನ್ ಬೈದಿಜ್ಜಿ ಎಂದನಗ್ ಪೋಡಿಗೆ ಆತಂಡ್…….. ( ಮದುವೆಯಾಗುವ ಮೊದಲಿನಿಂದಲೂ ಪ್ರತಿ ದಿನ ಪೋನ್ ಮಾಡುತ್ತಿದ್ದರು. ಮಂಗಳವಾರ ರಾತ್ರಿಯವರೆಗೂ ಪೋನ್ ಬಾರದೆ ಇದ್ದಾಗ ನನಗೆ ಹೆದರಿಕೆಯಾಗಿತ್ತು ) ಎಂದು ಕಣ್ಣೀರಾದರು.

ಅನೂಪ್‌ ಕನಸು ನನಸಾಗಿಸಲು ಒಟ್ಟಾಗುತ್ತೇವೆ: ಯಶ್ಪಾಲ್ ಸುವರ್ಣ

ಯು.ಟಿ ಖಾದರ್ ಭೇಟಿಯ ಬಳಿಕ ಹುತಾತ್ಮ ಯೋಧ ಅನೂಪ್ ಪೂಜಾರಿ ಅವರ ಪತ್ನಿ ಹಾಗೂ ಕುಟುಂಬಿಕರನ್ನು ಭೇಟಿ ಮಾಡಿ ಸಾಂತ್ವಾನ‌ ತಿಳಿಸಿದ ಉಡುಪಿ ಶಾಸಕ ಯಶಪಾಲ್ ಸುವರ್ಣ ತಮ್ಮ ವಯಕ್ತಿಕ 1 ಲಕ್ಷ ರೂ. ಚೆಕ್ ನೀಡಿ ಅನೂಪ್ ಅವರ ಪುತ್ರಿ ಇಶಾನಿ ಅವರ ಹೆಸರಿನಲ್ಲಿ ನಿಖರ ಠೇವಣೆ ಇಡುವಂತೆ ಹೇಳಿದರು.

ಬಳಿಕ ಸುದ್ದಿಗಾರರೊದಿಗೆ ಮಾತನಾಡಿದ ಅವರು, ಅನೂಪ್ ಅವರ ನಿಧನ ಕರಾವಳಿಯ ಜನರಿಗೆ ಅತೀವ ದುಃಖವನ್ನು ತಂದಿದೆ. ಸೈನ್ಯಕ್ಕೆ ಸೇರುವ ಯುವಕರಿಗೆ ಮಾರ್ಗದರ್ಶನ ಹಾಗೂ ತರಬೇತಿ ನೀಡಲು ಅಕಾಡೆಮಿಯೊಂದನ್ನು ಹುಟ್ಟುಹಾಕಬೇಕು ಎನ್ನುವ ಕನಸುಗಳು ಅನೂಪ್ ಪೂಜಾರಿ ಅವರಿಗಿತ್ತು ಎನ್ನುವುದನ್ನು ಸ್ಥಳೀಯರು ತಿಳಿಸಿದ್ದಾರೆ. ಅವರ ಕನಸನ್ನು ನನಸು ಮಾಡಲು ಯಾವುದೇ ಸಲಹೆ ಹಾಗೂ ಸಹಕಾರಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಪ್ರಮುಖರು ಒಟ್ಟಾಗಿ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಸ್ಥಳಿಯ ಪ್ರಮುಖರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಬಿ.ಹಿರಿಯಣ್ಣ ಚಾತ್ರಬೆಟ್ಟು, ಮಲ್ಯಾಡಿ ಶಿವರಾಮ್ ಶೆಟ್ಟಿ, ಅಶೋಕ ಪೂಜಾರಿ ಬೀಜಾಡಿ, ಪ್ರಕಾಶ್ ಪೂಜಾರಿ ಬೀಜಾಡಿ, ಅವಿನಾಶ್ ಉಳ್ತೂರು, ಶೇಖರ ಚಾತ್ರಬೆಟ್ಟು, ಸದಾನಂದ ಶೆಟ್ಟಿ ಕೆದೂರು, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಸುರೇಂದ್ರ ಶೆಟ್ಟಿ ಸಹನಾ, ಯಾಸಿನ್ ಹೆಮ್ಮಾಡಿ, ಅನಿಲ್ ಚಾತ್ರಬೆಟ್ಟು, ಜಸಿಂತಾ ಡಿಮೆಲ್ಲೋ, ಎನ್ಎಸ್ಯುಐ ಮುಖಂಡ ಸಯ್ಯದ್ ಫುರ್ಖಾನ್ ಮುಂತಾದವರಿದ್ದರು.


Spread the love
Subscribe
Notify of

0 Comments
Inline Feedbacks
View all comments