ಹೆಣ್ಣು ಮಕ್ಕಳನ್ನು ಅನೈತಿಕ ಚಟುವಟಿಕೆಗೆ ಬಳಸಿಕೊಳ್ಳುತ್ತಿದ್ದ ವ್ಯಕ್ತಿಯ ಸೆರೆ
ಮಂಗಳೂರು: ಹೆಣ್ಣು ಮಕ್ಕಳನ್ನು ಅನೈತಿಕ ಚಟುವಟಿಕೆಗೆ ಬಳಸಿಕೊಳ್ಳುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೋಲಿಸರು ಬಂಧಿಸಿದ್ದಾರೆ.
ಬಂಧಿತನ್ನನ್ನು ಪುನೀತ್ ಕುಮಾರ್ ಎಂದು ಗುರುತಿಸಲಾಗಿದೆ
ಶನಿವಾರ ಮಂಗಳೂರು ನಗರ ಸಿಸಿಬಿ ಘಟಕದ ಪೊಲೀಸ್ ಉಪ ನಿರೀಕ್ಷಕರಾದ ಕಬ್ಬಲರಾಜರವರಿಗೆ ಸುರತ್ಕಲ್ ಠಾಣಾ ಸರಹದ್ದಿನ ಇಡ್ಯಾ ಗ್ರಾಮದ ಶ್ರೀ ಮಹಾಲಕ್ಷ್ಮೀ ಕೃಪಾ ಕಾಂಪ್ಲೇಕ್ಸ್ ಕಟ್ಟಡದ ಬಳಿ ಮನೆಯೊಂದರಲ್ಲಿ ಹೆಣ್ಣು ಮಕ್ಕಳನ್ನು ಅನೈತಿಕ ಚಟುವಟಿಕೆ ಬಳಸುತ್ತಿರುವುದಾಗಿ ಮಾಹಿತಿ ಬಂದಿರುವುದಾಗಿ ಠಾಣೆಗೆ ಬಂದು ತಿಳಿಸಿದಂತೆ ಸಿಸಿಬಿ ಘಟಕದ ಪಿಎಸೈ ಕಬ್ಬಲರಾಜ್ ಹಾಗೂ ಸಿಬ್ಬಂದಿಗಳಾದ ಸೀನಪ್ಪ, ಸುಬ್ರಮಣ್ಯ. ರಾಜ ಎಂ, ಆಶಿತ್ ವಿಶಾಲ್ ಡಿಸೋಜಾ ಮತ್ತು ಸುರತ್ಕಲ್ ಠಾಣಾ ಪೊಲೀಸ್ ನಿರೀಕ್ಷಕ ರಾಮಕೃಷ್ಣ ಕೆ.ಜಿ ಮತ್ತು ಪಿಎಸಐ ರವರೊಂದಿಗೆ ದಾಳಿ ನಡೆಸಿದ ಸಂದರ್ಭದಲ್ಲಿ ಮೂರು ಯುವತಿಯರು ಹಾಗೂ ಇಬ್ಬರೂ ಗಿರಾಕಿಗಳು ಇದ್ದು ಅವರನ್ನು ವಿಚಾರಣೆ ಮಾಡಿದ ಸಂದರ್ಭದಲ್ಲಿ ಆರೋಪಿ ಪುನೀತ್ ಕುಮಾರ್ ಎಂಬವನು ನಮ್ಮನ್ನು ಅನೈತಿಕ ಚಟುವಟಿಕೆಯಲ್ಲಿ ಭಾಗಿಯಾಗಲು ಕರೆಸಿರುವುದಾಗಿ ತಿಳಿದು ಬಂದ ಮೇರೆಗೆ ಆರೋಪಿ ಪುನೀತ್ ಕುಮಾರನನ್ನು ವಶಕ್ಕೆ ಪಡೆದು ಕೃತ್ಯಕ್ಕೆ ಬಳಸಿದ ನಗದು ರೂ. 51,450 ಮತ್ತು ಮೊಬೈಲ್ ಕೃತ್ಯಕ್ಕೆ ಬಳಸುತ್ತಿದ್ದ ಕಾರು ಕೆಎ 19 ಎಂಹೆಚ್ 7765 ನೇದ್ದನ್ನು ವಶಪಡಿಸಿಕೊಂಡು ಆರೋಪಿತನ ಮೇಲೆ ಠಾಣಾ ಮೊ.ನಂ 238/2018 ಕಲಂ 3,4,5,6 ಐಟಿಪಿ ಆಕ್ಟ್ ಜೊತೆಗೆ 370 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ತೆಗೆದುಕೊಂಡಿರುತ್ತೆ.
ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸುರೇಶ್ ಟಿ.ಆರ್ ,ಡಿಸಿಪಿ ಕಾ ಮತ್ತು ಸು ಶ್ರೀ ಹನುಮಂತರಾಯ, ಡಿಸಿಪಿ ಅಪರಾಧ ಮತ್ತು ಸಂಚಾರ ಶ್ರೀಮತಿ ಉಮಾಪ್ರಶಾಂತ್ ಹಾಗೂ ಎಸಿಪಿ ಶ್ರೀ ಮಂಜುನಾಥ ಶೆಟ್ಟಿ ರವರ ಮಾರ್ಗದರ್ಶನದಂತೆ ದಾಳಿ ನಡೆಸಲಾಗಿರುತ್ತದೆ. ಆರೋಪಿಯನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.