ಹೆದ್ದಾರಿಗಳ ವಾರ್ಷಿಕ ನಿರ್ವಹಣೆಗೆ 55 ಕೋಟಿ ರೂ.ಬಿಡುಗಡೆ – ಸಂಸದ ನಳಿನ್‍ಕುಮಾರ್ ಕಟೀಲ್
ಮಂಗಳೂರು : ದ.ಕ.ಜಿಲ್ಲೆಯ ವಿವಿಧ ರಾಷ್ಟ್ರೀಯ ಹೆದ್ದಾರಿಗಳ ವಾರ್ಷಿಕ ನಿರ್ವಹಣಾ ಕಾಮಗಾರಿಗೆ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯಿಂದ 55 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಸಂಸದ ನಳಿನ್‍ಕುಮಾರ್ ಕಟೀಲ್ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 275 ಮಾಣಿಯಿಂದ ಜಾಲ್ಸೂರು ವರೆಗೆ 13 ಕೋಟಿ ರೂ., ಜಾಲ್ಸೂರಿನಿಂದ ಸಂಪಾಜೆವರೆಗೆ 12 ಕೋಟಿ ರೂ.,
ರಾಷ್ಟ್ರೀಯ ಹೆದ್ದಾರಿ 169 ಕುಲಶೇಖರದಿಂದ ಬೆಳುವಾಯಿವರೆಗೆ 10 ಕೋಟಿ ರೂ., ರಾಷ್ಟ್ರೀಯ ಹೆದ್ದಾರಿ 234 ಕುವೆಟ್ಟುನಿಂದ ಚಾರ್ಮಾಡಿವರೆಗೆ 10 ಕೋಟಿ ರೂ., ಚಾರ್ಮಾಡಿಯಿಂದ ಕೊಟ್ಟಿಗೆಹಾರದವರೆಗೆ 10 ಕೋಟಿ ರೂ. ವಾರ್ಷಿಕ ನಿರ್ವಹಣಾ ಕಾಮಗಾರಿಗಾಗಿ ಬಿಡುಗಡೆಯಾಗಿದೆ ಎಂದು ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.