Home Mangalorean News Kannada News ಹೈಕೋರ್ಟ್ ತಡೆಯಾಜ್ಞೆ ಪ್ರತಿಯನ್ನು ರಘುಪತಿ ಭಟ್ ತಕ್ಷಣ ಜಿಲ್ಲಾ ಎಸ್ಪಿಗೆ ನೀಡಲಿ : ಯಶ್ಪಾಲ್ ಸುವರ್ಣ

ಹೈಕೋರ್ಟ್ ತಡೆಯಾಜ್ಞೆ ಪ್ರತಿಯನ್ನು ರಘುಪತಿ ಭಟ್ ತಕ್ಷಣ ಜಿಲ್ಲಾ ಎಸ್ಪಿಗೆ ನೀಡಲಿ : ಯಶ್ಪಾಲ್ ಸುವರ್ಣ

Spread the love

ಹೈಕೋರ್ಟ್ ತಡೆಯಾಜ್ಞೆ ಪ್ರತಿಯನ್ನು ರಘುಪತಿ ಭಟ್ ತಕ್ಷಣ ಜಿಲ್ಲಾ ಎಸ್ಪಿಗೆ ನೀಡಲಿ : ಯಶ್ಪಾಲ್ ಸುವರ್ಣ

ಉಡುಪಿ: ಮಾಜಿ ಶಾಸಕ ರಘುಪತಿ ಭಟ್ ಇಂದು ಮತ್ತೊಮ್ಮೆ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ತನ್ನ ಸುಸ್ಟಿದಾರರ ಎಫ್ ಐ ಆರ್ ವಿರುದ್ಧದ ತನಿಖೆಗೆ ಹೈಕೋರ್ಟ್ ಮೂಲಕ ತಡೆಯಾಜ್ಞೆ ತಂದಿದೆ ಅದನ್ನು ತಕ್ಷಣ ತೆರವು ಮಾಡಿ ತನಿಖೆಗೆ ಸಹಕಾರ ನೀಡಬೇಕು ಎಂದು ಪತ್ರ ಬರೆದು ಮಾಧ್ಯಮಗಳಿಗೆ ಸುಳ್ಳು ಮಾಹಿತಿ ನೀಡಿದ್ದು, ಈ ತಡೆಯಾಜ್ಞೆ ಪ್ರತಿಯನ್ನು ರಘುಪತಿ ಭಟ್ ಬಳಿ ಇದ್ದರೆ ತಕ್ಷಣ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಮಾಧ್ಯಮಗಳಿಗೆ ನೀಡುವಂತೆ ಬ್ಯಾಂಕಿನ ಅಧ್ಯಕ್ಷ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅಗ್ರಹಿಸಿದ್ದಾರೆ.

ದಿನಾಂಕ ನವೆಂಬರ್ 9 ರಂದು ಪತ್ರಿಕಾಗೋಷ್ಟಿ ನಡೆಸಿ ರಘುಪತಿ ಭಟ್ ಆಧಾರ ರಹಿತ ಆರೋಪಗಳಿಗೆ ಬ್ಯಾಂಕಿನ ಆಡಳಿತ ಮಂಡಳಿ ಉತ್ತರ ನೀಡಿ ಯಾವುದೇ ತನಿಖೆಗೆ ಸ್ವಾಗತ ಎಂದು ತಿಳಿಸಿದರೂ, ಹತಾಶ ಮನಸ್ಥಿತಿಯ ರಘುಪತಿ ಭಟ್ ಇದೀಗ ನ್ಯಾಯಾಂಗ ವ್ಯವಸ್ಥೆಯನ್ನೇ ತಿರುಚಿ ಸುಳ್ಳು ಸುದ್ದಿ ಸೃಷ್ಟಿಸಿ ಮಾಧ್ಯಮಗಳು ಹಾಗೂ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ.

ರಘುಪತಿ ಭಟ್ ರವರು ಇದೀಗ ತಮ್ಮ ಸ್ವಾರ್ಥ ಸಾಧನೆಗಾಗಿ ಇಡೀ ಸಹಕಾರಿ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದ್ದು, ಇದು ಇಡೀ ಸಹಕಾರಿ ಕ್ಷೇತ್ರಕ್ಕೆ ಮಾಡಿದ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Spread the love

Exit mobile version