ಹೊಯಿಗೆ ಬಜಾರ್ ಬ್ರೀಡ್ಜ್ ರಸ್ತೆಗೆ ಶೀಘ್ರದಲ್ಲಿ ಕಾಂಕ್ರೀಟಿಕರಣ ನಡೆಸಲು ಶಾಸಕ ಕಾಮತ್ ಸೂಚನೆ
ಮಂಗಳೂರು: ಮಂಗಳೂರಿನ ರೊಸಾರಿಯೂ ಚರ್ಚ್ ನಿಂದ ಹೊಯಿಗೆ ಬಜಾರ್ ಬ್ರೀಡ್ಜ್ ತನಕದ ಮುನ್ನೂರು ಮೀಟರ್ ಉದ್ದದ ರಸ್ತೆಯ ಕಾಂಕ್ರೀಟಿಕರಣದ ಕಾಮಗಾರಿ ಶೀಘ್ರದಲ್ಲಿ ಆರಂಭವಾಗಬೇಕೆಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಪಿಡಬ್ಲೂಡಿ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ.
ಶನಿವಾರ ಪಾಂಡೇಶ್ವರ ಸಮೀಪದ ರೋಸಾರಿಯೋ ಚರ್ಚ್ ಮುಂಭಾಗದ ರಸ್ತೆಯ ಪರಿಶೀಲನೆ ನಡೆಸಿದ ಶಾಸಕ ಕಾಮತ್ ಅವರು ಮುನ್ನೂರು ಮೀಟರ್ ಉದ್ದದ ಏಳು ಮೀಟರ್ ಅಗಲದ ರಸ್ತೆಗೆ ಕಾಂಕ್ರೀಟಿಕರಣ ಮಾಡಲು ತಕ್ಷಣ ಕಾಮಗಾರಿ ಪ್ರಾರಂಭಿಸಬೇಕು. ಹಾಗೆ ಡೆಡ್ ಲೈನ್ ಹಾಕಿ ಕೆಲಸ ಮುಗಿಸಿ ರಸ್ತೆಯನ್ನು ಜನರ ಮತ್ತು ವಾಹನ ಸಂಚಾರಕ್ಕೆ ಬಿಟ್ಟುಕೊಡಬೇಕು ಎಂದು ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ತಾಕೀತು ಮಾಡಿದರು. ಎಪ್ಪತ್ತು ಲಕ್ಷ ವೆಚ್ಚದಲ್ಲಿ ಕಾಮಗಾರಿ ಆರಂಭವಾಗಲಿದ್ದು, ಚರಂಡಿ ವ್ಯವಸ್ಥೆ ಕೂಡ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು. ಒಂದು ವೇಳೆ ಅದಕ್ಕೆ ಅನುದಾನದ ಕೊರತೆ ಆದ್ದಲ್ಲಿ ಶಾಸಕರ ನಿಧಿಯಿಂದ ಮತ್ತು ಮಹಾನಗರ ಪಾಲಿಕೆಯ ಕಡೆಯಿಂದ ಅನುದಾನವನ್ನು ಹೊಂದಿಸಲಾಗುವುದು. ಅಭಿವೃದ್ಧಿಯ ದೃಷ್ಟಿಯಲ್ಲಿ ಎಲ್ಲಿ ಕೂಡ ರಾಜಿಯಾಗದೇ ಉತ್ತಮ ಗುಣಮಟ್ಟದ ರಸ್ತೆಯನ್ನು ಸಾರ್ವಜನಿಕ ಉಪಯೋಗಕ್ಕೆ ಆದಷ್ಟು ಶೀಘ್ರ ನೀಡಲಾಗುವುದು ಎಂದು ಶಾಸಕ ಕಾಮತ್ ತಿಳಿಸಿದರು.
ಶಾಸಕರೊಂದಿಗೆ ಬಿಜೆಪಿ ಮುಖಂಡರಾದ ನಿತಿನ್ ಕುಮಾರ್, ಬಾಲಕೃಷ್ಣ ಕರ್ಕೆರಾ, ನಾರಾಯಣ ಗಟ್ಟಿ, ಯೋಗೀಶ್ ಕಾಂಚನ್, ಅನಿಲ್ ಕುಮಾರ್, ವನಮಾಲ ವೈ ಸುವರ್ಣ, ವನಿತಾ, ಮುತಾಲಿಬ್, ಶೈಲೇಶ್ ರಾವ್, ಸತೀಶ್ ಶೆಟ್ಟಿ ಹಾಗೂ ಪಿಡ್ಲೂಡಿ ಅಧಿಕಾರಿಗಳು, ಗುತ್ತಿಗೆದಾರರು ಉಪಸ್ಥಿತರಿದ್ದರು