ಹೊಸ ತಾಲೂಕು ರಚನೆ ಸಂಬಂಧ ಜಿಲ್ಲಾಧಿಕಾರಿ ಪ್ರಿಯಾಂಕ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ

Spread the love

ಹೊಸ ತಾಲೂಕು ರಚನೆ ಸಂಬಂಧ ಜಿಲ್ಲಾಧಿಕಾರಿ ಪ್ರಿಯಾಂಕ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಹೊಸ ತಾಲೂಕು ರಚನೆ ಸಂಬಂಧ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಿತು.

ಬೈಂದೂರು, ಕಾಪು, ಬ್ರಹ್ಮಾವರದಿಂದ ತಾಲೂಕು ರಚನೆ ಸಂಬಂದ ಸಭೆಗೆ ಶಾಸಕರು ವಿಧಾನ ಪರಿಷತ್ ಪ್ರತಾಪ್ ಚಂದ್ರ ಶೆಟ್ಟಿ, ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಸಭೆಯಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ತಾಲೂಕಿಗೆ ಗ್ರಾಮಗಳನ್ನು ಸೇರ್ಪಡೆ ಮಾಡಿಕೊಳ್ಳುವ ಮೊದಲು ಗ್ರಾಮಸಭೆ ನಡೆಸಿ, ತಾಲೂಕು ರಚನೆ ಸಂಬಂಧ ಎಲ್ಲ ಗೈಡ್‍ಲೈನ್‍ಗಳನ್ನು ಪಾಲಿಸಿ ಎಂದು ಜನಪ್ರತಿನಿಧಿಗಳು ಹೇಳಿದರು.

ಶಾಸಕರು ಲಿಖಿತವಾಗಿ ತಮ್ಮ ಅಭಿಪ್ರಾಯ ವಿವರಿಸಿದ್ದು, ಗ್ರಾಮಗಳ ಸೇರ್ಪಡೆ ವೇಳೆ ಗಡಿ ಗ್ರಾಮಗಳ ಜನರ ಅಭಿಪ್ರಾಯಕ್ಕೂ ಪ್ರಾಮ್ಯುಖತೆ ನೀಡಿ ಎಂದು ಸಭೆಗೆ ಹೇಳಿದರು.

ವಿಶೇಷ ಗ್ರಾಮಸಭೆ ನಡೆಸಿ ನಡಾವಳಿ ಕಳುಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು. ತಾಲೂಕು ಕಚೇರಿಗಳನ್ನೊಳಗೊಂಡಂತೆ ತಾಲೂಕಿಗೆ ಅಗತ್ಯವಾಗಿರುವ ಮೂಲ ಸೌಕರ್ಯ ಕಲ್ಪಿಸಲು ಜಾಗ ಮತ್ತು ಸಿಬ್ಬಂದಿ ಸಂಬಂಧ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ, ಸಹಾಯಕ ಆಯುಕ್ತರಾದ ಶಿಲ್ಪಾ ನಾಗ್ ಇದ್ದರು.


Spread the love