ಹೋಮ್ ಸ್ಟೇ ಕಟ್ಟಡದಲ್ಲಿ ಜೂಜಾಟ ಆಡುತ್ತಿದ್ದ 21 ಮಂದಿಯನ್ನು ಬಂಧಿಸಿದ ಸಿಸಿಬಿ ಪೊಲೀಸರು
ಮಂಗಳೂರು: ನಗರದ ಅಡ್ಯಾರ್ ಗ್ರಾಮದ ಸುರೇಶ್ ಶೆಟ್ಟಿ ಎಂಬವರು ಮಾಲಿಕತ್ವದ ಅಡ್ಯಾರ್ ಹಿಲ್ಸ್ ಎಂಬ ಹೋಮ್ ಸ್ಟೇ ಕಟ್ಟಡದಲ್ಲಿ ಅಂದರ್ ಬಾಹರ್ ಎಂಬ ಜೂಜು ಆಟ ಆಡುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ಸಿಸಿಬಿ ಪಿಎಸ್ಐ ಕಬ್ಬಲ್ ರಾಜ್ ಮತ್ತು ಅವರ ತಂಡ ಸ್ಥಳಕ್ಕೆ ದಾಳಿ ನಡೆಸಿ ಜುಗಾರಿ ಆಟ ಅಡುತ್ತಿದ್ದ ಆರೋಪಿಗಳಾದ 1] ಮೆಲ್ವಿನ್ ವಿಶ್ವಾಸ್ ಡಿ’ಸೋಜಾ ಅನ್ವರ್ 2]ಶರತ್ ಕುಮಾರ್ 3] ಗುರುಪ್ರಸಾದ್, 4]ರಾಜ ತಂದೆ ಶಂಕರ ಪೂಜಾರಿ 5]ಮಹಮ್ಮದ್ ಹನೀಫ್ 6]ಶಿವರಾಜ್, 7] ಅನ್ವರ್ 8]ಆದರ್ಶ, 9] ರಾದಾಕೃಷ್ಣ ನಾಯರ್ 10] ಅರ್ವಿನ್ ಡಿ’ಸೋಜಾ, 11] ಮಹಾದೇವಪ್ಪ, 12] ಕುಮಾರನಾಥ ಶೆಟ್ಟಿ 13] ಆಲ್ವಿನ್ ರಿಚಾರ್ಡ್ 14] ಗಣೇಶ್.ವಿ.ಎಸ್, 15] ಪ್ರೀತಂ @ ಪ್ರಶಾಂತ್ 16]ಎ.ಬಿ. ಬಶೀರ್ 17]ಸಾವನ್ 18] ನಿತಿನ್ ಡಿ’ಸೋಜಾ 19] ಆಬೀದ್ ಹುಸೇನ್, 20] ಡೆಂಝಿಲ್ ವಿಕ್ಸನ್ ಡಿ’ಸೋಜಾ, 21]ಮಹಮ್ಮದ್ ಹನೀಫ್, ಎಂಬವರನ್ನು ದಸ್ತಗಿರಿ ಮಾಡಲಾಗಿದೆ.
ದಾಳಿ ಸಮಯದಲ್ಲಿ ಜೂಜು ಆಟಕ್ಕೆ ಉಪಯೋಗಿಸಿದ ನಗದು ಹಣ ರೂ 18,37,000/-, (ಹದಿನೆಂಟು ಲಕ್ಷದ ಮೂವತ್ತೇಳು ಸಾವಿರ) ಹಾಗೂ 08 ಕಾರು ಮತ್ತು 1 ಅಟೋ ರಿಕ್ಷಾ ಮೌಲ್ಯ ರೂ 66,75,000/- ಮತ್ತು ಮೊಬೈಲ್ ಸೆಟ್-24 ಮೌಲ್ಯ ರೂ 1,35,700/- ಗಳನ್ನು ಸ್ವಾಧಿನಪಡಿಸಿಕೊಂಡಿದ್ದು ಸ್ವಾಧಿನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ 86,47,700/- ಆಗಿರುತ್ತದೆ.
ಹೊಮ್ ಸ್ಟೇ ಮಾಲಕ ಸುರೇಶ್ ಶೆಟ್ಟಿ ರವರು ಪರಾರಿಯಾಗಿರುತ್ತಾರೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಆರೋಫಿಗಳನ್ನು ಹಾಗೂ ಸೊತ್ತುಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.