1.9 ಕೋಟಿ ವೆಚ್ಚದಲ್ಲಿ ಸ್ಟರಕ್ ರಸ್ತೆ ಮಾಡಲಾಗುವುದು: ಶಾಸಕ ಜೆ.ಆರ್.ಲೋಬೊ
ಮಂಗಳೂರು: ಸ್ಟರಕ್ ರಸ್ತೆಯನ್ನು 1.9 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು.
ಅವರು ಸ್ಟರಕ್ ರಸ್ತೆ ಅಭಿವೃದ್ಧಿಗೆ ಮೇಯರ್ ಕವಿತಾ ಸನಿಲ್ ರೊಂದಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಾ ಈ ರಸ್ತೆಯನ್ನು ಪ್ರಿಮಿಯಮ್ ಅಫೈರ್ಸ್ ಯೋಜನೆಯ ಮೂಲಕ ಅಭಿವೃದ್ಧಿಗೊಳಿಸಲಾಗುತ್ತಿದ್ದು 480 ಮೀಟರ್ ಉದ್ದ ಮತ್ತು 12 ಮೀಟರ್ ಅಗಲವಾಗಲಿದೆ ಎಂದರು.
ಈ ರಸ್ತೆ ಅಭಿವೃದ್ಧಿಗೆ ಸ್ಥಳೀಯರು ಪೂರ್ಣ ಪ್ರಮಾಣದಲ್ಲಿ ನೆರವು ನೀಡಿದ್ದಾರೆ ಅವರ ನೆರವನ್ನು ಸ್ಮರಿಸಿದ ಶಾಸಕ ಜೆ.ಆರ್.ಲೋಬೊ ಅವರು ಈ ರಸ್ತೆ ಬದಿಯಲ್ಲಿ ಫುಟ್ ಪಾತ್ ಮತು ಮಳೆ ನೀರು ಹರಿದು ಹೋಗಲು ತೋಡನ್ನು ನಿರ್ಮಿಸಲಾಗುವುದು ಎಂದರು.
ಈ ರಸ್ತೆಯು ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ಹೋಗುವ ಮುಖ್ಯ ರಸ್ತೆಯಾಗಿದ್ದು ಈ ಮೂಲಕ ರಸ್ತೆಯನ್ನು ಪ್ರಯಾಣಿಕರು ಬಳಸಿಕೊಂಡು ಖುಷಿ ಪಡುತ್ತಾರೆ ಎಂದೂ ಶಾಸಕ ಜೆ.ಆರ್.ಲೋಬೊ ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮೇಯರ್ ಕವಿತಾ ಸನಿಲ್, ನಗರ ಯೋಜನೆ ಅಧ್ಯಕ್ಷ ಅಬ್ದುಲ್ ರವೂಫ್, ಮಂಗಳೂರು ಮಹಾನಗರಪಾಲಿಕೆ ಆರೋಗ್ಯ ಸಮಿತಿ ಅಧ್ಯಕ್ಷೆ ನಾಗವೇಣಿ, ಕಾಪೆರ್Çರೇಟರ್ ಎ.ಸಿ.ವಿನಯರಾಜ್, ನಗರಪಾಲಿಕೆ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಮಾಜಿ ಕಾಪೆರ್Çರೇಟರ್ ಸುರೇಶ್ ಬಾಬು, ರಾಮಚಂದ್ರ ಕರ್ಕೇರ, ಧರ್ಮಣ ನಾಯ್ಕ್, ಕೆ ಎಸ್ ಆರ್.ಟಿ.ಸಿ ನಿರ್ದೇಶಕ ಟಿ.ಕೆ.ಸುಧೀರ್, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ತೌಫಿಕ್, ಮಹಾನಗರಪಾಲಿಕೆ ಉಪಆಯುಕ್ತ (ಅಭಿವೃದ್ಧಿ) ಕೆ.ಎಸ್.ಲಿಂಗೇಗೌಡ, ನಗರಪಾಲಿಕೆಯ ಅಧಿಕಾರಿಗಳಾದ ಗುರುರಾಜ್ ,ಮರಳ ಹಳ್ಳಿ, ವಿಶಾಲ್ ನಾಥ್,ರಘುಪಾಲ್, ಗುತ್ತಿಗೆದಾರ ಜಸೀರುದ್ದೀನ್ ಮುಂತಾದವರು ಉಪಸ್ಥಿತರಿದ್ದರು.