10 ವರ್ಷಗಳಿಂದ ತಲೆ ಮರೆಸಿಕೊಂಡು ವಿದೇಶದಲ್ಲಿದ್ದ ಹಳೆ ಆರೋಪಿಯ ಬಂಧನ
ಮಂಗಳೂರು: 2008 ರಲ್ಲಿ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ವಂಚನೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ 10 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಹಳೆ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸುವಲ್ಲಿ ಮಂಗಳೂರು ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳ ತಂಡದ ಅಧಿಕಾರಿ/ಸಿಬ್ಬಂದಿಯವರು ಯಶಸ್ವೀಯಾಗಿರುತ್ತಾರೆ.
ಬಂಧಿತನನ್ನು ಉಡುಪಿ ಜಿಲ್ಲೆ ಉಚ್ಚಿಲ ಭಾಸ್ಕರ ನಗರ ನಿವಾಸಿ ಮೊಹಮ್ಮದ್ ರಫೀಕ್ (38) ಎಂದು ಗುರುತಿಸಲಾಗಿದೆ.
ಈ ಪ್ರಕರಣದ ಪತ್ತೆ ಕಾರ್ಯವು ಮಂಗಳೂರು ನಗರದ ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಮಂಜುನಾಥ ಶೆಟ್ಟಿ. ಇವರ ನೇತ್ರತ್ವದಲ್ಲಿ ಮಂಗಳೂರು ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳದ ಪೊಲೀಸ್ ನಿರೀಕ್ಷಕರು ರಫಿಕ್ ಕೆ.ಎಮ್ ಮತ್ತು ತಂಡ, ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಉಮೇಶ್ ಕುಮಾರ್ ಎಮ್.ಎನ್ ಹಾಗೂ ಸಿಬ್ಬಂಧಿಗಳ ಪರಿಶ್ರಮದಿಂದ ನಡೆದಿರುತ್ತದೆ.