Spread the love
ಮಂಗಳೂರು: ನಗರದ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 19ನೇ ಫೆಡರೇಶನ್ ಕಪ್ ರಾಷ್ಟ್ರೀಯ ಆ್ಯತ್ಲೆಟಿಕ್ ಕೂಟದ ಅಂತಿಮ ದಿನದ ಪುರುಷರ ಹಾಗೂ ಮಹಿಳಾ 110 ಮೀ ಹರ್ಡಲ್ಸ್ ಸ್ಪರ್ಧೆಯಲ್ಲಿ ಒ.ಎನ್.ಜಿ.ಸಿ ಯ ಸಿದ್ದಾಂತ ತಿಂಗ ಹಾಗೂ ತಮಿಳುನಾಡಿನ ಗಾಯತ್ರಿ ಚಿನ್ನ ಗೆದ್ದಿದ್ದಾರೆ.
ದ್ವೀತಿಯ ಸ್ಥಾನದಲ್ಲಿ ತಮಿಳುನಾಡಿನ ಸುರೇಂದ್ರರ್ ಬೆಳ್ಳಿ ಗೆದ್ದಿದ್ದು, ತೆಲಂಗಾಣದ ಕೆ.ಪ್ರೇಮ್ ಕುಮಾರ್ ತೃತೀಯ ಸ್ಥಾನ ಕಂಚು ಪಡೆದಿದ್ದಾರೆ.
ಮಹಿಳೆಯರ 110 ಮೀ ಹರ್ಡಲ್ಸ್ ನಲ್ಲಿ ತಮಿಳುನಾಡು ಗಾಯತ್ರಿ ಪ್ರಥಮ ಸ್ಥಾನ ಪಡೆದು ಚಿನ್ನ ಗೆದ್ದರೆ, ತಮಿಳುನಾಡಿನ ಮತ್ತೋರ್ವೆ ಕ್ರೀಡಾಪಟು ದೀಪಿಕಾ ದ್ವೀತಿಯ ಸ್ಥಾನ ಬೆಳ್ಳಿ ಪಡೆದಿದ್ದಾರೆ. ಕರ್ನಾಟಕದ ಮೇಘನಾ ಶೆಟ್ಟಿ ತೃತೀಯ ಸ್ಥಾನ ಕಂಚನ್ನು ಪಡೆದಿದ್ದಾರೆ.
Spread the love