Spread the love
14 ನೇ ವಾರ್ಷಿಕ ಸ್ಪೆಕ್ಟ್ರಮ್ ಹೃದಯಶಾಸ್ತ್ರ ಸಮ್ಮೇಳನ
ಸ್ಪೆಕ್ಟ್ರಮ್ – 2025″ ಎಂಬ ಒಂದು ದಿನದ ಹೃದಯಶಾಸ್ತ್ರ ಸಮ್ಮೇಳನವು ಶನಿವಾರ, ಜನವರಿ 11, 2025 ರಂದು ಮಂಗಳೂರಿನ “ದಿ ಓಷನ್ ಪರ್ಲ್” ಹೋಟೆಲ್‌ನಲ್ಲಿ ನಡೆಯಲಿದೆ.
2012ರಿಂದ ಆರಂಭವಾದ ಈ ಸಮ್ಮೇಳನದ ಇದು 14ನೇ ಆವೃತ್ತಿಯಾಗಿದೆ. ಕರ್ನಾಟಕ ಮತ್ತು ಸುತ್ತಮುತ್ತಲಿನ ರಾಜ್ಯಗಳಿಂದ 250ಕ್ಕೂ ಹೆಚ್ಚು ಹೃದಯರೋಗ ತಜ್ಞರು ಭಾಗವಹಿಸಲಿದ್ದಾರೆ. ದೇಶದ ಪ್ರಮುಖ ವೈದ್ಯರು ಉಪನ್ಯಾಸ ನೀಡಲಿದ್ದು, ಹೃದಯಶಾಸ್ತ್ರದ ವಿವಿಧ ಅಂಶಗಳ ಕುರಿತು ಚರ್ಚೆಗಳು ಮತ್ತು ಸಂವಾದಗಳು ನಡೆಯಲಿವೆ ಎಂದು ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯ ಹೃದಯರೋಗ ತಜ್ಞರು ಹಾಗೂ ಎ.ಜೆ. ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಹೃದಯಶಾಸ್ತ್ರ ವಿಭಾಗದ ಅಧ್ಯಕ್ಷರಾದ ಡಾ. ಬಿ.ವಿ. ಮಂಜುನಾಥ್ ತಿಳಿಸಿದ್ದಾರೆ.
Spread the love