16 ವರ್ಷದ ದೆರೆಬೈಲಿನ ನಿಖಿತಾಗೆ ಅಪ್ಪಳಿಸಿದ ಕಾರು; ಸ್ಥಿತಿ ಗಂಭೀರ
ಮಂಗಳೂರು: ವೇಗವಾಗಿ ಕಾರೊಂದು ಅಪ್ಪಳಿಸಿದ ಕಾರಣ 16 ವರ್ಷದ ಯುವತಿಯೋರ್ವಳು ಗಂಭೀರವಾಗಿ ಗಾಯಗೊಂಡ ಘಟನೆ ದೆರೆಬೈಲ್ ಚರ್ಚಿನ ಎದುರು ಭಾನುವಾರ ನಡೆದಿದೆ.
ಗಂಭೀರವಾಗಿ ಗಾಯಗೊಂಡ ಯುವತಿಯನ್ನು ಬಿಜೈ ಕಾಪಿಕಾಡ್ ನಿವಾಸಿ ನಿಖಿತಾ ಕುಟಿನ್ಹಾ (16) ಎಂದು ಗುರುತಿಸಲಾಗಿದೆ.
ಭಾನುವಾರ ನಿಖಿತ ಅಂಗಡಿಯಿಂದ ಸಾಮಾನು ತರಲು ಹೋಗುತ್ತಿದ್ದ ವೇಳೆ ವೇಗವಾಗಿ ಅಜಾಗರುಕತೆಯಿಂದ ಕಾರನ್ನು ಚಲಾಯಿಸಿಕೊಂಡು ಬಂದ ಕಾರಿನ ಚಾಲಕಿ ದೆರೆಬೈಲ್ ಚರ್ಚಿನ ಎದುರು ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಅಪ್ಪಳಿಸಿದ ನಿಕಿತಾ ತಲೆಗೆ ಗಂಭೀರ ಗಾಯವಾಗಿದ್ದು ಕೂಡಲೇ ಎಜೆ ಆಸ್ಪತ್ರೆಗೆ ದಾಖಲಿಸಲಾಯಿತು.
ಮಾಹಿತಿಗಳ ಪ್ರಕಾರ ನಿಖಿತ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ನಿಖಿತಾ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ದ್ವೀತಿಯ ವರ್ಷದ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಕುಟುಂಬ ವರ್ಗ, ಸ್ನೇಹಿತರು ಆಕೇಯ ಚೇತರಿಕೆಗಾಗಿ ಪ್ರಾರ್ಥನೆ ಸಲ್ಲಿಸಲು ಕೋರಿಕೊಂಡಿದ್ದಾರೆ.