ಮಿರಾಕಲ್ ಆನ್ ವೀಲ್ಸ್ ಎಂಬ ಮಾಯಾಲೋಕ – ಎನ್. ಪೂಜಾ. ಪಕ್ಕಳ

Spread the love

ಆಧುನಿಕ ಜಗತ್ತಿನಲ್ಲಿ ಸಾಮಾನ್ಯ ಮನುಷ್ಯನೇ ತನ್ನ ಶಕ್ತಿ ಮತ್ತು ಸಾಮಥ್ರ್ಯದೊಡನೆ ಸಮಾಜದಲ್ಲಿ ಗುರುತಿಸಿಕೊಳ್ಳುವುದು ಕಡಿಮೆ. ಅಂತಹದ್ದರಲ್ಲಿ ವಿಕಲಚೇತನರ ಪ್ರಯತ್ನದೊಡನೆ ನಡೆಯುತ್ತಿರುವ ಕಾರ್ಯಕ್ರಮ “ಮಿರಾಕಲ್ ಓನ್ ವೀಲ್”್ಸ. ಗಾಲಿ ಕುರ್ಚಿಯಲ್ಲಿ ಪ್ರದರ್ಶನ ನೀಡುವ ಈ ವಿಕಲಚೇತನರ ಪ್ರತಿಭೆಗೆ ಅಂಗವೈಖಲ್ಯ ಎಂದಿಗೂ ಅಡ್ಡಿಯಾಗಿಲ್ಲ.

art_lakshadeepa_dharmastala 08-12-2015 19-12-45 art_lakshadeepa_dharmastala 08-12-2015 19-18-53 art_lakshadeepa_dharmastala 08-12-2015 19-21-30 art_lakshadeepa_dharmastala 08-12-2015 19-25-13 art_lakshadeepa_dharmastala 08-12-2015 19-26-14 art_lakshadeepa_dharmastala 08-12-2015 19-29-24 art_lakshadeepa_dharmastala 08-12-2015 19-31-23 art_lakshadeepa_dharmastala 08-12-2015 19-46-25 art_lakshadeepa_dharmastala 08-12-2015 19-46-41 art_lakshadeepa_dharmastala 08-12-2015 19-51-40 art_lakshadeepa_dharmastala 08-12-2015 20-04-00 art_lakshadeepa_dharmastala 08-12-2015 20-08-20

ಸೈಯದ್ ಸಲ್ಲಾವುದ್ದೀನ್ ಅವರ ನೇತೃತ್ವದ ಈ ತಂಡದಲ್ಲಿ ಸುಮಾರು 15ಕ್ಕೂ ಆದಿಕ ಸಂಖ್ಯೆಯ ಕಲಾವಿದರಿದ್ದು ಒಂದು ಉತ್ತಮ ಸಮಾಜಿಕ ಸಂದೇಶವುಳ್ಳ ನೃತ್ಯ ರೂಪಕವನ್ನು ವೀಕ್ಷಕರಿಗೆ ಕೊಡುವ ಜವಾಬ್ದಾರಿ ಹೊತ್ತಿದ್ದಾರೆ. ಸೈಯದ್ ಸಲ್ಲಾವುದ್ದೀನ್ ಅವರು ಭರತನಾಟ್ಯ, ಕಥಕ್ ಪ್ರಕಾರಗಳಲ್ಲಿ ಸಾಧನೆ ಮಾಡಿದ್ದು ತನ್ನ ಕಲಾಸಧಕರನ್ನು ತಯಾರು ಗೊಳಿಸಲು ನೆರವಾಗಿದೆ.

ಈ ತಂಡಕ್ಕೆ ನೃತ್ಯರೂಪಕ ಎನ್ನುವುದು ಕೇವಲ ಪ್ರದರ್ಶನದ ಕಲೆಯಲ್ಲ. ದೈಹಿಕವಾಗಿ ಸಬಲರಾಗಲು ಇದು ಇವರೊಳಗಿನ ಶಕ್ತಿಯಾಗಿ ಪರಿಣಮಿಸಿದೆ. ಇದುವರೆಗೆ ಈ ತಂಡ ಸುಮಾರು 10,000ಕ್ಕೂ ಅಧಿಕ ಪ್ರದರ್ಶನ ನೀಡಿದ್ದು ಲಿಮ್ಕಾ, ಗಿನ್ನಿಸ್ ದಾಖಲೆಯಲ್ಲಿ ತಮ್ಮ ಹೆಸರು ಮೂಡಿಸಿದೆ. ಸೋಫಿ, ಯೋಗ, ದೇಶಭಕ್ತಿ ಗೀತೆ ಮತ್ತು ನೃತ್ಯ, ಪೌರಾಣಿಕ ರೂಪಕ, ಹಾಡುಗಳ ಮೂಲಕ ಜನರನ್ನು ರಂಜಿಸುವ ಈ ತಂಡಕ್ಕೆ ಕಲಾಸಕ್ತರ ಚಪ್ಪಾಳೆಯೇ ಪ್ರೀತಿಯ ಮುಕುಟ.

ಆಳ್ವಾಸ್ ನುಡಿಸಿರಿ, ಧರ್ಮಸ್ಥಳ ಲಕ್ಷದೀಪದಂತಾ ಆಕರ್ಷಕ ಕಾರ್ಯಕ್ರಮಗಳಲ್ಲಿ ತಮ್ಮ ಕಲಾಸಾಮಥ್ರ್ಯ ಬಿಚ್ಚಿಡುವ ಈ ತಂಡ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವು ಕಾರ್ಯಕ್ರಮ ನೀಡಿದೆ. ಇವರ ಕಲಾಸಾಮಥ್ರ್ಯಕ್ಕೆ ಈಗಾಗಲೇ ಹಲವು ಪ್ರಶಸ್ತಿಗಳು ಈ ತಂಡಕ್ಕೆ ಲಭ್ಯವಾಗಿವೆ. ವಿಕಲಚೇತನರೂ ಪ್ರಕೃತಿಯ ಒಂದಂಶ ಅವರನ್ನು ಬೇರೆ ಎಂದು ಕಾಣುವುದು ಅಸಮರ್ಪಕ ಎನ್ನುವ ಸಂದೇಶವನ್ನು ಸಮಾಜಕ್ಕೆ ಸಾರಲು ಹೊರಟಿರುವ ಈ ತಂಡದ ಪ್ರತಿಭೆಗೆ ಅವಿರತ ಶ್ರಮವೇ ಸ್ಪೂರ್ತಿ.

ನೃತ್ಯದ ಮೂಲಕ ಮಹಾಭಾರತ ಕತೆಯನ್ನು ಬಿಚ್ಚಿಡುವ ಈ ತಂಡ ಸರ್ವಧರ್ಮ ಸಮನ್ವಯತೆಯ ತತ್ವವನ್ನು ಸಮಾಜಕ್ಕೆ ಸಾರುವ ರೀತಿ ಸುಂದರ. ಇಡೀ ಪ್ರದರ್ಶನದುದ್ದಕ್ಕೂ ವೀಲ್ ಚಯರ್, ಊರುಗೋಲುಗಳು ಇವರ ನೃತ್ಯ ಪರಿಕರಗಳಾಗಿ ಗೋಚರಿಸುವುದರೊಡನೆ ಆ ಉಪಕರಣಗಳ ಕುರಿತು ಸಮಾಜದ ಸಾಮಾನ್ಯ ಧೋರಣೆಯನ್ನು ಬದಲಾಯಿಸುವಂತಿರುತ್ತದೆ,


Spread the love
1 Comment
Inline Feedbacks
View all comments
Devi
8 years ago

Hats of to u Mr. Siyad Saluddin, and the team members too. for a normal person like me this type of dance, confidence, courage, strength is like finding a particular star in the sky. but when i see this pictures i can understand how much practice, confidence and dedication is required to fulfill this type of great accomplishments/goals. My god…. each photo tells the story of its own. May god bless you all, and i pray god to give u all more strength, confidence, resources etc for your endeavors.