ಮಂಗಳೂರು: ತೋಟಗಾರಿಕೆ ಇಲಾಖೆ, ದ.ಕ. ಜಿಲ್ಲಾ ಪಂಚಾಯತ್ ಹಾಗೂ ಸಿರಿ ತೋಟಗಾರಿಕೆ ಸಂಘ (ರಿ) ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನವನ್ನು ಜನವರಿ 23ರಿಂದ 26ರವರೆಗೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ ತಿಳಿಸಿದ್ದಾರೆ.
ಅವರು ಈ ಸಂಬಂಧ ತಮ್ಮ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಫಲಪುಷ್ಪ ಪ್ರದರ್ಶನವನ್ನು ಇಲಾಖೆಯ ಅನುದಾನ, ಇತರೆ ಸರಕಾರಿ ಇಲಾಖೆಗಳು, ಬ್ಯಾಂಕ್‍ಗಳು, ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಭಾಗಿತ್ವದಲ್ಲಿ, ಅವರ ಸಹಕಾರದಿಂದ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗುವುದು. ಜಿಲ್ಲೆಯಲ್ಲಿ ತೋಟಗಾರಿಕ ಚಟುವಟಿಕೆ ಹಾಗೂ ತೋಟಗಾರಿಕೆ ಕಲೆಯನ್ನು ಸಾರ್ವಜನಿಕರಲ್ಲಿ ಉದ್ದೀಪನಗೊಳಿಸುವ ಮೂಲಕ ಜಿಲ್ಲೆಯ ತೋಟಗಾರಿಕೆಯಲ್ಲಿರುವ ಅವಕಾಶಗಳನ್ನು ಬಳಸಿಕೊಂಡು ಪರಿಸರ ಸಂರಕ್ಷಣೆ, ಸಾರ್ವಜನಿಕ ನೈರ್ಮಲ್ಯ, ಗ್ರಾಮ ನಗರಗಳನ್ನು ಸುಂದರಗೊಳಿಸುವುದು, ಆಧುನಿಕ ತಂತ್ರಜ್ಞಾನ ಬಳಕೆ ಇತ್ಯಾದಿ ಚಟುವಟಿಕೆಗಳ ಪಾಲನೆ ಮೂಲಕ ತೋಟಗಾರಿಕೆ ಉದ್ದಿಮೆಯನ್ನು ಮುಂದಕ್ಕೆ ಕೊಂಡ್ಯೊಯ್ಯುವ ಉದ್ದೇಶವನ್ನು ಹೊಂದಿದೆ ಎಂದು ಅವರು ತಿಳಿಸಿದರು.
ಫಲಪುಷ್ಪ ಸ್ಪರ್ಧೆ ಸಂದರ್ಭದಲ್ಲಿ ಹೆಚ್ಚಿನ ಜನಸಂದಣಿ ಇರುವ ಸಾಧ್ಯತೆ ಇರುವುದರಿಂದ ಕದ್ರಿ ಪಾರ್ಕ್ ಒಳಗೆ ಆಹಾರ ತಿನಿಸುಗಳ ಮಾರಾಟಕ್ಕೆ ಅವಕಾಶ ನೀಡಲಾಗುವುದಿಲ್ಲ. ಪಾರ್ಕ್ ಹೊರಗಡೆ ತಿಂಡಿ ತಿನಿಸುಗಳ ಮಾರಾಟಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹೇಳಿದರು.
ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಡಾ. ಯೋಗೇಶ್ ಎಚ್.ಆರ್. ಮಾತನಾಡಿ. ಜಿಲ್ಲಾ ಫಲಪುಷ್ಪ ಪ್ರದರ್ಶನದ ಅಂಗವಾಗಿ ನಗರ ಪ್ರದೇಶದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಜಿಲ್ಲಾ ನಗರವಾಸಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ಸಿರಿ ತೋಟಗಾರಿಕಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹಾಪ್‍ಕಾಂಸ್ ನಿಂದ ಆಧುನಿಕ ಸಂಗ್ರಹಣಾಗಾರ
ಮ0ಗಳೂರು: ದ.ಕ ಜಿಲ್ಲೆಯ ರೈತರ ಸ್ನೇಹಿ ಹಾಪ್ ಕಾಂಸ್ ವತಿಯಿಂದ 10 ಟನ್ ಸಾಮಥ್ರ್ಯದ ಸಂಗ್ರಹಣಾಗಾರವನ್ನು ಇಂದು ದ.ಕ ಮತ್ತು ಉಡುಪಿ ಜಿಲ್ಲೆಗಳ ಹಾಪ್ ಕಾಂಸ್ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ ಉಡುಪ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ಐ ಶ್ರೀ ವಿದ್ಯಾ ಅವರು ಇಂದು ಪಡೀಲ್ ವೃತ್ತದ ಬಳಿ ಇರುವ ತೋಟಗಾರಿಕಾ ಇಲಖೆಯ ಆವರಣದಲ್ಲಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಅವರು ಆಧುನಿಕ ಮಾರಾಟ ಮಳಿಗೆಯನ್ನು ಉದ್ಘಾಟಿಸಿದರು. 10 ಟನ್ ಸಾಮಥ್ರ್ಯದ ಶೀತಲ ಘಟಕವನ್ನು ಮಂಗಳೂರು ಮಹನಗರ ಪಾಲಿಕೆಯ ಉಪ ಆಯುಕ್ತ ಗೋಕುಲ ದಾಸ್ ನಾಯಕ್, ಹಾಗೂ ಬಾಳೆಕಾಯಿ ಮಾಗಿಸುವ ಘಟಕವನ್ನು ಸಹಕಾರ ಸಂಘಗಳ ಉಪನಿಭಂದಕರಾದ ಬಿ.ಕೆ ಸಲೀಂ ಅವರು ಉದ್ಘಾಟಿಸಿದರು.
ಈ ಕೇಂದ್ರದಲ್ಲಿ ರೈತರು ಬೆಳೆದ ಹಣ್ಣು ಹಂಪಲುಗಳನ್ನು ಖರೀದಿಸುವುದು ಮತ್ತು ಮಾರಾಟ ಮಾಡಲಾಗುವುದು. ಈ ಮಾರಾಟ ಮಳಿಗೆಯಲ್ಲಿ ಹೋಲ್‍ಸೇಲ್ ಮತ್ತು ರೀಟೇಲ್ ಆಗಿಯೂ ಹಣ್ಣು ಹಂಪಲುಗಳನ್ನು ಮಾರಾಟ ಮಾಡಲಾಗುವುದು ಎಂದು ವ್ಯವಸ್ಥಪಕ ನಿರ್ದೇಶಕರಾದ ಜೋ. ಪ್ರದೀಪ್ ಡಿಸೋಜ ಇವರು ತಿಳಿಸಿದರು.
ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟಮೇಳ
ಮ0ಗಳೂರು : ಮೈಸೂರಿನ ಸುಪ್ರಸಿದ್ಧ ಪಾರಂಪರಿಕ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳ ಡಿಸೆಂಬರ್ 11ರಿಂದ 14ರವರೆಗೆ ನಗರದ ಲಾಲ್‍ಬಾಗ್ ನೆಹರೂ-ಅವಿನ್ಯೂ ರಸ್ತೆಯಲ್ಲಿರುವ ಪ್ರಾದೇಶಿಕ ಹಿಂದಿ ಪ್ರಚಾರ ಸಮಿತಿ, ಹಾಲ್‍ನಲ್ಲಿ ನಡೆಯಲಿದೆ.
ಡಿ. 11ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನವನ್ನು ಉದ್ಘಾಟಿಸುವರು. ಮೈಸೂರು ಸಿಲ್ಕ್‍ಗೆ ಉಪಯೋಗಿಸಲ್ಪಡುವ ಜರಿಯು ಪರಿಶುದ್ಧ ಚಿನ್ನದಾಗಿದ್ದು, ಸಾಂಪ್ರಾದಾಯಿಕ ಮತ್ತು ಆಧುನಿಕ ಡಿಸೈನ್‍ಗಳಿಂದ ಕೂಡಿದೆ. ಶೇಕಡಾ 25 ರಿಯಾಯಿತಿ ಸೀರೆಗಳಿಗೆ ನೀಡಲಾಗುತ್ತಿದ್ದು, ಸಿಲ್ಕ್ ಬಟ್ಟೆಗಳಲ್ಲಿಯೇ ಅತ್ಯುತ್ತಮ ಗುಣಮಟ್ಟವನ್ನು ಮೈಸೂರು ಸಿಲ್ಕ್ ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.
ಐ ಎನ್ ಎಸ್ ವಿರಾಟ್: ರಾಜ್ಯಕ್ಕೆ ಕೇಂದ್ರ ಪತ್ರ
ಮ0ಗಳೂರು : ಮಂಗಳೂರು ಲೋಕ ಸಭಾ ಕ್ಷೇತ್ರದ ಸಂಸದರಾದ ನಳೀನ್ ಕುಮಾರ್ ಕಟೀಲ್ ಅವರು ಐ ಎನ್‍ಎಸ್ ವಿರಾಟ್ ಯುದ್ಧ ನೌಕೆಯನ್ನು ಮಂಗಳೂರು ಬಂದರಿನಲ್ಲಿ ವಿಮಾನ ನೌಕೆ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸುವ ಉದ್ದೇಶ ಇದೆಯೇ ಎಂಬ ಪ್ರಶ್ನೆಯನ್ನು ಲೋಕಸಭಾ ಅಧಿವೇಶನದಲ್ಲಿ ಹೇಳಿದ್ದರು. ಡಿ.4 ರಂದು ಸಂಸತ್ ನಲ್ಲಿ ಹಾಜರಿದ್ದ ರಕ್ಷಣಾ ರಾಜ್ಯ ಸಚಿವ ರಾವ್ ಇಂದ್ರಜಿತ್ ಸಿಂಗ್ ಅವರು ಉತ್ತರಿಸಿದ್ದಾರೆ.
ಅವರು ತಮ್ಮ ಉತ್ತರದಲ್ಲಿ ಐಎನ್‍ಎಸ್ ವಿರಾಟ್ ವಿಮಾನ ವಾಹನವನ್ನು 2016 ರ ಅಂತರರಾಷ್ಟ್ರೀಯ ವಿಮಾನ ಪರಿಶೀಲನಾ ಕಾರ್ಯ ನಂತರಸೇವೆಯಿಂದ ಮುಕ್ತಗೊಳಿಸಲಾಗುವುದು. ಅಲ್ಲದೆ ಕೇಂದ್ರ ಸರ್ಕಾರ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬರೆದಿರುವ ಪತ್ರವನ್ನು ಪರಿಶೀಲಿಸಿದ್ದು ನವ ಮಂಗಳೂರು ಬಂದರಿನಲ್ಲಿ ಐ ಎನ್ ಎಸ್ ವಿರಾಟ್ ಮೇಲೆ ಏರ್ ಕ್ರಾಫ್ಟ್ ಮ್ಯೂಸಿಯಂನ್ನು ಸ್ಥಾಪಿಸುವ ಇರಾದೆಯನ್ನು ಪರಿಗಣಿಸಿದ್ದು , ಈ ನಿಟ್ಟಿನಲ್ಲಿ ದೇಶದ ಇನ್ನೂ ಹಲವಾರು ಕರಾವಳಿ ರಾಜ್ಯ ಸರ್ಕಾರಗಳು ತಮಗೂ ಐ ಎನ್ ಎಸ್ ವಿರಾಟ್‍ನ್ನು ನೀಡಲು ಬೇಡಿಕೆ ಇಟ್ಟಿರುತ್ತಾರೆ. ಈ ನಿಟ್ಟಿನಲ್ಲಿ ಹಣಕಾಸು ನೆರವಿನ ಬದ್ಧತೆ ಒದಗಿಸುವ ಬಗ್ಗೆ ಕರ್ನಾಟಕ ಸೇರಿದಂತೆ ಆಸಕ್ತ ರಾಜ್ಯಗಳಿಗೆ ಪತ್ರ ಬರೆಯಲಾಗಿದೆ ಎಂದು ಸಚಿವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.