ಮಂಗಳೂರು: ಮಕ್ಕಳ ಆಸಕ್ತಿ ಪ್ರತಿಭೆಗಳನ್ನು ಪೋಷಿಸಿ ಬೆಳೆಸಿದಾಗ ಅವರು ಬಾನೆತ್ತರಕ್ಕೆ ಏರಬಲ್ಲರು ಎಂದು ರೇಡಿಯೋ ಸಿಟಿ, ಬೆಂಗಳೂರು ಇಲ್ಲಿನ ವಾೈಸ್ ಕೆ ವಿಶ್ವಾಸ್ ಕಾಮತ್ ಹೇಳಿದರು. ಅವರು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್, ಮಹಿಳಾ ಮಂಡಳಿ ಕುಳಾೈ ಇಲ್ಲಿ ಯುವ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತಾಡುತ್ತಿದ್ದರು. ಸ್ವಾಮಿ ವಿವೇಕಾನಂದರ ಆದರ್ಶಗಳ ತಿಳುವಳಿಕೆ ನೀಡುವ ಮೂಲಕ, ಇಂದಿನ ಯುವ ಪೀಳಿಗೆಯನ್ನು ಧನಾತ್ಮಕ ಯೋಚನೆಗಳತ್ತ ಕೊಂಡೊಯ್ಯಬೇಕೆಂದು ಅವರು ಹೇಳಿದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಮಹಿಳಾ ಮಂಡಲದ ವತ್ಸಲಾ ಭಟ್, ಇಂತಹ ಕಾರ್ಯಕ್ರಮಗಳು ಇಂದಿನ ಅಗತ್ಯ ಎಂದು ಶ್ಲಾಘಿಸಿದರು. ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಸುಬ್ರಾಯ ಭಟ್ ಪ್ರಸ್ತಾವಿಸಿ ಸ್ವಾಗತಿಸಿದರು.
ನಂತರ ನಡೆದ ಕವಿಗೋಷ್ಠಿಯಲ್ಲಿ ಕಾಸರಗೋಡು ಅಶೋಕ್ ಕುಮಾರ್, ಎಸ್ ಕೆ ಗೋಪಾಲಕೃಷ್ಣ ಭಟ್, ಶೈಲಜಾ ಪುದುಕೋಳಿ, ಪವಿತ್ರಾ ಆಚಾರ್ಯ, ಎಂ ಎಸ್ ವೆಂಕಟೇಶ್ ಗಟ್ಟಿ, ಸುರೇಖಾ ಎಳವಾರ, ದೀಪಾ, ಎಸ್ ಕೆ ಕುಂಪಲ, ದಿಶಾ ಎನ್ ಸ್ವರಚಿತ ಚುಟುಕು/ಕವನಗಳನ್ನು ವಾಚಿಸಿದರು. ರವೀಂದ್ರಕುಮಾರ್ ಕೆದಂಬಾಡಿ ನಿರೂಪಿಸಿ ವಂದಿಸಿದರು.