Home Mangalorean News Kannada News 2 ಸಮುದಾಯಗಳ 9 ವರ್ಷಗಳ ಮನಸ್ಥಾಪ ಒಂದೇ ಗಂಟೆಯಲ್ಲಿ ಪರಿಹರಿಸಿದ ಅಣ್ಣಾಮಲೈ

2 ಸಮುದಾಯಗಳ 9 ವರ್ಷಗಳ ಮನಸ್ಥಾಪ ಒಂದೇ ಗಂಟೆಯಲ್ಲಿ ಪರಿಹರಿಸಿದ ಅಣ್ಣಾಮಲೈ

Spread the love

2 ಸಮುದಾಯಗಳ 9 ವರ್ಷಗಳ ಮನಸ್ಥಾಪ ಒಂದೇ ಗಂಟೆಯಲ್ಲಿ ಪರಿಹರಿಸಿದ ಅಣ್ಣಾಮಲೈ

ಚಿಕ್ಕಮಗಳೂರು: ಎರಡು ಸಮುದಾಯಗಳ ನಡುವೆ ಮನಸ್ಥಾಪದ ಕಾರಣ ಗ್ರಾಮದಲ್ಲಿ ಒಂಬತ್ತು ವರುಷಗಳಿಂದ ಗ್ರಾಮದಲ್ಲಿ ನೆಲೆ ಮಾಡಿದ್ದ ಅಶಾಂತಿಯನ್ನು ಕೇವಲ ಒಂದು ಗಂಟೆಯಲ್ಲಿ ರಾಜಿ ಸಂಧಾನ ನಡೆಸುವ ಮೂಲಕ ಜಿಲ್ಲೆಯ ನಿಷ್ಠಾವಂತ ಜಿಲ್ಲಾ ಪೋಲಿಸ್ ಅಣ್ಣಾಮಲೈ ಅವರು ಯಶಸ್ಸನ್ನು ಕಂಡಿದ್ದಾರೆ.

ಹೌದು ಇಂತಹ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದು ಚಿಕ್ಕಮಗಳೂರಿನ ಮರವಂಜಿಯ ಕುರುಬ ಸಮಾಜ. ಮರವಂಜಿ ಗ್ರಾಮದಲ್ಲಿ ರಾಜ್ಯ ಸರಕಾರದ ಅನುದಾನದಲ್ಲಿ ಕುರುಬ ಸಮಾಜಕ್ಕಾಗಿ ಸಮುದಾಯ ಭವನ ನಿರ್ಮಾಣವಾಗುತ್ತಿದೆ. ಚುನಾವಣೆಯಲ್ಲಿ ಸೋತಿರುವ ಕಾರಣಕ್ಕಾಗಿ ಆ ವ್ಯಕ್ತಿ ಸಮಾಜದ ಯಾವುದೇ ಕಾರ್ಯಗಳಿಗೆ ಭಾಗವಹಿಸದೇ ಸಮುದಾಯ ಭವನದ ನಿರ್ಮಾಣದ ಮುಂದಾಳತ್ವಕ್ಕೂ ಬಾರದೇ ಕುರುಬ ಸಮಾಜಕ್ಕೆ ಯಾವುದೇ ರೀತಿಯ ಲೆಕ್ಕವನ್ನೂ ನೀಡದ ಕಾರಣಕ್ಕೆ ಆ ವ್ಯಕ್ತಿಯನ್ನು ಸಮಾಜದಿಂದ ದೂರವಿಟ್ಟಿತ್ತು.  ತಾನು ದಂಡ ಕಟ್ಟುವುದಿಲ್ಲ ಎಂದು ಇಡೀ ಸಮಾಜದ ವಿರುದ್ದ ತನ್ನದೇ ಆದ ಬೆರಳೆಣಿಕೆಯಷ್ಟು ಜನರೊಂದಿಗೆ ಈ ವ್ಯಕ್ತಿ ಇದ್ದರು. ಇಡೀ ಕುರುಬ ಸಮಾಜ ಒಂದು ಕಡೆಯಾದರೆ, ಆ ವ್ಯಕ್ತಿಯೇ ಒಂದು ಕಡೆ ಎಂಬಂತಾಗಿ ಕಳೆದ 9 ವರ್ಷಗಳಿಂದ ಮರವಂಜಿ ಗ್ರಾಮದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿತ್ತು.

ಈ ವಿಚಾರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ ಅಣ್ಣಾಮಲೈ ಅವರ ಗಮನಕ್ಕೂ ಬಂದು ಗ್ರಾಮದ ಸಮುದಾಯ ಭವನಕ್ಕೆ ತೆರಳಿದ್ದರು. ಎರಡೂ ಗುಂಪಿನ ಸಮಸ್ಯೆಗಳನ್ನು ಶಾಂತಚಿತ್ತರಾಗಿ ಆಲಿಸಿದ ಅಣ್ಣಾಮಲೈ ಅವರು ಇನ್ನು ಮುಂದೆ ಗ್ರಾಮದಲ್ಲಿ ಶಾಂತಿ ನೆಲೆಸಿ, ದೇವಾಲಯಗಳಿಗೆ ಮುಕ್ತ ಪ್ರವೇಶವನ್ನು ನೀಡಿ ಯಾರೂ ಬೇಕಾದರೂ ಪ್ರವೇಶ ಮಾಡಬೇಕಾಗಿದೆ ಅಲ್ಲದ ಸಣ್ಣ ಪುಟ್ಟ ತಪ್ಪುಗಳಿಗೆ ದುಷ್ಟರನ್ನು ಸರಿ ದಾರಿಗೆ ತರಲು ದಂಡ ವಿಧಿಸುವುದು ಸರಿಯಲ್ಲ ಎಂಬ ಬುದ್ದಿವಾದ ಹೇಳಿದರು.

 ಎಸ್‌ಪಿ ಅಣ್ಣಾಮಲೈ ಮಾತಿಗೆ ಬೆಲೆ ನೀಡಿದ ಗ್ರಾಮಸ್ಥರು ಚಪ್ಪಾಳೆ ತಟ್ಟುವ ಮೂಲಕ ನಾವೆಲ್ಲಾ ಒಂದಾಗಿ ಬಾಳುವುದರೊಂದಿಗೆ ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಾಗಿ ದುಡಿಯುತ್ತೇವೆ ಎಂಬ ಭರವಸೆ ನೀಡಿದರು. ಬಳಿಕ ಅಣ್ಣಾಮಲೈ ಅವರು ಗ್ರಾಮದ ಜನತೆ ನೀಡಿದ ಆತಿಥ್ಯವನ್ನು ಸ್ವೀಕರಿಸಿದರು.

 


Spread the love
2 Comments
Inline Feedbacks
View all comments
7 years ago

The kind of compromise reached by S.P. Annamalai is the right approach towards creating unity which will lead to development. Congratulation to S.P. Annamalai and let peace and harmony prevail, always. Well done m.com very informative coverage:)

Sheikh
7 years ago

I appreciate S.P. Annamalai efforts for uniting India.

Your service will be well remembered in Udupi district for decades.

Jai Hind

wpDiscuz
Exit mobile version