20ನೇ ರಾಷ್ಟ್ರೀಯ ಜಾನುವಾರು ಗಣತಿ

Spread the love

20ನೇ ರಾಷ್ಟ್ರೀಯ ಜಾನುವಾರು ಗಣತಿ

ಮಂಗಳೂರು : ಭಾರತ ಸರ್ಕಾರದ ಮಹತ್ವಕಾಂಕ್ಷಿ ಕಾರ್ಯಕ್ರಮವಾದ 20ನೇ ರಾಷ್ಟ್ರೀಯ ಜಾನುವಾರು ಗಣತಿಯನ್ನು ರಾಷ್ಟ್ರಾದ್ಯಂತ ನಡೆಸಲಾಗುತ್ತಿದ್ದು. ಜಿಲ್ಲೆಯಲ್ಲಿಯೂ ಸಹ ಜಾನುವಾರು ಗಣತಿಯನ್ನು ಪ್ರಾರಂಭಿಸಲು ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಜಿಲ್ಲಾ ಮಟ್ಟದಲ್ಲಿ ತರಬೇತಿ ಕಾರ್ಯಗಾರವನ್ನು ಪಶು ಆಸ್ಪತ್ರೆ ಆವರಣ, ಮಂಗಳೂರು ಇಲ್ಲಿ ಇತ್ತೀಚೆಗೆ ನಡೆಯಿತು.

ತರಬೇತಿ ಕಾರ್ಯಗಾರವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು ಉದ್ಘಾಟಿಸಿ, ಗಣತಿ ಕಾರ್ಯದ ಯಶಸ್ವಿ ಅನುಷ್ಠಾನದಲ್ಲಿ ಇಲಾಖೆಯ ಜವಾಬ್ದಾರಿ ಮತ್ತು ಪ್ರಾಮುಖ್ಯತೆಯನ್ನು ಪ್ರಸ್ತಾಪಿಸಿ ಗಣತಿ ಕಾರ್ಯದ ಮಹತ್ವವನ್ನು ವಿವರಿಸಿ 20ನೇ ರಾಷ್ಟ್ರೀಯ ಜಾನುವಾರು ಗಣತಿ ಕಾರ್ಯ ಜಿಲ್ಲೆಯಲ್ಲಿ ಯಶಸ್ವಿಯಾಗಲೆಂದು ಹಾರೈಸಿದರು. ಈ ಸಂದರ್ಭದಲ್ಲಿ ಮತ್ತು ಸಾಂಕೇತಿಕವಾಗಿ ಇಬ್ಬರು ಗಣತಿದಾರರಿಗೆ ಟ್ಯಾಬ್ಲೆಟ್‍ಗಳನ್ನು ವಿತರಿಸಿದರು.

ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಎಸ್. ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಜಾನುವಾರು ಗಣತಿ ಪ್ರಾರಂಭ ಹಾಗೂ ಅದು ಸಾಗಿಬಂದ ಹಿನ್ನೆಲೆಯನ್ನು ವಿವರಿಸಿ ಗಣತಿ ಕಾರ್ಯದಲ್ಲಿ ಇಲಾಖೆಯ ಅಧಿಕಾರಿ ಸಿಬ್ಬಂದಿ ಹಾಗೂ ಗಣತಿದಾರರ ಜವಾಬ್ದಾರಿಯನ್ನು ಅವರು ತಿಳಿಸಿದರು.

20ನೇ ರಾಷ್ಟ್ರೀಯ ಜಾನುವಾರು ಗಣತಿಗಾಗಿ ಜಿಲ್ಲೆಯಲ್ಲಿ ಇಬ್ಬರು ಮಾಸ್ಟರ್ ತರಬೇತುದಾರರಾದ ಡಾ| ಈಶ್ವರ್ ಎಮ್. ಸಹಾಯಕ ನಿರ್ದೇಶಕರು, ಜಿಲ್ಲಾ ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ, ಮಂಗಳೂರು ಮತ್ತು ಶ್ರೀಧರ್ ಶೆಟ್ಟಿ, ಜಾನುವಾರು ಅಭಿವೃದ್ಧಿ ಅಧಿಕಾರಿ ಉಪನಿರ್ದೇಶಕರ ಕಛೇರಿ (ಆಡಳಿತ), ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮಂಗಳೂರು ಇವರು ಜಿಲ್ಲೆಯ 5 ತಾಲ್ಲೂಕುಗಳಿಂದ ಬಂದಂತಹ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಮಾಹಿತಿ ನೀಡಿದರು.


Spread the love