ಮಂಗಳೂರು: 20ಲಕ್ಷ ರೂಪಾಯಿ ವೆಚ್ಚದಲ್ಲಿ 34ನೇ ವಾರ್ಡನ ಕಾಂಕ್ರಿಟೀಕರಣಗೊಂಡ 1ನೇ ಅಡ್ಡ ರಸ್ತೆಯನ್ನು ಉದ್ಗಾಟನೆಯನ್ನು ಸ್ಥಳೀಯ ಹಿರಿಯ ನಾಗರಿಕರಾದ ಶ್ರೀಯುತ ಜೇರಿನ್ ಸಾಲಿನ್ ನವರು ನೇರವೆರಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ಶಾಸಕರಾದ ಶ್ರೀ.ಜೆ.ಆರ್.ಲೋಬೊರವರು ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕರು ನನ್ನ ಅಧಿಕಾರಾವದಿಯಲ್ಲಿ ಮಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳ ಹಾಕಿಕೊಂಡು ರಾಜ್ಯದಲ್ಲಿ ಮಂಗಳೂರನ್ನು ಒಂದು ಮಾದರಿ ನಗರವನ್ನಾಗಿ ಮಾಡಲು ಶ್ರಮ ವಹಿಸಿ ಹಲವಾರು ಮಾದರಿ ರಸ್ತೆಗಳ ಅಭಿವೃದ್ಧಿಗಳನ್ನು ಕೈಗೊಂಡಿದ್ದೇನೆ ಹಾಗೂ ನನ್ನ ಅವದಿಯಲ್ಲಿ ಮಾರ್ಕೆಟ್ ಗಳ ನವೀಕರಣ ಕಾಮಗಾರಿ ಆರಂಬಿಸಲಾಗಿದೆ.ಇನ್ನೂ ಹಲವಾರು ಕಾಮಗಾರಿಗಳು ಮಂಜುರಾತಿಯ ಹಂತದಲ್ಲಿದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಸ್ಥಳೀಯ ಮ.ನ.ಪಾ ಸದಸ್ಯರಾದ ಶ್ರೀಮತಿ ಸಭೀತಾ ಮಿಸ್ಕಿತ್ ವಾರ್ಡ ಅಧ್ಯಕ್ಷರಾದ ಜೇಮ್ಸ್ ಪ್ರವೀಣ್ ಡಿಸೋಜಾ, ನೆಲ್ಸನ್ ಮೊಂತೆರೋ.ಬ್ಯಾಪ್ಟಿಸ್ಟ್ ,ಸುರೇಶ್ ಕದ್ರಿ , ಜಯಕರ ಸಮರ್ಥ, ಸಿರಿಲ್ ಫರ್ನಾಂಡಿಸ್ ನೋರ್ಬಟ್ ಕ್ರಾಸ್ಟ ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.