ಮಂಗಳೂರು: 19ನೇ ಫೆಡರೇಶನ್ ಕಪ್ ರಾಷ್ಟ್ರೀಯ ಆ್ಯತ್ಲೆಟಿಕ್ ಕೂಟದ ಅಂತಿಮ ಪುರುಷರ ಹಾಗೂ ಮಹಿಳೆಯರ 200ಮೀ ಓಟದಲ್ಲಿ ಹರ್ಯಾಣದ ಧರಾಮ್ಬೀರ್ ಹಾಗೂ ಓಡಿಸ್ಸಾದ ಸ್ರಾಬನಿ ನಂದ ಚಿನ್ನ ಗೆದ್ದಿದ್ದಾರೆ.
ಪುರುಷರ 200ಮೀ ಓಟದಲ್ಲಿ ತಮಿಳುನಾಡಿನ ಎಮ್. ಮಣಿಕಂದ ಬೆಳ್ಳಿ ಹಾಗೂ ಹರ್ಯಾಣದ ಪ್ರವೀಣ್ ಕುಮಾರ್ ಕಂಚು ಪಡೆದಿದ್ದಾರೆ. ಮಹಿಳೆಯರ 200ಮೀ ಓಟದಲ್ಲಿ ಓಡಿಸ್ಸಾದ ದ್ಯೂಟಿ ಚಂದ್ ಬೆಳ್ಳಿ ಹಾಗೂ ತೃತೀಯ ಸ್ಥಾನದಲ್ಲಿ ಕರ್ನಾಟಕದ ಎಮ.ಜಿ. ಪದ್ಮಿನಿ ಕಂಚು ಪಡೆದಿದ್ದಾರೆ.