2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸೀಟು ಗೆಲ್ಲುವ ವಿಶ್ವಾಸ ; ಜಯಪ್ರಕಾಶ್ ಹೆಗ್ಡೆ

Spread the love

2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸೀಟು ಗೆಲ್ಲುವ ವಿಶ್ವಾಸ ; ಜಯಪ್ರಕಾಶ್ ಹೆಗ್ಡೆ

ಉಡುಪಿ: 2018 ರ ವಿಧಾನಸಭೆಯಲ್ಲಿ ಭಾರತೀಯ ಜನತಾ ಪಕ್ಷವು ರಾಜ್ಯದಲ್ಲಿ 150 ಸೀಟುಗಳನ್ನು ಗೆಲ್ಲುವುದು ನಮ್ಮ ಗುರಿಯಾಗಿದೆ ಎಂದು ನೂತನವಾಗಿ ಬಿಜೆಪಿಗೆ ಸೇರ್ಪಡೆಗೊಂಡ ಮಾಜಿ ಸಂಸದ ಕೆ ಜಯಪ್ರಕಾಶ್ ಹೆಗ್ಡೆ  ಹೇಳಿದರು.

ಅವರು ಪಕ್ಷ ಸೇರ್ಪಡೆಗೊಂಡ ಬಳಿಕ ಮಂಗಳವಾರ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿಯಾದಾಗ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಬಿಜೆಪಿ ಪಕ್ಷ ನನಗೇನು ಹೊಸತಲ್ಲ, ನಾನು ಜೆ ಎಚ್ ಪಟೇಲ್ ಸರ್ಕಾರದಲ್ಲಿ ಸಚಿವನಾಗಿದ್ದ  ವೇಳೆ ವಿಧಾನಪರಿಷತ್ ನಲ್ಲಿ ಡಾ ವಿ ಎಸ್ ಆಚಾರ್ಯ ಅವರೊಂದಿಗೆ ಕೆಲಸ ಮಾಡಿದ ಅನುಭವ ನನಗಿದೆ. ಅಲ್ಲದೆ ಉಡುಪಿಯಲ್ಲಿ ಜಿಲ್ಲೆಯಾಗಿ ಘೋಷಣೆ ಮಾಡುವ ವೇಳೆ ವಿ ಎಸ್ ಆಚಾರ್ಯ ಅವರು ಬೆಂಬಲಿಸದ್ದು, ಇಂದು ಜಿಲ್ಲೆಯ ಅಭಿವೃದ್ಧಿಪಥದತ್ತ ಮುನ್ನುಗ್ಗುತ್ತಿದ್ದು ಅವರ ಅಂದಿನ ಸಹಕಾರ ಕೂಡ ಮರೆಯಲಾಗದು. ಅಲ್ಲದೆ ಕೆಲಸ ಮಾಡುವವರಿಗೆ ಅವರು ಯಾವತ್ತೂ ಕೂಡ ಪ್ರೇರಣೆ ಮತ್ತು ಸಹಕಾರವನ್ನು ನೀಡುತ್ತಿದ್ದರು.

ಬಿಜೆಪಿ ಸೇರ್ಪಡೆ ನನ್ನ ಒಬ್ಬನ ತೀರ್ಮಾನವಲ್ಲ, ಬದಲಾಗಿ ಹಲವಾರು ನನ್ನ ಬೆಂಬಲಿಗರು ಕಾರ್ಯಕರ್ತುರ ಅಲ್ಲಲ್ಲಿ ಸಭೆ ಸೇರಿ ಅಭಿಪ್ರಾಯ ಸಂಗ್ರಹಿಸಿದ ಬಳಿಕ ತೀರ್ಮಾನ ಕೈಗೊಂಡಿದ್ದೇನೆ. ಹಲವಾರು ವ್ಯಕ್ತಿಗಳು ನನ್ನ ಮುಂದಿನ ಕೆಲಸದ ಬಗ್ಗೆ ಕೇಳಿದ್ದು, ಕೇಳಿದವರು ನನ್ನ ಮುಂದಿನ ಕೆಲಸವನ್ನು ನೋಡಿ ಮುಂದೆ ಮಾತನಾಡಬೇಕು.

ಬಿಜೆಪಿಪಯಲ್ಲೂ ಕೂಡ ಹೆಚ್ಚಿನವರು ನನ್ನ ಪರಿಚಯದವರು ಹಿಂದಿನ ಜನತಾದಳದಲ್ಲಿ ಕೆಲಸ ಮಾಡಿದವರು, ಒಂದು ಪಕ್ಷದಲ್ಲಿ ಇದ್ದು ಇನ್ನೋಂದು ಪಕ್ಷದಲ್ಲಿ ಬದಲಾವಣೆ ಬಯಸಿ ಬಿಜೆಪಿಗೆ ಬಂದವರು ಕೂಡ ಈ ಪಕ್ಷದಲ್ಲಿದ್ದು ಕೆಲಸ ಮಾಡಲು ಯಾವುದೇ ರೀತಿಯ ತೊಂದರೆ ಇಲ್ಲ. ಮುಂದೆ ಪಕ್ಷದ ಎಲ್ಲಾ ನಾಯಕರೊಂದಿಗೆ ಕಾರ್ಯಕರ್ತರೊಂದಿಗೆ ಸೇರಿ ಕೆಲಸ ಮಾಡುವುದರೊಂದಿಗೆ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುವ ಮಹತ್ವದ ಜವಾಬ್ದಾರಿ ಇದೆ. ನನಗೆ ಕೇವಲ ಉಡುಪಿಯಲ್ಲಿ ಮಾತ್ರ ಬೆಂಬಲಿಗರು ಇಲ್ಲ ಬದಲಾಗಿ ಚಿಕ್ಕಮಗಳೂರಿನಲ್ಲಿ ಕೂಡ ಪಕ್ಷ ಸಂಘಟನೆಯ ಜವಾಬ್ದಾರಿ ಇದ್ದು, ಮುಂದಿನ ದಿನಗಳಲ್ಲಿಯೂ ಅಲ್ಲಿಯೂ ಕೂಡ ಪಕ್ಷ ಸಂಘಟನೆ ಮಾಡುವುದಾಗಿ ಹೇಳಿದರು. ನನ್ನ ಬೆಂಬಲಿಗ ಮಿತ್ರರು ಹಾಗೂ ಹಿತೈಷಿಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಆಗಮಿಸಿಲಿದ್ದು, ಮಾರ್ಚ್ 25 ರಂದು ರಾಜ್ಯದ ಹಿರಿಯ ನಾಯಕರ ಸಮ್ಮುಖದಲ್ಲಿ ಅವರು ಪಕ್ಷಕ್ಕೆ ಸೇರ್ಪಡೆಗೊಳ್ಳಲ್ಲಿದ್ದಾರೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಮಾಜಿ ಶಾಸಕ ರಘುಪತಿ ಭಟ್, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಕುತ್ಯಾರು ನವೀನ್ ಶೆಟ್ಟಿ, ಹಾಗೂ ಇತರರು ಉಪಸ್ಥಿತರಿದ್ದರು.


Spread the love