2018 ರ ಚುನಾವಣೆಯಲ್ಲಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ : ವಿ ಆರ್ ಸುದರ್ಶನ್

Spread the love

2018 ರ ಚುನಾವಣೆಯಲ್ಲಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ : ವಿ ಆರ್ ಸುದರ್ಶನ್
ಮಂಗಳೂರು: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡ್ಯೂರಪ್ಪ ಅವರಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಭೃಷ್ಟಾಚಾರದಲ್ಲಿ ಮುಳುಗಿದೆ ಎಂದು ಹೇಳುವ ಯಾವುದೇ ನೈತಿಕ ಹಕ್ಕು ಇಲ್ಲ. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರವಿದ್ದಾಗ ಯಡ್ಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದು ಸ್ವತಃ ಭೃಷ್ಟಾಚಾರದ ಆರೋಪಹೊತ್ತು ಜೈಲಿಗೆ ಹೋದಂತ ವ್ಯಕ್ತಿಯಿಂದ ಕಾಂಗ್ರೆಸ್ ಪಾಠ ಕಲಿಯಬೇಕಾಗಿಲ್ಲ ಎಂದು ಕೆಪಿಸಿಸಿ ವಕ್ತಾರ ವಿ ಆರ್ ಸುದರ್ಶನ್ ಹೇಳಿದರು.
ಅವರು ಭಾನುವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಬಿಜೆಪಿ ಆಡಳಿತವಿದ್ದ ವೇಳೆ ರಾಜ್ಯ ಮೂರು ಮಂದಿ ಮುಖ್ಯಮಂತ್ರಿಗಳನ್ನು ಕಂಡಿದೆ ಅದರಲ್ಲೂ ಯಡ್ಯೂರಪ್ಪ ಅವರ ಭೃಷ್ಟಾಚಾರದ ಸಂಬಂದ ಪ್ರಕರಣಗಳು ಇನ್ನೂ ನ್ಯಾಯಾಲಯದಲ್ಲಿವೆ ಅವರಿಗೆ ಭೃಷ್ಟಾಚಾರದ ಕುರಿತು ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ ಎಂದರು.

ಯಡ್ಯೂರಪ್ಪ ಅವರ ಭೃಷ್ಟಾಚಾರದ ಕುರಿತು ರಾಜ್ಯದ ಜನತೆಗೆ ಸ್ಪಷ್ಟ ಅರಿವಿದೆ. ಬಿಜೆಪಿಯಿಂದ ಜನರನ್ನು ಮರಳು ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಸುಳ್ಳು ಹೇಳಿಕೆಗಳಿಂದ ಜನರನ್ನು ನಂಬಿಸಬಹುದು ಎಂಬುದು ಕೇವಲ ಕನಸಾಗಿದೆ. ಯಡ್ಯೂರಪ್ಪ ಅವರ ಭೃಷ್ಠಾಚಾರ ಎಲ್ಲರಿಗೂ ತಿಳಿದಿದ್ದು, ಬಿಜೆಪಿ ಹೇಳಿಕೆ ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತಾಗಿದೆ ಎಂದರು.
ಬಿಜೆಪಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸೀಟು ಗೆಲ್ಲುವ ಕನಸು ಕಾಣುತ್ತಿದೆ ಅದು ಅವರಿಗೆ ಕನಸಾಗಿಯೇ ಉಳಿಯಲಿದೆ. ರಾಜ್ಯದ ಜನತೆ ಮತ್ತೆ ಬಿಜೆಪಿಗೆ ಅಧಿಕಾರ ನೀಡುವುದಿಲ್ಲ ಅಲ್ಲದೆ ಮತ್ತೆ ಪುನಃ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕ ಇಬ್ರಾಹಿಂ ಕೋಡಿಜಾಲ್, ಮೇಯರ್ ಕವಿತಾ ಸನೀಲ್, ಪದ್ಮನಾಭ ನರಿಂಗಾನ, ವಿನಯ್ ರಾಜ್, ಹಾಗೂ ಇತರರು ಉಪಸ್ಥಿತರಿದ್ದರು.


Spread the love