Home Mangalorean News Kannada News 2023ರ ಸಾಲಿನ ದಾಂತಿ ಪುರಸ್ಕಾರಕ್ಕೆ ವಿನಿಶಾ ರೊಡ್ರಿಗಸ್ ಇವರ ಎತ್ತಿನ ಗಾಡಿ ಎಕ್ಸ್ ಪ್ರೆಸ್ -2...

2023ರ ಸಾಲಿನ ದಾಂತಿ ಪುರಸ್ಕಾರಕ್ಕೆ ವಿನಿಶಾ ರೊಡ್ರಿಗಸ್ ಇವರ ಎತ್ತಿನ ಗಾಡಿ ಎಕ್ಸ್ ಪ್ರೆಸ್ -2 ಪುಸ್ತಕ ಆಯ್ಕೆ

Spread the love

2023ರ ಸಾಲಿನ ದಾಂತಿ ಪುರಸ್ಕಾರಕ್ಕೆ ವಿನಿಶಾ ರೊಡ್ರಿಗಸ್ ಇವರ ಎತ್ತಿನ ಗಾಡಿ ಎಕ್ಸ್ ಪ್ರೆಸ್ -2 ಪುಸ್ತಕ ಆಯ್ಕೆ

ಉಡುಪಿ: ಕಥೊಲಿಕ್ ಸಭಾ ಉಡುಪಿ ಪ್ರದೇಶ ಇವರು ಕನ್ನಡ ಭಾಶೆಯಲ್ಲಿ ಕ್ರೈಸ್ತ ಸಾಹಿತಿಗಳು ಬರೆದಿರುವ ಪುಸ್ತಕಗಳಿಗೆ ವರ್ಷಪ್ರತಿ ನೀಡಲಾಗುವ ದಿವಗಂತ ದಾಂತಿ ಪುರಸ್ಕಾರಕ್ಕೆ 2023 ನೇ ಸಾಲಿಗೆ ವಿನಿಶಾ ರೊಡ್ರಿಗಸ್ ಇವರ ಎತ್ತಿನಗಾಡಿ ಎಕ್ಸ್ ಪ್ರೆಸ್ – 2 ಪುಸ್ತಕ ಆಯ್ಕೆಯಾಗಿದೆ. ಇದರ ಮೊದಲ ಭಾಗ 2015 ರಲ್ಲಿ ಪ್ರಕಟವಾಗಿದೆ.

ಇಂಗ್ಲಿಷ್ ಸಾಹಿತ್ಯದಲ್ಲಿ ಎಮ್ ಎ ಪದವಿ ಪಡೆದಿರುವ ವಿನಿಶಾ ಪ್ರಸ್ತುತ ಬೆಂಗಳೂರಿನಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಝೀ ಟಿವಿ ಮತ್ತು ದೂರದರ್ಶನ ವಾಹಿನಿಯಲ್ಲಿ ನಾಟಕ, ಯಕ್ಷಗಾನದಲ್ಲಿ ಪಾತ್ರಗಳನ್ನು ಮಾಡಿರುತ್ತಾರೆ. ಕರಾವಳಿ ಕರ್ನಾಟಕದ ಕನ್ನಡ ಕೊಂಕಣಿ ಹಾಗೂ ಇತರ ಭಾಷೆಯ ಪತ್ರಿಕೆಗಳಲ್ಲಿ ಇವರ ಅಂಕಣಗಳು ಪ್ರಕಟವಾಗಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರಾದ ವಿನಿಶಾ ಅವರು ವಿಕ್ಟರ್ ರೊಡ್ರಿಗಸ್ ಮತ್ತು ವಿಕ್ಟೋರಿಯ ಡಿಮೆಲ್ಲೊ ಅವರ ಮಗಳಾಗಿದ್ದು ಬರಹಗಾರ ಪ್ರಮೋದ್ ರೊಡ್ರಿಗಸ್ ಹೊಸ್ಪೆಟ್ ಇವರ ಪತ್ನಿಯಾಗಿದ್ದಾರೆ. ಇವರ ಸಹೋದರಿ ಕೂಡ ಹೆಸರಾಂತ ಸಾಹಿತಿಯಾಗಿದ್ದು ಮುದ್ದು ತೀರ್ಥಹಳ್ಳೀ ಹೆಸರಿನಲ್ಲಿ ಚಿರಪರಿಚಿತರಾಗಿದ್ದಾರೆ.

ಪುರಸ್ಕಾರವು ರೂ 25 ಸಾವಿರ ನಗದಿನೊಂದಿಗೆ ಶಾಲು, ನೆನಪಿನ ಕಾಣಿಕೆಯನ್ನು ಹೊಂದಿದ್ದು, ಜೂನ್ 9 ರಂದು ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ನಡೆಯಲಿರುವ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ವಾರ್ಷಿಕ ಮಹಾಸಭೆಯಲ್ಲಿ ಪ್ರದಾನ ಮಾಡಲಾಗುವುದು ಎಂದು ಪುರಸ್ಕಾರ ಸಮಿತಿ ಸಂಚಾಲಕ ಅಲ್ಪೋನ್ಸ್ ಡಿಕೋಸ್ತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version