2024-25 ನೇ ನಾಡಾ ಐಟಿಐ ಪ್ರವೇಶಕ್ಕೆ ದಿನಾಂಕ ವಿಸ್ತರಣೆ

Spread the love

2024-25 ನೇ ಐಟಿಐ ಪ್ರವೇಶಕ್ಕೆ ದಿನಾಂಕ ವಿಸ್ತರಣೆ

ಕುಂದಾಪುರ: ನಾಡಾದಲ್ಲಿನ ರೇ.ಫಾ.ರೋಬರ್ಟ್ ಕೈಗಾರಿಕಾ ತರಬೇತಿ ಸಂಸ್ಥೆ ( ಐಟಿಐ ) ಗೆ 2024-25ನೇ ಸಾಲಿನ ಪ್ರವೇಶಾವಕಾಶಕ್ಕಾಗಿ ಸೆ.30 ರವರೆಗೆ ದಿನಾಂಕ ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಚಾರ್ಯರ ಜಂಟಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಂಸ್ಥೆಯಲ್ಲಿ ದೆಹಲಿಯ ರಾಷ್ಟ್ರೀಯ ವೃತ್ತಿ ಶಿಕ್ಷಣ ಮಂಡಳಿಯಿಂದ ( ಎನ್‌ಸಿವಿಟಿ ) ಸಂಯೋಜನೆ ಪಡೆದುಕೊಂಡಿರುವ ಎರಡು ವರ್ಷದ ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ಹಾಗೂ ಒಂದು ವರ್ಷದ ಮೆಕ್ಯಾನಿಕ್ ಡಿಸೇಲ್ (ಆಟೋಮೊಬೈಲ್) ಕೋರ್ಸುಗಳಲ್ಲಿ ಕೆಲವೇ ಸೀಟುಗಳು ಉಳಿದಿದ್ದು, ಎಸ್‌ಎಸ್‌ಎಲ್‌ಸಿ ಪಾಸಾಗಿರುವ ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಪ್ರವೇಶಕ್ಕೆ ಅವಕಾಶವಿದೆ.

ಸಂಸ್ಥೆಯಲ್ಲಿ ಪ್ರವೇಶ ಪಡೆದುಕೊಂಡ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ದೊರಕುವ ವಿದ್ಯಾರ್ಥಿ ವೇತನ, ಖಾಸಗಿ ವಿದ್ಯಾರ್ಥಿ ವೇತನ ಪಡೆದುಕೊಳ್ಳಲು, ಸರ್ಕಾರಿ ಹಾಸ್ಟೆಲ್ ಪ್ರವೇಶ ಪಡೆದುಕೊಳ್ಳಲು, ಸರ್ಕಾರಿ ಹಾಗೂ ಖಾಸಗಿ ಬಸ್ಸು ಪಾಸುಗಳನ್ನು ಪಡೆದುಕೊಳ್ಳಲು ಸಂಸ್ಥೆಯಿಂದ ಮಾರ್ಗದರ್ಶನ ಮಾಡಲಾಗುವುದು.

ಒಂದು ಹಾಗೂ ಎರಡು ವರ್ಷಗಳ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿರುವ ಅಭ್ಯರ್ಥಿಗಳಿಗೆ ಪ್ರಸಿದ್ಧ ಕಂಪೆನಿಗಳ ಒಡಂಬಡಿಕೆಯೊಂದಿಗೆ ಕ್ಯಾಂಪಸ್‌ ಸಂದರ್ಶನಕ್ಕೂ ಅವಕಾಶ ಕಲ್ಪಿಸಲಾಗುವುದು. ಆಸಕ್ತರು ಖುದ್ದಾಗಿ ಸಂಸ್ಥೆಗೆ ಬಂದು ಮಾಹಿತಿ ಪಡೆದುಕೊಳ್ಳಬಹುದು ಅಥವಾ ದೂರವಾಣಿ ಸಂಖ್ಯೆ 9113234392 ನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.


Spread the love
Subscribe
Notify of

0 Comments
Inline Feedbacks
View all comments