Home Mangalorean News Kannada News 22 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

22 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

Spread the love

22 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಬೆಳ್ತಂಗಡಿ: ಬೆಳ್ತಂಗಡಿ ಪೊಲೀಸ್‌ ಠಾಣಾ ಹಳೆಯ ಅಪರಾಧ ಪ್ರಕರಣಕ್ಕೆ ಸಂಬಂಧಿಸಿ ಸುಮಾರು 22 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ

ಬಂಧಿತನನ್ನು ಬೆಳ್ತಂಗಡಿ ತಾಲೂಕಿನ ಶಂಕರ ಗೌಡ ಎಂದು ಗುರುತಿಸಲಾಗಿದೆ.

shanker-gowda-belthangadi

ಬೆಳ್ತಂಗಡಿ ಪೊಲೀಸ್‌ ಠಾಣಾ ಹಳೆಯ ಅಪರಾಧ ಪ್ರಕರಣಕ್ಕೆ ಸಂಬಂಧಿಸಿ ಸುಮಾರು 22 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆಳ್ತಂಗಡಿ ಪೊಲೀಸ್‌ ಉಪ ನಿರೀಕ್ಷಕರ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ಮಾನ್ಯ ಪೊಲೀಸ್‌ ಅಧೀಕ್ಷಕರು ದ.ಕ ಜಿಲ್ಲೆ, ಮಾನ್ಯ ಹೆಷ್ಷುವರಿ ಪೊಲೀಸ್‌ ಅಧೀಕ್ಷಕರು, ದ.ಕ ಜಿಲ್ಲೆ ರವರ ನಿರ್ಧೇಶನದಂತೆ, ಮಾನ್ಯ ಪೊಲೀಸ್‌ ಉಪಾಧೀಕ್ಷಕರು ಮತ್ತು ಪೊಲೀಸ್‌ ವೃತ್ತ ನಿರೀಕ್ಷಕರ ಮಾರ್ಗಧರ್ಶನದಲ್ಲಿ ದಿನಾಂಕ: 23.12.2016 ರಂದು ರಾತ್ರಿ ಆತನ ಮನೆಯಿಂದ ದಸ್ತಗಿರಿ ಮಾಡಲಾಗಿದೆ.

ಈತನು 1995ರಲ್ಲಿ ರಾತ್ರಿ ವೇಳೆ ಗಣೇಶ್‌ ಪ್ರಭು ತಂದೆ: ಮಂಜುನಾಥ ಪ್ರಭು, ಅರುಣ ಜ್ಯೋತಿ ಉಜಿರೆ ಎಂಬವರು ಉಜಿರೆಯಲ್ಲಿ ತನ್ನ ಎಸ್‌ಟಿಡಿ ಬೂತಿನಲ್ಲಿ ಕುಳಿತುಕೊಂಡಿರುವಾಗ ತನ್ನ ಪತ್ನಿ ಶ್ರೀಮತಿ ಸಂಧ್ಯಾ ಹಾಗೂ ಮಕ್ಕಳೊಂದಿಗೆ ಅಲ್ಲಿಗೆ ಬಂದು “ನೀವು ನಮ್ಮ ಮನೆ ಬಾಗಿಲನ್ನು ಶಬ್ದ ಮಾಡುತ್ತಿರೋ ಅಂತ ಕೇಳಿದಾಗ, ಗಣೇಶ್‌ ಪ್ರಭು ರವರು ಇಲ್ಲವೆಂದು ಹೇಳಿದಾಗ ಆರೋಪಿ ಶಂಕರ ಗೌಡನ ಪತ್ನಿ ಸಂಧ್ಯಾ ರೂಮಿನ ಹತ್ತಿರ ಬನ್ನಿ ಮಾತನಾಡಲು ಇದೆ ಅಂತ ಕರೆದಿದ್ದರಿಂದ ಗಣೇಶ್‌ ಪ್ರಭು ರವರು ರಾತ್ರಿ 11:15 ಗಂಟೆ ಸಮಯಕ್ಕೆ ಸಂಧ್ಯಾಳ ಮನೆ ಕಡೆ ಹೋಗಿ ಬಾಗಿಲು ತಟ್ಟಿದಾಗ ಬಾಗಿಲು ತೆಗೆಯದೆ ಇದ್ದು ಕಿಟಕಿಯ ಕಡೆ ಹೋಗಿ ಕರೆದಾಗ ಒಳಗಿನಿಂದ ಆರೋಪಿ ಶಂಕರ ಗೌಡನು ಗಣೇಶ್‌ ಪ್ರಭುರವರ ಮುಖಕ್ಕೆ ಮತ್ತು ಬಲಕೈಗೆ ಆ್ಯಸಿಡ್‌ ಎರಚಿರುತ್ತಾನೆ. ಈ ಬಗ್ಗೆ ಗಣೇಶ್‌ ಪ್ರಭು ರವರು ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ 1995 ರಲ್ಲಿ ಪ್ರಕರಣ ದಾಖಲಾಗಿತ್ತು.
ಈ ಆರೋಪಿಯ ಪತ್ತೆಕಾರ್ಯದಲ್ಲಿ ಬೆಳ್ತಂಗಡಿ ಪೊಲೀಸ್‌ ಠಾಣಾ ಪಿಎಸ್‌ಐ ರವಿ ಬಿಎಸ್‌ ನೇತೃತ್ವದಲ್ಲಿ ಪಿಸಿ 607 ರಾಜೇಶ್‌, ಪಿಸಿ 657 ಗಣೇಶ್‌, ಪಿಸಿ 306 ರಾಜ ಬೆಣ್ಣಿ, ಪಿಸಿ 862 ಸಂದೀಪ್‌ ಎಸ್‌ ರವರು ಭಾಗವಹಿಸಿರುತ್ತಾರೆ.


Spread the love

Exit mobile version