24 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಹನೀಫ್ ಮಹಮ್ಮದ್ ಪೋಲೀಸರ ವಶ

Spread the love

24 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಹನೀಫ್ ಮಹಮ್ಮದ್ ಪೋಲೀಸರ ವಶ

ಮಂಗಳೂರು ನಗರದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾಗಿರುವ ಕೊಲೆ ಪ್ರಕರಣ, ಕೊಲೆಯತ್ನ ಪ್ರಕರಣ, ಹಲ್ಲೆ, ಬಲದ್ಗ್ರಹಣ, ದರೋಡೆ, ಕಳ್ಳತನದ ಪ್ರಕರಣ, ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾಗಿರುವ ಕೊಲೆ ಪ್ರಕರಣ, ಕುಶಾಲನಗರ ಪೊಲೀಸ್ ಠಾಣೆಗಳಲ್ಲಿ ವರದಿಯಾಗಿರುವ ದರೋಡೆ ಪ್ರಕರಣ ಹೀಗೇ ಒಟ್ಟು ಸುಮಾರು 24 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿತ ಹನೀಫ್ @ ಮಹಮ್ಮದ್ ಹನೀಫ್ (30) ತಂದೆ. ದಿ. ಉಮ್ಮರಬ್ಬ ವಾಸ. ಮದನಿನಗರ, ಎಂ.ಕೆ.ಸ್ಟೋರ್ ಬಳಿ, ಮುನ್ನೂರು ಗ್ರಾಮ, ಮಂಗಳೂರು ತಾಲೂಕು ಹಾಲಿ ವಾಸ. ಕುಮಾರಂಗಳ ಕೆಸಿನಗರ, ತಲಪಾಡಿ ಗ್ರಾಮ, ಮಂಗಳೂರು ತಾಲೂಕು ಎಂಬಾತನಿಗೆ ಮಾನ್ಯ ನ್ಯಾಯಾಲಯವು ಈಗಾಗಲೇ ವಾರಂಟನ್ನು ಹೊರಡಿಸಿರುತ್ತದೆ.

ವಾರಂಟು ಅಸಾಮಿ ಹನೀಫ್ @ ಮಹಮ್ಮದ್ ಹನೀಫ್ನನ್ನು ದಿನಾಂಕ. 21-7-2018 ರಂದು ಉಳ್ಳಾಲ ದಗರ್ಾ ಪರಿಸರದಲ್ಲಿ ಉಳ್ಳಾಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಗೋಪಿಕೃಷ್ಣ.ಕೆ.ಆರ್. ಮತ್ತು ಪಿಎಸ್ಐ ರವರುಗಳಾದ ಶ್ರೀ ಗುರಪ್ಪ ಕಾಂತಿ ಹಾಗೂ ಶ್ರೀ ವಿನಾಯಕ ತೋರಗಲ್ ಹಾಗೂ ಸಿಬ್ಬಂದಿಯವರು ಪತ್ತೆ ಮಾಡಿ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.

ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಟಿ.ಆರ್.ಸುರೇಶ್, ಐ.ಪಿ.ಎಸ್. ರವರ ನಿದರ್ೇಶನದಂತೆ ಮಾನ್ಯರಾದ ಶ್ರೀ ಹನುಮಂತರಾಯ (ಐಪಿಎಸ್) ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಹಾಗೂ ಉಮಾಪ್ರಶಾಂತ್ (ಡಿಸಿಪಿ ಅಪರಾಧ ಮತ್ತು ಸಂಚಾರ) ರವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಉಪ-ವಿಭಾಗದ ಎ.ಸಿ.ಪಿ. ಶ್ರೀ ಕೆ.ರಾಮರಾವ್ ರವರ ನೇತೃತ್ವದಲ್ಲಿ ಆರೋಪಿಯನ್ನು ಪತ್ತೆ ಮಾಡಿದ್ದಾಗಿರುತ್ತದೆ. ಈ ಕಾಯರ್ಾಚರಣೆಯಲ್ಲಿ ಉಳ್ಳಾಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಕೆ.ಆರ್.ಗೋಪಿಕೃಷ್ಣ, ಪೊಲೀಸ್ ಉಪ-ನಿರೀಕ್ಷಕರಾದ ಶ್ರೀ ಗುರಪ್ಪ ಕಾಂತಿ, ಶ್ರೀ ವಿನಾಯಕ ತೋರಗಲ್, ಮತ್ತು ರಂಜಿತ್ ಸಿಪಿಸಿ, ದಿನೇಶ ಶೆಟ್ಟಿ ಸಿಹೆಚ್ಸಿ, ಪ್ರಶಾಂತ ಸಿಪಿಸಿ, ವಾಸುದೇವ ಸಿಪಿಸಿ, ಚಿದಾನಂದ ಸಿಪಿಸಿ, ಸುರೇಶ ಸಿಪಿಸಿ ರವರು ಸಹಕರಿಸಿರುತ್ತಾರೆ.


Spread the love